ಶಿವಮೊಗ್ಗದ ಪ್ರತಿಷ್ಠಿತ ಪ್ರಕಾಶ್ ಟ್ರಾವೆಲ್ಸ್‌ನ ಮಾಲೀಕರಾದ ಪ್ರಕಾಶ್ ಅವರು ಶುಕ್ರವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಸಾಗರದಿಂದ ಕಾರಿನಲ್ಲಿ ಒಬ್ಬರೇ ಹೊರಟಿದ್ದು, ಕಾರು ಹೊಸನಗರ ತಾಲೂಕು ಪಟಗುಪ್ಪ ಸೇತುವೆ ಬಳಿ ಪತ್ತೆಯಾಗಿದೆ. ಮೊಬೈಲ್ , ಚಪ್ಪಲಿ ಸೇತುವೆ ಸಮೀಪ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಕಾಶ್ ಅವರು, ಸಾಗರದಿಂದ ಹುಲಿದೇವರ ಬನದ ಮೂಲಕ ಹಾದು ಹೋಗಿದ್ದು, ಅಲ್ಲಿನ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಕುಟುಂಬಸ್ಥರು ಮಾಡಿದ್ದ ಕರೆಗೆ ಸ್ಪಂದಿಸದೇ ಇರುವಾಗ ಅನುಮಾನ ಬಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಅಗ್ನಶಾಮಕದಳ ಹಾಗೂ ಪೊಲೀಸರು ಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಕಾಶ್‌ಅವರಿಗೆ ಆರ್ಥಿಕ ಮತ್ತು ಅನಾರೋಗ್ಯ ಸಮಸ್ಯೆ ಇತ್ತೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಏನಾದರು ಅಚಾತುರ್ಯ ಮಾಡಿಕೊಂಡಿರಬಹುದೆ ಎಂಬ ನೆಲೆಯಲ್ಲಿಯೂ ತನಿಖೆ ಮುಂದುವರಿದಿದೆ. ಆದರೆ, ಈ ವಿಚಾರವನ್ನು ಅಲ್ಲಗಳೆಯುತ್ತಿರುವ ಪ್ರಕಾಶ್‌ರನ್ನು ಬಲ್ಲವರು, ಕೊರೊನಾದ ಹೊಡೆತದಲ್ಲಿಯೇ ಯಾವುದಕ್ಕೂ ಜಗ್ಗಲಿರಲಿಲ್ಲ ಎನ್ನುತ್ತಿದ್ದಾರೆ.
previous post