ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ಜನಸಾಮಾನ್ಯರಿಗೆ ತಲುಪಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಮುಂಬರುವ ಹಬ್ಬದ ಪ್ರಯುಕ್ತ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಕೋ.ಆಪರೇಟಿವ್ ಬ್ಯಾಂಕ್ ಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಾಲ ಸಂಪರ್ಕ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದ ಆರ್ಥಿಕ ಸೇವಾ ಇಲಾಖೆ ಮತ್ತು ಆರ್ಥಿಕ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದ ೩೧ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊರೋನಾದಿಂದ ವಿಶ್ವದ ಅನೇಕ ದೇಶಗಳು ಆರ್ಥಿಕ ಸಂಕಷ್ಟದಲ್ಲಿ ಇರುವ ಸಮಯದಲ್ಲು ಭಾರತ 9.1ಜಿಡಿಪಿ ಸಾಧನೆ ಮಾಡಿ ವಿಶ್ವದ ಗಮನ ಸೇಳೆದಿದೆ. ಪ್ರಧಾನಿ ಮೋದಿಯವರು ದೇಶದ ಕಟ್ಟಕಡೆಯ ವ್ಯಕ್ತಿಗೆ ಬ್ಯಾಂಕಿನ ಸೌಲಭ್ಯ ಸಿಗಬೇಕೆಂಬ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಕೃಷಿ ಸಾಲ, ಗೃಹ ಸಾಲ, ವಾಹನ ಸಾಲ, ಎಂ.ಎಸ್.ಎಂ.ಇ ಹಾಗೂ ವಿವಿಧ ಸಾಲಗಳನ್ನು ನೀಡುವಲ್ಲಿ ಬ್ಯಾಂಕ್ ಗಳು ಶೇಕಡವಾರು ಪ್ರಗತಿ ಸಾಧಿಸಿದೆ ಆದರೆ ಶಿಕ್ಷಣ ಸಾಲದಲ್ಲಿ ಶೇಕಡ 55ರ ಗುರಿ ಮುಟ್ಟಿದೆ. ಎಲ್ಲಾ ಬ್ಯಾಂಕ್ ಗಳು ಶಿಕ್ಷಣ ಕೇತ್ರಕ್ಕೂ ಹೆಚ್ಚಿನ ಸಾಲನೀಡಿ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಬೇಕಾಗಿದೆ ಎಂದರು.ಕೊರೋನ ಸಂದರ್ಭದಲ್ಲಿ ಅನೇಕ ಒತ್ತಡಗಳ ನಡುವೆಯು ಬ್ಯಾಂಕ್ ಸಿಬ್ಬಂದಿಗಳು ಶಕ್ತಿಮೀರಿ ಕೊರೋನಾ ವಾರಿಯರ್ಸ್ ಗಳಾಗಿ ಶ್ರಮ ಪಟ್ಟಿದ್ದಾರೆ. ಎಳನೀರು ಮಾರುವವನು ಕೂಡ ಈಗ ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇ ಕಾಮರ್ಸ್ ಮಾರ್ಕೇಟಿಂಗ್ ನಲ್ಲಿ ದೇಶದ ಶೇ. 30 ಜನ ಖರೀದಿ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳು ಆನ್ ಲೈನ್ ವ್ಯಾಪ್ತಿಗೆ ಸೇರಿ ಡಿಜಿಟಲೀಕರಣಗೊಂಡಿದೆ. ಕೃಷಿ ಕೇತ್ರಕ್ಕೆ ಶೇ.96 ರಷ್ಟು ಸಾಲದ ಗುರಿ ಸಾಧಿಸಲಾಗಿದೆ ಎಂದರು.
ಕೃಷಿ ಮೂಲಸೌಕರ್ಯ ನಿಧಿ, ಪಿಎಂ ಸ್ವನಿಧಿ, ಸ್ಠಾಂಡ್ ಆಫ್ ಇಂಡಿಯ ಮುಂತಾದ ಯೋಜನೆಗಳಿಗೆ ಸ್ಥಳದಲ್ಲೆ ಸಾಲನೀಡಲು ನಿರ್ದೇಶಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಪಲಾನುಭವಿಗಳಿಗೆ ಸಾಲ ಮಂಜುರಾತಿ ಪತ್ರವನ್ನು ವಿತರಿಸಲಾಯಿತು .
ಕಾರ್ಯಕ್ರಮದಲ್ಲಿ ಕೆನರಾಬ್ಯಾಂಕ್ ಜಿಎಂ ರಾಮನಾಯ್ಕ, ಕರ್ನಾಟಕಬ್ಯಾಂಕ್ ಜಿಎಂ ರಾಘವೇಂದ್ರ ಉಡುಪ, ಕೆನರಾಬ್ಯಾಂಕ್ ಡಿಜಿಎಂ ಸಿದ್ದೇಶಪ್ಪ, ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕ್ ಗಳ ಸಾಮಾಜಿಕ ಕಳಕಳಿಯಿಂದ ಕೌಶಲ್ಯಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿದೆ. ಪಿಎಂ ಜನ ಸುರಕ್ಷ ಯೋಜನೆಗಳನ್ನು ಹೆಚ್ಚು ಪ್ರಚಲಿತಗೊಳಿಸಲು ಮತ್ತು ಸಾಮಾಜಿಕ ಭದ್ರತೆ ಯೋಜನೆಗಳಾದ ಪಿಎಂ ಜೆಡಿವೈ ಹಾಗೂ ಪಿಎಂ ಜೆಜೆಬಿವೈ ಮತ್ತು ಎಪಿವೈ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗಿದೆ
– ಬಿ.ವೈ ರಾಘವೇಂದ್ರ, ಸಂಸದ