Malenadu Mitra
ರಾಜ್ಯ ಶಿವಮೊಗ್ಗ

ಜನಮನ ಸೆಳೆದ ರೈತ ದಸರಾ. ಎತ್ತಿನ ಗಾಡಿಯಲ್ಲಿ ಬಂದ ಮೇಯರ್

ದಸರಾ ಮಹೋತ್ಸವ ಅಂಗವಾಗಿ ಶಿವಮೊಗ್ಗಮಹಾನಗರ ಪಾಲಿಕೆ ಸೋಮವಾರ ಆಯೋಜಿಸಿದ್ದ ರೈತ ದಸರಾ ಜನಮನ್ನಣೆ ಗಳಿಸಿತು. ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ನಗರದ ಬಸ್ ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಹಸಿರು ಶಾಲಿನ ಹವಾ ಎದ್ದುಕಾಣುತಿತ್ತು. ರೈತರು ಮತ್ತು ರೈತ ನಾಯಕರು ಸಂಭ್ರಮದಿಂದ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ರೈತ ನಾಯಕರಾದ ಕೆ.ಟಿ. ಗಂಗಾಧರ್, ಹೆಚ್.ಆರ್. ಬಸವರಾಜಪ್ಪ, ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಸದಸ್ಯರು ಎತ್ತಿನ ಗಾಡಿಯಲ್ಲಿ ಬಸ್ ನಿಲ್ದಾಣದಿಂದ ಕುವೆಂಪು ರಂಗಮಂದಿರಕ್ಕೆ ಆಗಮಿಸಿದರು.

ಯುವ ಸಂಶೋಧಕ ವಿ ಟೆಕ್ ಮೋಟಾರ್ಸ್ ಸಂಸ್ಥಾಪಕ ತೀರ್ಥಹಳ್ಳಿಯ ಕುಂಟುವಳ್ಳಿ ವಿಶ್ವನಾಥ್ ರೈತ ದಸರಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯಾವುದೇ ರೈತ ದಲ್ಲಾಳಿಗಳ ಮೇಲೆ ಅವಲಂಬಿತ ಆಗಿರಬಾರದು ಎಂದರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮ ರೈತರು ಸಾಕಷ್ಟು ಸಂಕಟ ಅನುಭವಿಸಿದ್ದಾರೆ. ಎಲ್ಲ ರೈತರೂ ಸ್ವಾವಲಂಬಿ ಬದುಕು ಸಾಗಿಸಬೇಕು. ನನ್ನನ್ನು ಬೆಳೆಸಿದ ರೈತರು ಕಷ್ಟ ಪಡಬಾರದು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು. ರೈತ ದಸರಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಚೆನ್ನಬಸಪ್ಪ, ಸುರೇಖಾ ಮುರುಳೀಧರ, ಸುವರ್ಣ ಶಂಕರ್, ನಾಗರಾಜ ಕಂಕಾರಿ, ಯಮುನಾ ರಂಗೇಗೌಡ, ವಿಶ್ವನಾಥ, ಹೆಚ್.ಸಿ.ಯೋಗೀಶ್ ಮತ್ತಿತರರು ಹಾಜರಿದ್ದರು.

ದೇಶದಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳು, ಸಾವಿರಾರು ಮಂದಿ ವಿಜ್ಞಾನಿಗಳು ಇದ್ದಾರೆ. ಸಂಶೋಧನೆಗೆಂದೇ ಕೋಟ್ಯಂತರ ರೂ. ಬಿಡುಗಡೆ ಆಗುತ್ತಿದೆ. ಆದರೆ ಎಲ್ಲಾ ಸೌಲಭ್ಯ ಇದ್ದರೂ ಅವರುಗಳಿಂದ ಸಾಧ್ಯವಾಗದ ಸಾಧನೆಯನ್ನು ಕುಂಟುವಳ್ಳಿ ವಿಶ್ವನಾಥ್ ಮಾಡಿದ್ದಾರೆ

-ಕೆ.ಟಿ.ಗಂಗಾಧರ, ರೈತ ಮುಖಂಡ

ಹಿಂದೆ ರೈತರು ಯಾರ ಮೇಲೂ ಅವಲಂಬಿತ ಆಗಿರಲಿಲ್ಲ. ಯಂತ್ರಗಳೂ ಇರಲಿಲ್ಲ. ಸಾಲ ಮಾಡಿಕೊಂಡಿರಲಿಲ್ಲ. ಕೊಟ್ಟಿಗೆ ಗೊಬ್ಬರ ಇತ್ತು. ಮನೆಯಲ್ಲೇ ಎಲ್ಲಾ ಧಾನ್ಯಗಳು ಬೀಜ ಸಂಗ್ರಹ ಇತ್ತು. ಈಗ ಅದೆಲ್ಲವೂ ಮರೆಯಾಗಿದೆ. ಎತ್ತಿನ ಗಾಡಿ, ನೇಗಿಲು, ಕುಂಟೆ ಯಾವುದೂ ಕಾಣುತ್ತಿಲ್ಲ. ಮುಂದೊಂದು ದಿನ ಇವೆನ್ನೆಲ್ಲಾ ಮಕ್ಕಳಿಗೆ ಮ್ಯೂಸಿಯಂನಲ್ಲಿ ತೋರಿಸಬೇಕಾದ ಸ್ಥಿತಿ ಬಂದಿದೆ. ಹಾಲು ಕೂಡಾ ಡೈರಿಯಿಂದ ಬರುತ್ತದೆ ಎಂದು ಎಷ್ಟೋ ಮಕ್ಕಳು ಭಾವಿಸಿದ್ದಾರೆ. ಹಾಗಾಗಿ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಪೀಳಿಗೆಗೆ ನೀಡಬೇಕಿದೆ
-ಹೆಚ್.ಆರ್. ಬಸವರಾಜಪ್ಪ , ರಾಜ್ಯ ರೈತ ಸಂಘದ ಗೌರವಾಧ್ಯಕ್ಷ

Ad Widget

Related posts

ಕೊರೊನ ಸಂತ್ರಸ್ಥರ ನೋವಿಗೆ ಮಿಡಿದ ಮಲೆನಾಡಿಗರು

Malenadu Mirror Desk

ಬ್ಯಾರಿಮಹಲ್ ಮೇಲೆ ನಿಮಗೇಕಿಷ್ಟು ಪ್ಯಾರ್ ?, ಪಾಲಿಕೆಯಲ್ಲಿ ಮೇಯರ್, ಕಮೀಷನರ್ ಮಾತಿಗೆ ಬೆಲೆ ಇಲ್ಲವೆ ?

Malenadu Mirror Desk

ಎಣ್ಣೆ, ದಿನಸಿ ಇಂದೇ ಖರೀದಿಸಿ, ತಪ್ಪಿದರೆ ಒಂದು ವಾರ ನಿಮಗೆ ಸಿಗಲ್ಲ ಶಿವಮೊಗ್ಗದಲ್ಲಿ ಜೂ.6ರತನಕ ಸಂಪೂರ್ಣ ಲಾಕ್‍ಡೌನ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.