ಸಿಎಂ ಯಡಿಯೂರಪ್ಪ ಪದಚ್ಯುತಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಕಾರಣ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ತಮ್ಮ ಅಂತರಾಳದಲ್ಲಿದ್ದ ಆಕ್ರೋಶವನ್ನು ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಪದಚ್ಯುತಿ ಪರ್ವಕ್ಕೆ ನಾಂದಿ ಹಾಡಿದರು ಎಂದು ಆಪಾದಿಸಿದರು.
ಅಭಿವೃದ್ಧಿ ದೃಷ್ಠಿಯಿಂದ ಯಡಿಯೂರಪ್ಪನವರು ಉಳಿದ ಅವಧಿಗೆ ಮುಂದುವರೆಯಬೇಕೆಂಬುದು ಜಿಲ್ಲೆಯ, ನಾಡಿನ ಬಹುತೇಕ ಜನರ ಅಪೇಕ್ಷೆಯಾಗಿದ್ದು, ತಮ್ಮ ಪಕ್ಷದ ಹಲವು ಪ್ರಮುಖರು ಕೂಡ ಯಡಿಯೂರಪ್ಪನವರ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆದರೆ, ನಮ್ಮ ಜಿಲ್ಲೆಯವರೇ ಆದ ಈಶ್ವರಪ್ಪನವರು ಬಿ.ಎಸ್.ವೈ. ಕೆಳಗಿಳಿಯಬೇಕೆಂದು ಬಯಸಿದ್ದಾರೆ ಎಂದರು.
ಒಂದು ವೇಳೆ ಯಡಿಯೂರಪ್ಪ ಕೆಳಗಿಳಿದು ಕೆ.ಎಸ್. ಈಶ್ವರಪ್ಪನವೇ ಸಿಎಂ ಆದರೆ ಆ ಸ್ಥಾನ ನಿಭಾಯಿಸಲು ಸಾಧ್ಯವೇ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಶಿವಮೊಗ್ಗದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳು ಎಂದರು.
previous post
next post