Malenadu Mitra
ರಾಜ್ಯ ಶಿವಮೊಗ್ಗ

ಪ್ರತಿಯೊಬ್ಬರು ಜಾತಿ ಸಂಕೋಲೆಗಳಿಂದ ಹೊರಬರಬೇಕಿದೆ

ಪ್ರತಿಯೊಬ್ಬರು ಜಾತಿ ಸಂಕೋಲೆಗಳಿಂದ ಹೊರಬರಬೇಕಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಯ ಸಂಕುಚಿತ ಭಾವನೆಯಿಂದ ಹೊರ ಬರಬೇಕಾಗಿದೆ. ಇದೇ ಬಸವಣ್ಣನವರ ತತ್ವವೂ ಆಗಿದೆ ಎಂದರು.
ಬಸವಣ್ಣನವರ ತತ್ವಗಳು ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಾಗೆ ನೋಡಿದರೆ ಇಡೀ ಶಿವಮೊಗ್ಗ ಜಿಲ್ಲೆ ಜಾತಿಗಳ ಸಂಕೋಲೆಯಿಂದ ಬಿಡುಗಡೆ ಹೊಂದಿದೆ. ಇಲ್ಲಿ ಎಲ್ಲ ಜಾತಿಯವರು, ಧರ್ಮದವರು ಸಹೋದರಂತೆ ಬಾಳುತ್ತಿದ್ದಾರೆ. ಹಾಗಾಗಿ ಬಸವಣ್ಣನವರ ಪುತ್ಥಳಿ ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ಹೆಮ್ಮೆಯ ವಿಷಯವೇ ಆಗಿದೆ. ಇದಕ್ಕಾಗಿ ಸಹಕರಿಸಿದ ಸಿಎಂ ಸೇರಿದಂತೆ ಸಚಿವ ಸಂಪುಟಕ್ಕೆ ಅಭಿನಂದನೆಗಳು ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶರಣರ ವಚನಗಳು ಯಾವಾಗಲು ವರ್ತಮಾನದಲ್ಲೇ ಇರುತ್ತವೆ. ಜಿಲ್ಲೆಯಲ್ಲಿ ಒಂದು ಶರಣ ಪರಂಪರೆಯೇ ಇದೆ. ಇಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ನಮ್ಮ ಸೌಭಾಗ್ಯವೇ ಆಗಿದೆ. ಇದೊಂದು ಪುಣ್ಯದ ಕೆಲಸವೂ ಆಗಿದೆ ಎಂದು ಹೇಳಿದರು.
ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿ ಮಾತನಾಡಿ, ಬಸವ ತತ್ವಗಳು ಇಂದು ಲೋಕಪ್ರಿಯವಾಗುತ್ತಿವೆ. ಮನುಕುಲದ ಉದ್ಧಾರಕ್ಕಾಗಿ ಅನುಭವ ಮಂಟಪದ ಮೂಲಕ ಒಂದು ಸಾಮಾಜಿಕ ನ್ಯಾಯ ನೀಡಿದ ಬಸವಣ್ಣನವರ ವಿಚಾರಧಾರೆಗಳು ಎಂದಿಗೂ ಪ್ರಸ್ತುತವಾಗಿವೆ ಎಂದರು.
ಸಕಲ ಜೀವಿಗಳು ಸಮಾನವಾಗಿ ಬದುಕಬೇಕು. ಎಲ್ಲರಿಗೂ ಲೇಸನ್ನು ಬಯಸಬೇಕು. ನುಡಿದಂತೆ ನಡೆಯಬೇಕು. ಅವರ ಕಳಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನವೊಂದೇ ಸಾಕು, ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಹಲವು ಅಡೆ ತಡೆಗಳ ನಡುವೆ ಇಂದು ಬಸವೇಶ್ವರ ಪುತ್ಥಳಿ ಲೋಕಾರ್ಪಣೆಗೊಳ್ಳುತ್ತಿರುವುದು ಒಂದು ಮೈಲಿಗಲ್ಲೇ ಸರಿ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಡಾ. ಮಹಾಂತ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಸ್ವಾಮಿ ವಿನಯಾನಂದ ಸರಸ್ವತಿ, ಅಭಿನವ ಚನ್ನಬಸವ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಆರ್. ಪ್ರಸನ್ನಕುಮಾರ್, ಎಸ್. ರುದ್ರೇಗೌಡ, ಕೆ.ಬಿ. ಅಶೋಕ್ ನಾಯ್ಕ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಪ್ರಮುಖರಾದ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಮಾಜಿ ಮೇಯರ್ ಕೇಬಲ್ ಬಾಬು, ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ಎಸ್.ಎನ್. ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್ ಹಾಗೂ ವೈ.ಹೆಚ್. ನಾಗರಾಜ್ ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಲಂಡನ್ ನಿಂದ ಬಸವಣ್ಣನವರ ಪ್ರತಿಮೆ ತರಲು ಶ್ರಮಿಸಿದ ಮಾಜಿ ಮೇಯರ್ ಏಳುಮಲೈ(ಕೇಬಲ್ ಬಾಬು) ಹಾಗು ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಅವರನ್ನು ಸನ್ಮಾನಿಸಲಾಯಿತು. ಆಯುಕ್ತ ಚಿದಾನಂದ ವಠಾರೆ ಸ್ವಾಗತಿಸಿದರು.

Ad Widget

Related posts

ಧರ್ಮಕೇಂದ್ರಿತ ಸಂಗತಿಗಳಿಂದ ದಾರ್ಶನಿಕರ ಚಿಂತನೆ ಗೌಣ

Malenadu Mirror Desk

ಶಿವಮೊಗ್ಗದಲ್ಲಿ ಮೊದಲ ಲಸಿಕೆ ಯಾರು ತಗೊಂಡ್ರು ಗೊತ್ತಾ ?

Malenadu Mirror Desk

ಶಿವಮೊಗ್ಗದಲ್ಲೂ ಹಕ್ಕಿ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.