Malenadu Mitra
ರಾಜ್ಯಶಿವಮೊಗ್ಗಸೊರಬ

ಕುಮಾರ್ ಬಂಗಾರಪ್ಪ ಪುತ್ರಿ ಮದುವೆ, ಯಾರೆಲ್ಲ ಬಂದಿದ್ರು ಗೊತ್ತಾ ?

ಮಾಜಿ ಸಚಿವ ಹಾಗೂ ಸೊರಬ ಶಾಸಕ ಕುಮಾರ ಬಂಗಾರಪ್ಪ ಅವರ ಪುತ್ರಿ ಲಾವಣ್ಯ ಮತ್ತು ಹೈದರಾಬಾದ್‌ನ ಡಾ. ವಿಕ್ರಮಾದಿತ್ಯ ಅಥೆಲಿ ಅವರ ವಿವಾಹವು ಬೆಂಗಳೂರು ಅರಮನೆ ಆವರಣದಲ್ಲಿ ಬುಧವಾರ ವಿಜೃಂಬಣೆಯಿಂದ ನೆರವೇರಿತು. ಕಳೆದ ವರ್ಷವೇ ನಿಕ್ಕಿಯಾಗಿದ್ದ ವಿವಾಹ ಮಹೋತ್ಸವವು ಲಾಕ್‌ಡೌನ್ ಕಾರಣದಿಂದ ಮುಂದೂಡಲಾಗಿತ್ತು.
ಸಂಜೆ ನಡೆದ ಆರತಕ್ಷತೆಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಜಗದೀಶ ಶೆಟ್ಟರ್, ಸಚಿವರಾದ ಮಾಧುಸ್ವಾಮಿ, ಸುಧಾಕರ್ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಚಿತ್ರನಟರಾದ ದರ್ಶನ್, ಉಪೇಂದ್ರ ಸೇರಿದಂತೆ ಅನೇಕ ಕಲಾವಿದರು ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದರು. ಕುಮಾರ್ ಬಂಗಾರಪ್ಪ ಹಾಗೂ ವಿದ್ಯುಲ್ಲತಾ ದಂಪತಿ, ಪುತ್ರ ಅರ್ಜುನ್ ಬಂಗಾರಪ್ಪ ಅತಿಥಿಗಳನ್ನು ಬರಮಾಡಿಕೊಂಡರು. ಶಿವಮೊಗ್ಗ, ಸೊರಬ ಹಾಗೂ ಕರಾವಳಿ ಭಾಗದ ಕುಮಾರ್ ಬಂಗಾರಪ್ಪ ಕುಟುಂಬದ ಆಪ್ತರು, ಬಂಧುಗಳು ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೊರಬ ಪಟ್ಟಣದಲ್ಲಿ ನ.೨೧ ರಂದು ಆರತಕ್ಷತೆ ಕಾರ್ಯಕ್ರಮವನ್ನು ಕುಮಾರ್ ಬಂಗಾರಪ್ಪ ಕುಟುಂಬ ಹಮ್ಮಿಕೊಂಡಿದೆ.

Ad Widget

Related posts

ಎಂಜನಿಯರಿಂಗ್ ಕಾಲೇಜಲ್ಲಿ ಆಂಧ್ರ ಸಚಿವರ ಕನ್ನಡ ಕಲರವ
ಹಳೆಯ ವಿದ್ಯಾರ್ಥಿಗಳು ಜಾಗತಿಕ ಸಮ್ಮಿಲನ

Malenadu Mirror Desk

ಆನಂದಪುರ ಬಳಿ ಭೀಕರ ಅಪಘಾತ- ಇಬ್ಬರು ಸ್ಥಳದಲ್ಲೇ ಸಾವು

Malenadu Mirror Desk

ಶಿವಮೊಗ್ಗದಲ್ಲಿ 12 ಸಾವು, ಸೋಂಕು ಎಷ್ಟು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.