ಆವಿಷ್ಕಾರ, ಮತ್ತು ತಂತ್ರಜ್ಞಾನ ಎರಡನ್ನೂ ಒಪ್ಪಿ ಸ್ವೀಕರಿಸುತ್ತಿರುವ ನಾವು ಸಂಪ್ರದಾಯವನ್ನೂ ಕೂಡ ಆಚರಿಸುತ್ತಿರುವುದು ಸೋಜಿಗ, ಆಶ್ಚರ್‍ಯ ಮತ್ತು ಆಘಾತಕಾರಿ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಅವರು ಶಿವಮೊಗ್ಗ ನಗರದಲ್ಲಿ ಬುಧವಾರ ನಡೆದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಮೊದಲ ರಾಜ್ಯಮಟ್ಟದ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.
ಆಧುನಿಕ ಸಲಕರಣೆ, ಸಾಧನೆಗಳನ್ನು ಬಳಸುವ ನಾವು ಆಚರಣೆಯನ್ನು ಮಾತ್ರ ಪ್ರಾಚೀನತೆಯನ್ನಾಗಿಸಿದ್ದೇವೆ. ಇದನ್ನು ಹೋಗಲಾಡಿಸಲು ವೈಜ್ಞಾನಿಕ ಮನಸ್ಸು ಬೇಕು. ಆದರೆ ಭ್ರಮೆ ಸೃಷ್ಟಿಸುವ ಕೆಲಸ ಇನ್ನೊಂದೆಡೆ ನಡೆಯುತ್ತಿದೆ ಎಂದು ಹೇಳಿದರು.
ಮುರುಘಾಮಠವು ಆದಿ ಕಾಲದಿಂದಲೂ ಮೂಢನಂಬಿಕೆ ಮತ್ತು ಸಂಪ್ರದಾಯಗಳನ್ನು ದೂರೀಕರಿಸುವ ಹಲವಾರು ಕಾರ್‍ಯಕ್ರಮಗಳನ್ನು ಸದಾ ನಡೆಸುತ್ತಲೇ ಬಂದಿದೆ. ಯಾವುದೇ ಮಠ, ಮಂದಿರಕ್ಕೆ ಹೋಗದ ಎಚ್. ನರಸಿಂಹಯ್ಯ ಈ ಮಠಕ್ಕೆ ಬಂದಿದ್ದು ಇದೇ ಕಾರಣಕ್ಕೆ ಎನ್ನುವುದನ್ನು ನೆನಪಿಸಿದ ಅವರು, ಮಠವು ಆಷಾಢದಲ್ಲಿ ಮದುವೆ ಮಾಡಿಸಿದೆ. ಸೂರಗ್ರಹಣ ಮತ್ತು ಚಂದ್ರಗ್ರಹಣದಂದು ಆಹಾರ ಸೇವನೆ, ಮದುವೆ ಮಾಡಿಸಿದೆ. ಅಮಾವಾಸ್ಯೆಯ ಮಧ್ಯರಾತ್ರಿ ಸ್ಮಶಾನದಲ್ಲಿ ಸಮಾಧಿ ಮೇಲೆ ಸಭೆ ನಡೆಸಿದೆ, ಮಹಿಳೆಯರಿಗೆ ಪ್ರವೇಶವೇ ಇಲ್ಲದ ದೇಗುಲಗಳಿಗೆ ಪ್ರವೇಶ ಕೊಡಿಸಿದೆ, ಮಹೇಶ್ವರ ಜಾತ್ರೆಯಲ್ಲಿ ಮಹಿಳೆಯರಿಗೆ ಪ್ರಸಾದ ನಿಷಿದ್ಧವಿದ್ದರೂ ಅದನ್ನು ಕೊಡಿಸಿದೆ. ಈ ಮೂಲಕ ಮೌಢಗಳನ್ನು ತೊಡೆದುಹಾಕಲು ಹೆಜ್ಜೆ ಇಟ್ಟಿದ್ದನ್ನು ವಿವರಿಸಿದರು.
ಪ್ರಯೋಗವೇ ಜೀವನವಾಗಬೇಕು, ಸಾಧನೆಯಾಗಬೇಕು. ಭ್ರಮೆಯಿಂದ ಹೊರಬರಬೇಕು. ಭಯ ಬಿಡಬೇಕು. ವೈಜ್ಞಾನಿಕ ಸತ್ಯವನ್ನು ಅರಿಯುವವರಾಗಬೇಕು ಎಂದರು.
ಇನ್ನೊಬ್ಬ ಅತಿಥಿ ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಸಮಾನತೆ, ಸರ್ವೋದಯ, ಮತ್ತು ಪೂರ್ಣದೃಷ್ಟಿಯಿಂದ ಮೌಢ್ಯ ನಿವಾರಣೆ ಸಾಧ್ಯ ಎಂದು ಕುವೆಂಪು ಮತ್ತು ಎಚ್. ನರಸಿಂಹಯ್ಯ ನಂಬಿದ್ದರು. ಅವರ ಜನ್ಮದಿದನದಂದೇ ಇಂತಹ ಸಮಾವೇಶದ ಮೂಲಕ ಇನ್ನಷ್ಟು ವೈಚಾರಿಕ ಪ್ರಜ್ಞೆಯನ್ನು ಹರಡುವ ಕೆಲಸ ನಡೆಸಿರುವುದು ಶ್ಕಾಘನೀಯ. ವೈಚಾರಿಕ ಚಿಂತನೆಯ ಜೊತೆಗೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕವೂ ಸೇರಿದಾಗ ಮನುಷ್ಯ ಹೊಸತನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಬಡತನ, ಹಸಿವು ಮೌಢ್ಯತೆಗೆ ಮೂಲ ಕಾರಣ. ಜ್ಞಾನದ ಬಲದಿಂದ ಈ ಅಜ್ಞಾನದ ಕೇಡುಗಳನ್ನು ನಿವಾರಿಸಬೇಕಿದೆ. ವಿಜ್ಞಾನ ಎನ್ನುವುದು ನೈಜತೆ. ಇದು ಊಹಾತ್ಮಕವೂ ಅಲ್ಲ, ಧರ್‍ಮವೂ ಅಲ್ಲ. ಭಯ ಮತ್ತು ದಾಸ್ಯದಿಂದ ಹೊರಬರಲು ವಿಜ್ಞಾನ ಅವಶ್ಯವಾಗಿದೆ. ದಾಸರು, ಶರಣರು ಮತ್ತು ಕವಿಗಳು ಇದನ್ನೇ ಹೇಳಿದ್ದಾರೆ. ಅವರ ಮಾತುಗಳು ನಮಗೆ ಪ್ರೇರಣೆಯಾಗಬೇಕೆಂದರು.
ಈ ಸಂದರ್ಭದಲ್ಲಿ ಎಚ್. ನರಸಿಂಹಯ್ಯ ಪ್ರಶಸ್ತಿಯನ್ನು ೩೫ ಜನರಿಗೆ ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಮಾಜಿ ಸ ಚಿವ ಕಲಬುರಗಿಯ ಎಸ್. ಕೆ. ಕಾಂತಾ ಮಾತನಾಡಿದರು.
ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷ ಡಾ. ಕಿರಣ್‌ಕುಮಾರ್, ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಮೊದಲಾದವರಿದ್ದರು.
ಮುಂದಿನ ವರ್ಷದ ಸಮ್ಮೇಳನ ತುಮಕೂರಿನಲ್ಲಿ
ಶಿವಮೊಗ್ಗ: ಮುಂದಿನ ವರ್ಷದ ಸಮ್ಮೇಳನವನ್ನು ತುಮಕೂರಿನಲ್ಲಿ ನಡೆಸಲು ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ವಿಜ್ಞಾನಗ್ರಾಮಕ್ಕೆಅವಶ್ಯವಿರುವ ಭೂಮಿಯನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. . ಮುಂದಿನ ವರ್ಷದಿಂz ರಾಜ್ಯಮಟ್ಟದಲ್ಲಿ ಮಕ್ಕಳ ವೈಜ್ಞಾನಿಕ ಸಮ್ಮೇಳನ ನಡೆಸಬೇಕು. ಮಂಡ್ಯದಲ್ಲಿ ಪ್ರಥಮ ಮಕ್ಕಳ ವೈಜ್ಞಾನಿಕ ಸಮ್ಮೇಳನ ಆಯೋಜಿಸಬೇಕು. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಪರಿಷತ್ ಘಟಕ ರಚಿಸಲು ನಿರ್ಧರಿಸಲಾಯಿತು.
ರಾಜ್ಯದಎಲ್ಲಜಿಲ್ಲಾ ಮತ್ತುತಾಲೂಕು, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರಿಗೆ ನಾಯಕತ್ವ ಶಿಬಿರ ನಡೆಸಬೇಕು. ಮಹಿಳಾ ಘಟಕಗಳ ರಚನೆ ಮಾಡುವುದರ ಬದಲಾಗಿಎಲ್ಲಜಿಲ್ಲಾ ಮತ್ತುತಾಲೂಕು ಸಮಿತಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲು ನಿರ್ಧರಿಸಲಾಯಿತು. ರಾಜ್ಯದಎಲ್ಲ ತಾಲೂಕುಗಳಲ್ಲಿಯು ಒಂದೊಂದುಗ್ರಾಮವನ್ನುತೆಗೆದುಕೊಂಡು ವೈಚಾರಿಕಾಜಾಗೃತಿ ಮೂಡಿಸುವ ಅಭಿಯಾನ ನಡೆಸಲು ಉದ್ದೇಶಿಸಲಾಯಿತು.