Malenadu Mitra
ರಾಜ್ಯ ಶಿವಮೊಗ್ಗ

ಹಕ್ಕುಪತ್ರಕ್ಕಾಗಿ ಅರಣ್ಯವಾಸಿಗಳ ಅರಣ್ಯರೋದನ

ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅರಣ್ಯವಾಸಿಗಳ ಪ್ರತಿಭಟನೆ

ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು,ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ  ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕಳೆದ ೩೦-೪೦ ವರ್ಷಗಳಿಂದ ಅರಣ್ಯಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನೋಪಾಯ ನಡೆಸುತ್ತಿದ್ದೇವೆ.ಭೂಮಂಜೂರಾತಿಗೆ ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಸಕ್ರಮ ಮಾಡದೇ ರೈತ ವಿರೋಧಿ ನಿಲುವು ತಾಳುತ್ತಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ ೧೩ ವರ್ಷ ಕಳೆದರೂ ರೈತರಿಗೆ ಹಕ್ಕುಪತ್ರ ಸಿಕ್ಕಿಲ್ಲ.ಅಂದು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಾಯ ಮಾಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಈಗ ಬಾಯಿಮುಚ್ಚಿಕೊಂಡಿದ್ದಾರೆ.ಕಳೆದ ೭ ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಂಸದ ರಾಘವೇಂದ್ರ ಅವರು ಸಂಸತ್ತಿನಲ್ಲಿ ಆಗ್ರಹಿಸಿ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಆಗ್ರಹಿಸಬೇಕು ಎಂದು ರೈತರು ಆಗ್ರಹಿಸಿದರು.

ಸೊರಬ ತಾಲೂಕಿನ ಸಿಡ್ಲಿಹಳ್ಳಿ ಗ್ರಾಮದಲ್ಲಿ  ೧೨೧ ಜನ ರೈತರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಕೆಲವರು ಅರಣ್ಯಇಲಾಖೆ ಉನ್ನಾತಾಧಿಕಾರಿಗಳಿಗೆ ನ್ಯಾಯಾಲಯಕ್ಕೆ ಸುಳ್ಳು ದೂರು ಸಲ್ಲಿಸಿದ ಕಾರಣ ರೈತರ ಮೇಲೆ ಸುಳ್ಳು ಕೇಸು ದಾಖಲು ಮಾಡಿದ್ದಾರೆ.ಕೂಡಲೇ ಆ ದೂರನ್ನು ವಾಪಾಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಫಾರಂ ನಂ.೫೦,೫೩,೫೭ ಅರ್ಜಿ ಸಲ್ಲಿಸಿದ ಸುಮಾರು ೧ ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ಕಂದಾಯ ಜಮೀನು ಮಂಜೂರು ಮಾಡಬೇಕು.ಜಿಲ್ಲಾಧಿಕಾರಿಗಳಲ್ಲಿರುವ ಸಾವಿರಾರು ಮೇಲ್ಮನವಿಗಳನ್ನು ಕೂಡಲೇ ಇತ್ಯರ್ಥ ಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಅರಣ್ಯಾಧಿಕಾರಿಗಳು ನಕಲಿ ಪರಿಸರವಾದಿಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕುಪತ್ರ ದೊರೆಯದಂತೆ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ ಶ್ರೀನಿವಾಸ್,ವಿರೇಶ್ ನಾಯ್ಕ್,ಪರಶುರಾಮಪ್ಪ,ಹನುಮಂತಪ್ಪ,ನಾಗರಾಜ್ ಕೆ ಶಿಡ್ಲಿಹಳ್ಳಿ,ಬಸವರಾಜ್ ಶಿಡ್ಲಿಹಳ್ಳಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Ad Widget

Related posts

ಮುಂದಿನ ಚುನಾವಣೆಲಿ ಅಪ್ಪನ ಕನಸು ನನಸು ಮಾಡ್ತೇವೆ: ವಿಜಯೇಂದ್ರ

Malenadu Mirror Desk

ನಿವೃತ್ತ ಅಧಿಕಾರಿಗಳಿಗೆ ಅವಕಾಶ:ಯುವ ವಿದ್ಯಾವಂತರಿಗೆ ಅನ್ಯಾಯ

Malenadu Mirror Desk

ಕಿಮ್ಮನೆಯೊಂದಿಗೆ ಅಧಿಕಾರಿಗಳ ಮಾತಿನ ಚಕಮಕಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.