Malenadu Mitra
ರಾಜ್ಯಶಿವಮೊಗ್ಗ

ಉಡುತಡಿಯಲ್ಲಿ ಮಹಿಳಾ ವಿವಿ ಅಧ್ಯಯನ ಪೀಠ, ಬಳ್ಳಿಗಾವಿ ಅಭಿವೃದ್ಧಿಗೆ ೧೦ ಕೋಟಿ ನೆರವು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಶಿವಮೊಗ್ಗ: ಶಿಕಾರಿಪುರ ತಾಲೂಕು ಅಲ್ಲಮಪ್ರಭು ಜನ್ಮಸ್ಥಳ ಬಳ್ಳಿಗಾವಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ೫ ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಶುಕ್ರವಾರ ೧೨ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿಯ ೬೫ ಅಡಿ ಎತ್ತರದ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಉಡುತಡಿಯಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಆರಂಭಿಸಲು ೧೦ ಕೋಟಿ ಹಾಗೂ ಶಿವನಪಾದ ಕ್ಷೇತ್ರದ ಅಭಿವೃದ್ಧಿಗೆ ೧೦ ಕೋಟಿ ಕೊಡುವುದಾಗಿ ಹೇಳಿದರು.


ನಾನೆಂಬುದು ಏನೂ ಇಲ್ಲ:

ತಮ್ಮ ಭಾಷಣದ ಬಹುತೇಕ ಸಮಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೊಗಳಿಕೆಗೆ ಮೀಸಲಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನು ಕಷ್ಟದಲ್ಲಿದ್ದಾಗ ಕರೆದು ಶಕ್ತಿ ಕೊಟ್ಟವರು ಯಡಿಯೂರಪ್ಪ. ನಾವೆಲ್ಲ ಅವರ ನೆರಳಲ್ಲೇ ಬೆಳೆದವರು. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದ ದಿನ ಹೇಳಿದ್ದ ಮಾತಿಗೆ ಇಂದಿಗೂ ಬದ್ಧನಾಗಿರುವೆ. ಅವರ ಮಾರ್ಗದರ್ಶನದಲ್ಲೇ ಮುಂದುವರೆಯುವೆ ಎಂದರು.
ನನ್ಮದೇನೂ ಇಲ್ಲ. ಯಡಿಯೂರಪ್ಪ ಅವರೇ ಶಕ್ತಿ. ನಾನು ನಿಮಿತ್ತ ಮಾತ್ರಂ’ ಎಂದು ಹೇಳಿದ ಬಸವರಾಜ ಬೊಮ್ಮಾಯಿ, ’ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿ ಆಗುವ ಪ್ರಶ್ನೆಯೇ ಇಲ್ಲ. ಮಂತ್ರಿ, ಮುಖ್ಯಮಂತ್ರಿ ಆಗುವುದು ಬೇರೆ ಜನನಾಯಕ ಆಗುವುದು ಬೇರೆ. ಯಡಿಯೂರಪ್ಪ ನಿಜವಾದ ಜನನಾಯಕ’ ಎಂದು ಶ್ಲಾಘಿಸಿದರು.’ಕಲ್ಯಾಣ ಕ್ರಾಂತಿಯ ೯ ಶತಮಾನಗಳ ನಂತರ ಶಿವ ಶರಣರ ನಾಡು ಶಿಕಾರಿಪುರ ಹಾಗೂ ಬೀದರ್‌ನ ಬಸವ ಕಲ್ಯಾಣವನ್ನು ಬೆಸೆದ ನಾಯಕನೊಬ್ಬ ಯಡಿಯೂರಪ್ಪ ಅವರ ರೂಪದಲ್ಲಿ ಹುಟ್ಟಿದ್ದಾನೆ’ ಎಂದು ಬಣ್ಣಿಸಿದ ಬೊಮ್ಮಾಯಿ, ಯಡಿಯೂರಪ್ಪ ಸರ್ವ ಸಮಾಜಕ್ಕೂ ನ್ಯಾಯ ಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಸಂಸದ ರಾಘವೇಂದ್ರ, ಶಾಸಕ ಕುಮಾರ್ ಬಂಗಾರಪ್ಪ, ಬಿ.ವೈ.ವಿಜಯೇಂದ್ರ, ಗುರುಮೂರ್ತಿ, ಭಾರತಿ ಶೆಟ್ಟಿ , ಪದ್ಮನಾಭ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯೇಂದ್ರಗೆ ಆಶೀರ್ವಾದ ಬೇಡಿದ ಸಿಎಂ:
ಸರ್ಕಾರಿ ಕಾರ್ಯಕ್ರಮದ ವೇದಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸಂದೇಶ ನೀಡಲು ಬಳಕೆಯಾಯಿತು.
ಈ ಬಾರಿ ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡಿ’ ಎಂದು ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರೆ, ವಿಜಯಣ್ಣನಿಗೆ ಹಾರೈಸಿ ಎಂದು ಸಂಸದ ಬಿ.ವೈ.ರಾಘವೇಂದ್ರ ಕೋರಿದರು. ಸರಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ವಿಜಯೇಂದ್ರ ಇದ್ದ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Ad Widget

Related posts

ಹರಿಹರಪುರದಲ್ಲಿ ಏ.10 ರಿಂದ ಐತಿಹಾಸಿಕ ಕುಂಭಾಭಿಷೇಕ
ಧಾರ್ಮಿಕ ಸಭೆ, ಹಲವು ಸ್ವಾಮೀಜಿಗಳು ಭಾಗಿ

Malenadu Mirror Desk

ಈಡಿಗ ಸಮುದಾಯದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ : ಸತ್ಯಜಿತ್‌ ಸುರತ್ಕಲ್

Malenadu Mirror Desk

ಶಿವಮೊಗ್ಗ ದಸರಾಗೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಾಲನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.