ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ-ಮಸರೂರು-ಆಚಾಪುರ ಸಂಪರ್ಕದ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯ್ತಿ ರಸ್ತೆ ಕೆಸರುಗದ್ದೆಯಂತಾಗಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆನವಳ್ಳಿಯಿಂದ ಮಸರೂರು ಮಾಣಿಕರೆ ಹಾಲಬಾವಿ ಕೆಂಚನಾಲ ಆಲುವಳ್ಳಿ ಗಾಳಿಬೈಲು ವಿರಕ್ತಮಠ ಕಮದೂರು ಮಾದಾಪುರ ಕುರುಬರಜಡ್ಡು ಲಕ್ಕವಳ್ಳಿ ಕೆರೆಹಿತ್ತಲು ಗಿಳಾಲಗುಂಡಿ
ಮುರುಘಾಮಠ ಆಚಾಪುರ ಇಸ್ಲಾಂಪುರ ಅಂದಾಸುರ ಹೀಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಸಂಪರ್ಕದ ರಸ್ತೆಯಾಗಿದ್ದು ಈ ರಸ್ತೆಯನ್ನು ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಗಳಿಗೆ ಸಂಪರ್ಕದ ರಸ್ತೆ ದುರಸ್ಥಿಗಾಗಿ ಮನವಿ ಮಾಡಲಾದರೂ ಕೂಡಾ ಯಾರು ಇತ್ತ ಗಮನ ಹರಿಸದೇ ನಿರ್ಲಕ್ಷ್ಯವಹಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.
ಅರಸಾಳು ಕೆಂಚನಾಲ ಗ್ರಾಮ ಒಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಮಣ್ಣು ಜಲ್ಲಿ ಕಾಣದೇ ಎಷ್ಟೊ ವರ್ಷಗಳಾಗಿವೆ ಎಂದು ಗ್ರಾಮದ ಹಿರಿಯ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಸ್ವಾತಂತ್ರ್ಯ ಬಂದು ೮ ದಶಕಗಳಾದರು ಕೂಡಾ ಸರಿಯಾದ ಸಂಪರ್ಕ ರಸ್ತೆಗಳಿಲ್ಲದಿರುವುದು ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಚಕ್ರ ವರಾಹಿ ಮಾಣಿ ಮಡೆನೂರು ಡ್ಯಾಂ ನಿರ್ಮಾಣಕ್ಕಾಗಿ ತಮ್ಮ ಮನೆ ಮಠವನ್ನು ಕಳೆದು ಕೊಂಡು ನಿರಾಶ್ರಿತರಾದ ಸಂತ್ರಸ್ಥ ಕುಟುಂಬಗಳೆ ಹೆಚ್ಚು ವಾಸಿಸುತ್ತಿರುವ ಇಲ್ಲಿನ ಗ್ರಾಮಗಳ ರೈತನಾಗರೀಕರ ಗೋಳು ಕೇಳೊರಿಲ್ಲದ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರುಆರೋಪಿಸಿದರು.
ಈ ಹಿಂದೆ ರಾಜ್ಯದ ವಿಧಾನಸಭಾಧ್ಯಕ್ಷರು ಮತ್ತು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರ ಅಧಿಕಾರಾವಧಿಯಲ್ಲೂ ಈ ರಸ್ತೆಗೆ ಸಾರ್ವಜನಿಕರು ಸಾಕಷ್ಟು ಭಾರಿ ಮನವಿ
ಸಲ್ಲಿಸಲಾಗಿದ್ದರೂ ರಸ್ತೆಯ ದುರಸ್ಥಿಗೆ ಮುಹೂರ್ತ ಕೂಡಿಬಂದಿಲ್ಲ ಹಾಲಿ ಶಾಸಕ ಹರತಾಳು ಹಾಲಪ್ಪನವರು ಇನ್ನಾದರೂ ಈ ಸಂಪರ್ಕ ರಸ್ತೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗುವರೆ ಎಂಬ ಆಶಾಭಾವನೆಯಲ್ಲಿದ್ದು ಮೂರು ವರ್ಷಗಳಾದರೂ ತಮ್ಮ ಆಸೆ ಈಡೇರದಿರುವುದು ಹಲವರ ಅಸಮಾದಾನಕ್ಕೆ ಕಾರಣವಾಗಿದೆ.