Malenadu Mitra
ರಾಜ್ಯ ಶಿವಮೊಗ್ಗ

ಈಡಿಗ ಸಮುದಾಯದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ : ಸತ್ಯಜಿತ್‌ ಸುರತ್ಕಲ್

ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಬೆಂಗಳೂರು ಘಟಕಕ್ಕೆ ಚಾಲನೆ

ಈಡಿಗ ಸಮುದಾಯದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಸದಸ್ಯರು ಸೇರಿದಂತೆ ಸಮುದಾಯದ ಯುವಕರು ಮುಂದಾಗಬೇಕೆಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕರೆ ನೀಡಿದರು.

ಬೆಂಗಳೂರಿನಲ್ಲಿಂದು ನಡೆದ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಬೆಂಗಳೂರು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೀಸಲಾತಿಯ ಕೂಗು ಕೇಳಿ ಬರುತ್ತಿದೆ. ಪ್ರಬಲ ಸಮುದಾಯಗಳು 2ಎ ಮೀಸಲಾತಿ ಪಡೆಯಲು ಪ್ರಯತ್ನ ನಡೆಸುತ್ತಿವೆ. ಈಗಲೂ ಅನೇಕ ಸವಲತ್ತುಗಳಿಂದ ವಂಚಿತರಾಗಿರುವ ನಮಗೆ ಇದು ದೊಡ್ಡ ಅಪಾಯಕಾರಿಯಾಗಿದೆ. ಈ ಹಿನ್ನಲೆಯಲ್ಲಿ ಈಡಿಗ ಸಮುದಾಯ ತಮ್ಮ ಸಿಗಬೇಕಾದ ಸವಲತ್ತುಗಳಿಗಾಗಿ ಒಗ್ಗೂಡಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಸಹಾಯಕ ಪೋಲಿಸ್ ಆಯುಕ್ತೆ ರೀನಾ ಸುವರ್ಣ ಮಾತನಾಡಿ, ಈಡಿಗ ಸಮುದಾಯ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯನ್ಬು ನೀಡಿದೆ. 26 ಉಪ ಪಂಗಡಗಳನ್ನು ಒಳಗೊಂಡ ಇಂತಹ ಸಮುದಾಯ ಒಂದೆಡೆಯಲ್ಲಿ ಒಗ್ಗೂಡುವ ಅಗತ್ಯ ವಿದೆ. ಯಾವುದೇ ಪಕ್ಷದಲ್ಲಿ ಯಾರೇ ದೊಡ್ಡದಾಗಿ ಬೆಳದಿದ್ದರೂ ಅವರು ಸಮಾಜದ ವಿಚಾರ ಬಂದಾಗ ಪಕ್ಷ ಬೇದ ಮರೆತು ಕೆಲಸ ನಿರ್ವಹಿಸುವ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಸಮಾಜ ಸೇವಕಿ, ಕಾಂಗ್ರೆಸ್ ಮುಖಂಡೆ ಡಾ. ರಾಜ ನಂದಿನಿ ಕಾಗೋಡು ತಿಮ್ಮಪ್ಪ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಚಿತ್ರನಟ ನಕುಲ್ ಗೋವಿಂದ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುಂಟರಹಳ್ಳಿ, ಖಚಾಂಚಿ ದಿನೇಶ್ ಮಳಲಗದ್ದೆ. ಸಂಘಟನಾ ಕಾರ್ಯದರ್ಶಿ ಗಣೇಶ್, ಭಾಸ್ಕರ್ ಪೂಜಾರಿ, ಮತ್ತಿತರರು ಹಾಜರಿದ್ದರು.

Ad Widget

Related posts

ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಈಗ ಹಂಗಾಮಿ ಸ್ಪೀಕರ್

Maha

ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಕೇಂದ್ರಗಳಲ್ಲಿಯೇ ಅರ್ಜಿ ಸಲ್ಲಿಸಿ: ಹೆಚ್.ಸಿ.ಯೋಗೇಶ್

Malenadu Mirror Desk

ಡಾಕಪ್ಪರಿಗೆ ಜಾನಪದ ಶ್ರೀ ಪ್ರಶಸ್ತಿ ಪ್ರದಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.