Malenadu Mitra
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ಸಂಸ್ಕಾರದ ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ

ಸಂಸ್ಕಾರದ ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ನಾರಾಯಣ ಗುರುಗಳು ಶತಮಾನದ ಹಿಂದೆ ಸಾರಿದ ಸಂದೇಶ ಪ್ರತಿಯೊಬ್ಬರು ಪಾಲಿಸಬೇಕು. ಆ ಮೂಲಕ ಶೈಕ್ಷಣಿಕ ಬದಲಾವಣೆ ಸಾಧ್ಯ ಎಂದು ಧರ್ಮಸ್ಥಳ ಶ್ರೀ ರಾಮಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಭಾನುವಾರ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಆಯೋಜಿಸಿದ್ದ ಈಡಿಗರ ಸಮುದಾಯದ 26 ಉಪಜಾತಿಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಆದ್ಯಾತ್ಮದ ಬಲದಿಂದ ಸಂಘಟನೆಗೆ ಭದ್ರ ಬುನಾದಿ ಹಾಕಬಹುದು. ಸಂಸ್ಕಾರದ ಸಂಪಾದನೆಯಿಂದ ಸಮುದಾಯ ಸಂಘಟನೆ ಬಲಗೊಳ್ಳಬೇಕು. ಧರ್ಮದ ಅಂತರಾಳದೊಳಗೆ ನಿಜವಾದ ಸುಖ, ಶಾಂತಿ, ನೆಮ್ಮದಿ ಇದೆ. ಗುರುಗಳ ಸಂದೇಶದೊಂದಿಗೆ ಸಂಘಟನೆ ಬಲಗೊಳ್ಳಲಿ. ಯಾವುದೇ ಜಾತಿಯ ವಿರುದ್ದದ ಸಂಘಟನೆ ಆಗಬಾರದು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ಶಾಸಕ, ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಗೌರವಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ರಾಜ್ಯದಲ್ಲಿನ 3ನೇ ಅತಿದೊಡ್ಡ ಜನಾಂಗವಾದರೂ ಸಂಘಟನೆ ಇಲ್ಲವಾಗಿದೆ. ಗಂಗಾವತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಪೀಠ ಆರಂಭಿಸುವ ಸರ್ಕಾರಕ್ಕೆ ನಾರಾಯಣ ಗುರು ಪೀಠ ಸ್ಥಾಪಿಸಲು ಮನವಿ ಮಾಡಲಾಗಿದೆ. ಶಾಲೆಗಳಲ್ಲಿ ನಾರಾಯಣ ಗುರು ಜಯಂತಿ ಆಚರಣೆಯನ್ನು ಕಡ್ಡಾಯಗೊಳಿಸಲು ಅಗ್ರಹಿಸುತ್ತೇವೆ ಎಂದರು.

ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಕರ್ನಾಟಕ ಆರ್ಯ ಈಡಿಗ ಸಂಘದ ಅದ್ಯಕ್ಷ ಡಾ. ಎಂ. ತಿಮ್ಮೇಗೌಡ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಧ್ಯಕ್ಷ ಸತ್ಯಜಿತ್‌ ಸುರತ್ಕಲ್, ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ ಮತ್ತಿತರರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ನಾರಾಯಣ ಗುರು ವಿಚಾರ ವೇದಿಕೆ ಅದ್ಯಕ್ಷ ವಿಶಾಲ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ರಾಜ್ಯ ಆರ್ಯ ಈಡಿಗ ಸಂಘದ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಉದ್ಯಮಿ ಡಾ ಗೋವಿಂದ ಬಾಬು ಪೂಜಾರಿ, ಚಿತ್ರ ಸಾಹಿತಿ ಕವಿರಾಜ್, ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಇದರೇಗೋಡು, ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿನ ಮನೆ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಹೊದಲ ಶಿವು ಸ್ವಾಗತಿಸಿ, ಲತಾ ರಾಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಈಡಿಗ ಸಂಘ ಪ್ರತಿ ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ಉದ್ದೇಶಿಸಿದೆ. ಸರ್ಕಾರ ಅದಕ್ಕೆ ಜಾಗ ನೀಡಬೇಕು. ಈಡಿಗ ಸಮೂದಾಯದ ಎಲ್ಲಾ ಉಪಪಂಗಡಗಳನ್ನು ಒಟ್ಟುಗೂಡಿಸಲಾಗುತ್ತದೆ. ಸಮುದಾಯದ ಹೆಸರಿನಲ್ಲಿ ಈಡಿಗರ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಡಾ. ಎಂ ತಿಮ್ಮೇಗೌಡ

ಇಂತವರೆ ಮುಖ್ಯಮಂತ್ರಿ, ಮಂತ್ರಿ ಎಂದು ಸ್ವಾಮೀಜಿಗಳು ಹೇಳಬಾರದು. ಸ್ವಾಮೀಜಿಗಳು ಪ್ರಜಾ ಪ್ರತಿನಿಧಿಯಲ್ಲ. 50 ಸ್ವಾಮೀಜಿಗಳು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಸುತ್ತುವರೆದಿದ್ದು ತಪ್ಪು. ಆಶೀರ್ವಚನ, ಸತ್ಸಂಗ, ಆಶೀರ್ವಚನ ನೀಡುವುದು ಸ್ವಾಮೀಜಿಗಳ ಕೆಲಸ

ಶ್ರೀ ಬ್ರಹ್ಮಾನಂದ ಸ್ವಾಮೀಜಿ

Ad Widget

Related posts

ಶರಾವತಿ ಸಂತ್ರಸ್ತರ ಬದುಕಿನೊಂದಿಗೆ ಸರಕಾರ ಚೆಲ್ಲಾಟ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ

Malenadu Mirror Desk

ಬಂಗಾರಪ್ಪ ಕನಸು ನನಸು, ಮಂತ್ರಿಯಾದ ಮಧುಬಂಗಾರಪ್ಪ, ತಂದೆಯಂತೆ ಜನರನ್ನು ಪ್ರೀತಿಸುವ ಪುತ್ರ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 4 ಸಾವು, 193 ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.