Malenadu Mitra
ರಾಜ್ಯ ಶಿವಮೊಗ್ಗ

ಶಾರದಾ ಅಪ್ಪಾಜಿ ಭದ್ರಾವತಿ ಜೆಡಿಎಸ್ ಅಭ್ಯರ್ಥಿ : ಎಚ್ಡಿಕೆ

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಶಾರದಾ ಅಪ್ಪಾಜಿಗೌಡ ಅವರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ವರಿಷ್ಠ ಹಾಗು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ಮಂಗಳವಾರ ತಾಲೂಕಿನ ಗೋಣಿಬೀಡು ಗ್ರಾಮದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮಾಜಿಶಾಸಕ ದಿ.ಅಪ್ಪಾಜಿಗೌಡರ ಪ್ರಥಮ ಪುಣ್ಯಸ್ಮರಣೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಅಪ್ಪಾಜಿಗೌಡರ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಬೆಂಬಲವಾಗಿನಿಂತಿದ್ದ ಅವರ ಧರ್ಮಪತ್ನಿ ಹಾಗೂ ನನ್ನ ಸಹೋದರಿ ಶಾರದಾ ಅವರನ್ನು ಈ ಕ್ಷೇತ್ರದ ಅಪ್ಪಾಜಿ ಅಭಿಮಾನಿಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಭದ್ರಾವತಿ ಕ್ಷೇತ್ರದಲ್ಲಿ ಅನೇಕ ಶಾಸಕರು ಆಗಿಹೋಗಿದ್ದಾರೆ ಈಗಲೂ ಈ ಕ್ಷೇತ್ರದಲ್ಲಿ ಒಬ್ಬರು ಶಾಸಕರಿದ್ದಾರೆ ಆದರೆ ಅವರೆಲ್ಲರಿಗಿಂತ ದಿವಂಗತ ಮಾಜಿ ಶಾಸಕ ಎಂ.ಜೆ, ಅಪ್ಪಾಜಿಗೌಡ ಹೆಚ್ಚು ಜನಪರ ಕಾಳಜಿಯಿಂದ ಸಮಾಜ ಸೇವೆಸಲ್ಲಿಸಿ ಈಕ್ಷೇತ್ರದ ಜನರ ಮನಸ್ಸನ್ನು ಗೆದ್ದ ಅಪರೂಪದ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೆಳಿದರು. ಮಾಜಿಪ್ರಧಾನಿ ದೇವೇಗೌಡರ ಅಭಿಮಾನಿಯಾಗಿ ಈ ಕ್ಷೇತ್ರದ ಏಳಿಗೆಗೆ ಶ್ರಮಿಸಿದ ಅಪ್ಪಾಜಿಗೌಡರ ಹೆಸರನ್ನು ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣಕ್ಕೆ ನಾಮಕಾರಣ ಮಾಡುವಂತೆ ಮನವಿಸಲ್ಲಿಸಿ ವರ್ಷಕಳೆದರೂ ರಾಜ್ಯಸಕಾರ ಇನ್ನೂ ಅದನ್ನು ಕಾರ್ಯಗತಗೊಳಿಸದಿರುವುದು ವಿಪರ್ಯಾಸ ಎಂದರು.


ಮುಂದಿನ ಮುಖ್ಯಮತ್ರಿ ಕುಮಾರಸ್ವಾಮಿ ಎಂದ ಇಬ್ರಾಹಿಂ


ಮಾಜಿಕೇಂದ್ರಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಹಿಂದೆ ನಾನು ಈ ಕ್ಷೇತ್ರದಲ್ಲಿಯೇ ಸಭೆಯಲ್ಲಿ ದೇವೆಗೌಡರು ಪ್ರಧಾನಿಯಾಗುತ್ತಾರೆಂಬ ಭವಿಷ್ಯನುಡಿದದ್ದು ಅಂದು ನಿಜವಾಯಿತು, ಈಗ ಇಂದು ಇದೇ ಕ್ಷೇತ್ರದಲ್ಲಿ ಅಪ್ಪಾಜಿಗೌಡರ ಪುಣ್ಯಸ್ಮರಣೆಯ ಈಕಾರ್ಯಕ್ರಮದಲ್ಲಿ ಮತ್ತೊಮ್ಮ ಹೇಳುತ್ತಿದ್ದೇನೆ ಜೆಡಿಎಸ್‍ನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ತಂದು ಆ ಮೂಲಕ ದೇವೆಗೌಡರ ತಳಿಯಾದ ಹೆಚ್.ಡಿ.ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಯಾಗುತ್ತಾರೆ ಎಂದು ಹೇಳುವ ಮೂಲಕ ತಾವು ಜೆಡಿಎಸ್ ಸೇರುತ್ತಿರುವುದನ್ನು ಪರೋಕ್ಷವಾಗಿ ಖಚಿತಪಡಿಸಿದರು.

ಗಾಂಧಿ ಜಯಂತಿಯಂದು ರಾಜಕೀಯಕ್ಕೆ ಪಾದಾರ್ಪಣೆ:

ಅದ್ಯಕ್ಷತೆ ವಹಿಸಿ ಮಾತನಾಡಿದ ಶಾರದಾ ಅಪ್ಪಾಜಿಗೌಡ ಅವರು, ನನ್ನ ಪತಿ ಅಪ್ಪಾಜಿ ಅವರು ಮಾಡುತ್ತಿದ್ದ ಜನಸೇವಾ ಕಾರ್ಯವನ್ನು ಮುಂದುವರೆಸುವ ಸಲುವಾಗಿ ನಾನು ಇದೆ ಅಕ್ಟೋಬರ್ 2ರಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಭದ್ರಾವತಿ ಕ್ಷೇತ್ರದ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪ್ರಸನ್ನ ನಾಥಸ್ವಾಮೀಜಿ, ಕನಕಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಬಂಜಾರಪೀಠದ ಸರದಾರ ಸೇವಾಲಾಲ್ ಸ್ವಾಮೀಜಿ, ಶಿವಮೊಗ್ಗ ಸಿಎಸ್‍ಐ ವೇನ್ಸ್ ಮೆಮೋರಿಯಲ್ ಚರ್ಚ್‍ನ ರೆವರೆಂಡ್.ಜಿ.ಸ್ಟ್ಯಾನ್ಲಿ ಹಾಗೂ ಶಿವಮೊಗ್ಗ ದಾರುಲ್ ಇ-ಹಸನ್ ಮದರಸಾ ದ ಪ್ರಿನ್ಸಿಪಲ್ ಮೌಲಾನ ಶಾಹುಲ್ ಹಮೀದ್,
ಜೆಡಿಎಸ್ ನಾಯಕರಾದ ವೈಎಸ್‍ವಿ ದತ್ತಾ, ಎಂ.ಶ್ರೀಕಾಂತ್, ಎಸ್.ಟಿ.ಬಳಿಗಾರ್, ಜೆಡಿಎಸ್ ಅಧ್ಯಕ್ಷ ಆರ್.ಕರುಣಾಮೂರ್ತಿ, ಮುಖಂಡರಾದ ಜಿಪಂಸದಸ್ಯ ಮಣಿಶೇಖರ್, ಮಾಜಿಸದಸ್ಯ ಎಸ್.ಕುಮಾರ್,ಕುಮಾರ್,ಶ್ರೀಧರ್ ಮತ್ತಿತರರಿದ್ದರು.ಜಿಒಪಂ ಸದಸ್ಯ ಯೋಗೇಶ್ ಸ್ವಾಗತಿಸಿ, ಅಪ್ಪಾಜಿಅವರ ಪುತ್ರ ಅಜಿತ್ ಮಂದಿಸಿದರು.

Ad Widget

Related posts

ರಾಜ್ಯ ಬಿಜೆಪಿಯಲ್ಲಿ ಹೆಚ್ಚಾದ ಒಳಬೇಗುದಿ ಯಡಿಯೂರಪ್ಪರನ್ನೇ ಗುರಿಯಾಗಿಸಿತಾ , ಅಡ್ಜಸ್ಟ್ ಮೆಂಟ್ ರಾಜಕಾರಣದ ಆರೋಪ ?

Malenadu Mirror Desk

ಪ್ರೊ.ಬಿ.ಕೃಷ್ಣಪ್ಪ ಆದರ್ಶವಾದಿಯಾಗಿದ್ದರು: ದಸಂಸ ಸುವರ್ಣ ಸಂಭ್ರಮದಲ್ಲಿ ಆಯನೂರು ಮಂಜುನಾಥ್‌ ಹೇಳಿಕೆ

Malenadu Mirror Desk

ಮಳೆನಾಡಾದ ಮಲೆನಾಡು, ಮೈದುಂಬುತ್ತಿರುವ ನದಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.