ನಾಡಿನ ಪ್ರಮುಖ ಜಲವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರು ಪೂರೈಸುವ ಲಿಂಗನಮಕ್ಕಿ ಜಲಾಶಯಕ್ಕೆ ಶನಿವಾರ ಬೆಳಗ್ಗೆ ಹೊತ್ತಿಗೆ 807.50 ಅಡಿ ನೀರು ಬಂದಿದೆ.
ಶಕ್ತಿನದಿ ಶರಾವತಿ ಕಣಿವೆಯಲ್ಲಿ ನಿರಂತರ ಮಳೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಈ ಬಾರಿ ಆಗಸ್ಟ್ ಮೊದಲ ವಾರದಲ್ಲಿಯೇ ಹೆಚ್ಚಿನ ನೀರು ಬಂದಂತಾಗಿದೆ.
18879 ಕ್ಯೂಸೆಕ್ ಒಳಹರಿವಿದ್ದು, ಡ್ಯಾಮಿನ ನೀರಿನ ಪ್ರಮಾಣ ಏರುಗತಿಯಲ್ಲಿಯೇ ಇದೆ. ಡ್ಯಾಮಿನ ಗರಿಷ್ಠ ಮಟ್ಟ 1819 ಅಡಿಗಳಾಗಿದೆ.
ಭದ್ರಾ ಜಲಾಶಯಕ್ಕೂ 182.4 ಅಡಿ ನೀರು ಬಂದಿದ್ದು, ಕೇವಲ 3 ಅಡಿ ನೀರು ಬಂದರೆ ಡ್ಯಾಮ್ ತುಂಬಲಿದೆ. 7842 ಕ್ಯೂಸೆಕ್ ಒಳ ಹರಿವಿದೆ.
next post