Malenadu Mitra
ರಾಜ್ಯ ಶಿವಮೊಗ್ಗ

ಸಮಾಜದ ಏಳಿಗೆಗೆ ಮಡಿವಾಳರ ಕೊಡುಗೆ ಅನನ್ಯ: ಸಚಿವ ಕೆ.ಎಸ್.ಈಶ್ವರಪ್ಪ

ಸಮಾಜದ ಏಳಿಗೆಗೆ ಮಡಿವಾಳ ಸಮಾಜದ ಕೊಡುಗೆ ಅನನ್ಯವಾದುದು. ಈ ಸಮಾಜದವರು ಕಷ್ಟಜೀವಿಗಳಾಗಿದ್ದು ಎಲ್ಲಾ ವರ್ಗದವರ ಏಳಿಗೆಗೆ ಇವರ ಪಾತ್ರ ಹಿರಿದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಿಸಿದರು.
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಮಡಿವಾಳ ಸಮಾಜ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳರು ಬಟ್ಟೆ ಒಗೆಯುವ ಕಾಯಕ ನಿರ್ವಹಿಸುವ ಮೂಲಕ ಸಮಾಜದ ಎಲ್ಲಾ ವರ್ಗದವರ ಗೌರವ ಕಾಪಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾಷಣ, ಉಪನ್ಯಾಸಕ್ಕೆ ಸೀಮಿತರಾಗದೆ ಕಾಯಕ ನಿಷ್ಠೆಯಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಡಿವಾಳ ಮಾಚಿದೇವರ ಕಾಯಕ ನಿಷ್ಠೆಯ ತತ್ವ, ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಬರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದ ಮಡಿವಾಳ ಬಸವ ಮಾಚಿದೇವ ಗುರುಗಳ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಅನೇಕ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹಿಂದುಳಿದ ಸಮಾಜದವರ ವಿದಾಭ್ಯಾಸಕ್ಕೆ ನೆರವು ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಸ್ವಾರ್ಥ ಚಿಂತನೆ ಇಲ್ಲದೆ ಇಡೀ ಸಮಾಜದ ಏಳಿಗೆ ಬಯಸುವವರು ಮಡಿವಾಳರು ಎಂದರು.
ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಮಡಿವಾಳ ಮಾಚಿದೇವರ ಇತಿಹಾಸ ಹಾಗೂ ಮೌಲ್ಯಯುತ ವಿಚಾರಗಳನ್ನು ಸರ್ಕಾರದಿಂದ ತಿಳಿಸುವ ಕಾರ್ಯವಾಗಬೇಕು ಎಂದು ಮನವಿ ಮಾಡಿದರು.
ಸಮಾಜದ ಉಪಾಧ್ಯಕ್ಷ ವೈ.ಮುನಿಯಪ್ಪ, ಕೆ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಯಾನಂದ, ಕಾರ್ಯದರ್ಶಿ ಎಚ್.ಆರ್.ಬಸವರಾಜಪ್ಪ, ವೃತ್ತಿ ನಿರತರ ಸಂಘದ ಅಧ್ಯಕ್ಷ ಚೌಡಪ್ಪ, ಕಾರ್ಯದರ್ಶಿ ಕುಮಾರ್, ಪ್ರಮುಖರಾದ ಹಿರಣ್ಣಯ್ಯ, ಮೋಹನರೆಡ್ಡಿ ಮತ್ತಿತರರು ಇದ್ದರು.

Ad Widget

Related posts

ಕೈದಿಗಳಿಗೆ ಆರೋಗ್ಯ ತಪಾಸಣೆ

Malenadu Mirror Desk

ಹಿಜಾಬ್ ತೀರ್ಪು ಸ್ವಾಗತ, ಬೆಂಬಲಿಸುತ್ತಿದ್ದವರು ಮಕ್ಕಳಿಗೆ ಮಾರ್ಗದರ್ಶನ ನೀಡಲಿ ಎಂದ ಸಚಿವ ಈಶ್ವರಪ್ಪ

Malenadu Mirror Desk

ಕಚೇರಿ ಮುತ್ತಿಗೆ ಮುಂದಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.