Malenadu Mitra
ತೀರ್ಥಹಳ್ಳಿರಾಜ್ಯ

ಸಹನಾ ಕ್ರಿಕೆಟರ್ಸ್‍ನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯ : ಬೆಂಗಳೂರು ಪ್ರಥಮ, ತೀರ್ಥಹಳ್ಳಿ ದ್ವಿತೀಯ,ಕ್ರಮವಾಗಿ 1,50,000 ಹಾಗೂ 75000 ರೂ. ಗೆದ್ದ ತಂಡಗಳು

ಶಿವಮೊಗ್ಗನಗರದ ಗೋಪಾಳ ಬಡಾವಣೆಯ ಸಹನಾ ಕ್ರಿಕೆಟರ್ಸ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಟನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಬೆಂಗಳೂರಿನ ಕುಮಾರ್ ಪ್ರೆಂಡ್ಸ್ ತಂಡ ಪ್ರಥಮ ಹಾಗೂ ತೀರ್ಥಹಳ್ಳಿಯ ಆರ್.ಕೆ .ಸ್ಪೋರ್ಟ್ಸ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡವು. ಗೋಪಾಳದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡ ಒಂದೂವರೆ ಲಕ್ಷ ನಗದು ಬಹುಮಾನ ಗೆದ್ದರೆ ದ್ವಿತೀಯ ಸ್ಥಾನ ಪಡೆದ ತೀರ್ಥಹಳ್ಳಿಯ ತಂಡ 75 ಸಾವಿರ ರೂ.ಗಳನ್ನು ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಒಟ್ಟು 16 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಭಾನುವಾರ ನಡೆದ ಅಂತಿಮ ಸುತ್ತಿನ ಪಂದ್ಯಗಳಲ್ಲಿ ಬೆಂಗಳೂರಿನ ಕುಮಾರ್ ಫ್ರೆಂಡ್ಸ್ ತಂಡ ಮತ್ತು ತೀರ್ಥಹಳ್ಳಿ ತಂಡಗಳು ಫೈನಲ್ ಪ್ರವೇಶಿಸಿದ್ದವು. ಪ್ರಶಸ್ತಿ ಸುತ್ತಿನಲ್ಲಿ ನಡೆದ ತಲಾ 6 ಓವರ್‍ಗಳ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ 48 ರನ್ ಬಾರಿಸಿದ್ದರೆ, ಅದನ್ನು ಬೆನ್ನತ್ತಿದ ತೀರ್ಥಹಳ್ಳಿ ತಂಡ ಕೇವಲ 30 ರನ್ ಗಳಿಸಿ ಸೋಲು ಕಂಡಿತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತೀರ್ಥಹಳ್ಳಿ ತಂಡದ ಕವಿರಾಜ್ ಪಡೆದರೆ, ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಬೆಂಗಳೂರು ತಂಡದ ನವೀನ್, ಉತ್ತಮ ಬೌಲರ್ ಪ್ರಶಸ್ತಿಯನ್ನು ತೀರ್ಥಹಳ್ಳಿ ತಂಡದ ನಿತಿನ್ ಹಾಗೂ ಸುಜಿತ್ ಹಂಚಿಕೊಂಡರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದವೀಧರರ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಪಿ.ದಿನೇಶ್, ಶಿವಟೈರ್ಸ್‍ನ ಮಾಲೀಕರಾದ ಶಿವಕುಮಾರ್, ಉದ್ಯಮಿ ಹೆವನ್‍ಇನ್ ಹಬೀಬ್, ಟೂರ್ನಮೆಂಟ್‍ನ ಆಯೋಜಕರಲ್ಲಿ ಪ್ರಮುಖರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಎನ್.ಎಸ್.ಮಂಜುನಾಥ್, ಸಹನಾ ಕ್ರಿಕೆಟರ್ಸ್‍ನ ಸಂಸ್ಥಾಪಕ ಬಸವೇಗೌಡ, ಅಧ್ಯಕ್ಷ ಇಂದ್ರೇಶ್, ಉಪಾಧ್ಯಕ್ಷ ಫೈರೋಜ್ ಬಾಷಾ, ಖಜಾಂಚಿ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.ರೋಹನ್ ಡಿಕಾಸ್ಟ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು, ಸ್ಪೋರ್ಟ್ಸ್

ಸರಣಿ ಶ್ರೇಷ್ಠ : ಕವಿರಾಜ್ , ತೀರ್ಥಹಳ್ಳಿ

ಉತ್ತಮ ಬ್ಯಾಟ್ಸ್‍ಮನ್ : ನವೀನ್, ಬೆಂಗಳೂರು

ಉತ್ತಮ ಬೌಲರ್ : ನಿತಿನ್ ಹಾಗೂ ಸುಜಿತ್ ತೀರ್ಥಹಳ್ಳಿ

ತೀರ್ಥಹಳ್ಳಿಯ ಆರ್.ಕೆ. ಸ್ಪೋರ್ಟ್ಸ್ ತಂಡ

Ad Widget

Related posts

ಕಾಗೋಡು ತಿಮ್ಮಪ್ಪ ಎಂಬ ಜನರ ನಾಯಕ

Malenadu Mirror Desk

ಶಿವಮೊಗ್ಗ ಲೋಕಸಭೆ ಕ್ಷೇತ್ರ ಅಡವಿಯಂತೆ ನಿಗೂಢ…ಗ್ಯಾರಂಟಿ, ಅಭಿವೃದ್ಧಿ, ಹಿಂದುತ್ವ, ಅನುಕಂಪದ ಅಲೆ..

Malenadu Mirror Desk

ಮತ ನೀಡುವ ಮೂಲಕ ಗೀತಾರ ಉಡಿತುಂಬಿ, ಹಾರನಹಳ್ಳಿಯ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಆಯನೂರು ಮಂಜುನಾಥ್‌ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.