Malenadu Mitra
ರಾಜ್ಯಶಿವಮೊಗ್ಗಸಾಗರಹೊಸನಗರ

ಪ್ರಕಾಶ್‌ಟ್ರಾವೆಲ್ಸ್ ಮಾಲೀಕ ನಿಗೂಢ ನಾಪತ್ತೆ, ಪಟಗುಪ್ಪ ಸೇತುವೆ ಬಳಿ ಕಾರು, ಮೊಬೈಲ್ ಪತ್ತೆ

ಶಿವಮೊಗ್ಗದ ಪ್ರತಿಷ್ಠಿತ ಪ್ರಕಾಶ್ ಟ್ರಾವೆಲ್ಸ್‌ನ ಮಾಲೀಕರಾದ ಪ್ರಕಾಶ್ ಅವರು ಶುಕ್ರವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಸಾಗರದಿಂದ ಕಾರಿನಲ್ಲಿ ಒಬ್ಬರೇ ಹೊರಟಿದ್ದು, ಕಾರು ಹೊಸನಗರ ತಾಲೂಕು ಪಟಗುಪ್ಪ ಸೇತುವೆ ಬಳಿ ಪತ್ತೆಯಾಗಿದೆ. ಮೊಬೈಲ್ , ಚಪ್ಪಲಿ ಸೇತುವೆ ಸಮೀಪ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಕಾಶ್ ಅವರು, ಸಾಗರದಿಂದ ಹುಲಿದೇವರ ಬನದ ಮೂಲಕ ಹಾದು ಹೋಗಿದ್ದು, ಅಲ್ಲಿನ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಕುಟುಂಬಸ್ಥರು ಮಾಡಿದ್ದ ಕರೆಗೆ ಸ್ಪಂದಿಸದೇ ಇರುವಾಗ ಅನುಮಾನ ಬಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಅಗ್ನಶಾಮಕದಳ ಹಾಗೂ ಪೊಲೀಸರು ಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಕಾಶ್‌ಅವರಿಗೆ ಆರ್ಥಿಕ ಮತ್ತು ಅನಾರೋಗ್ಯ ಸಮಸ್ಯೆ ಇತ್ತೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಏನಾದರು ಅಚಾತುರ್ಯ ಮಾಡಿಕೊಂಡಿರಬಹುದೆ ಎಂಬ ನೆಲೆಯಲ್ಲಿಯೂ ತನಿಖೆ ಮುಂದುವರಿದಿದೆ. ಆದರೆ, ಈ ವಿಚಾರವನ್ನು ಅಲ್ಲಗಳೆಯುತ್ತಿರುವ ಪ್ರಕಾಶ್‌ರನ್ನು ಬಲ್ಲವರು, ಕೊರೊನಾದ ಹೊಡೆತದಲ್ಲಿಯೇ ಯಾವುದಕ್ಕೂ ಜಗ್ಗಲಿರಲಿಲ್ಲ ಎನ್ನುತ್ತಿದ್ದಾರೆ.

Ad Widget

Related posts

ಜುಲೈ 1 ರಂದು ವಿಂಡೋಸೀಟ್ ಬಿಡುಗಡೆ, ಮಲೆನಾಡಿನಲ್ಲಿಯೇ ಹೆಚ್ಚು ಚಿತ್ರೀಕರಣ: ನಿರ್ದೇಶಕಿ ಶೀತಲ್ ಶೆಟ್ಟಿ

Malenadu Mirror Desk

ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ಗುಡ್‌ಬೈ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರಬರೆದ ಫೈರ್ ಬ್ರಾಂಡ್

Malenadu Mirror Desk

ಶರಾವತಿ ಸಂತ್ರಸ್ತರ ಭೂಮಿ ಸಮಸ್ಯೆ ಪರಿಹಾರಕ್ಕೆ ನ್ಯಾಯಾಂಗ ಹೋರಾಟಕ್ಕೆ ತೀರ್ಮಾನ: ರಮೇಶ್ ಹೆಗ್ಡೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.