ಶಿವಮೊಗ್ಗ ಪತ್ರಿಕಾ ಭವನದ ಕಚೇರಿ ಸಹಾಯಕ ಆದರ್ಶ ಅವರ ಅಕಾಲಿಕ ನಿಧನಕ್ಕೆ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ತೀವ್ರ ಸಂತಾಪ ಸೂಚಿಸಿದೆ.ಪತ್ರಿಕಾಭವನದಲ್ಲಿ ಶನಿವಾರ ನಡೆದ ಸಂತಾಪ ಸಭೆಯಲ್ಲಿ ಆದರ್ಶ ಪತ್ರಿಕಾ ಭವನದಲ್ಲಿ ನಿರ್ವಹಿಸುತ್ತಿದ್ದ ಪಾತ್ರ ಮತ್ತು ಅವರ ಸೇವೆಯನ್ನು ಸ್ಮರಿಸಲಾಯಿತು.
ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಆದರ್ಶ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು.
ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಆದರ್ಶ ಅಜಾತ ಶತ್ರುವಾಗಿದ್ದ, ಪತ್ರಿಕಾಭವನಕ್ಕೆ ಒಂದು ಶಕ್ತಿಯಾಗಿ ಸುಗಮ ನಿರ್ವಹಣೆಗೆ ಅವನ ಶ್ರಮ ಅತಿಯಾಗಿದ್ದು, ಅಕಾಲಿಕ ನಿಧನ ನೋವುತಂದಿದೆ ಎಂದರು.
ಹಿರಿಯ ಪತ್ರಕರ್ತ ಹುಲಿಮನೆ ತಿಮ್ಮಪ್ಪ ಮಾತನಾಡಿ, ಆದರ್ಶನ ಜನಪ್ರಿಯತೆ ಆತನ ನಡವಳಿಕೆಯಿಂದ ಬಂದದ್ದು ,ಪತ್ರಕರ್ತರರಿಗೆ ಒಂದು ರೀತಿಯ ಸಂಪರ್ಕ ಸೇತುವಾಗಿದ್ದ ಎಂದರು. ಶಿ.ವಿ.ಸಿದ್ದಪ್ಪ ಮಾತನಾಡಿ, ಆದರ್ಶನ ಸೇವೆಗೆ ನಾವೆಲ್ಲರೂ ತಲೆಬಾಗಲೇ ಬೇಕು ಮತ್ತು ಆತನ ಕುಟುಂಬದೊಂದಿಗೆ ನಿಲ್ಲಬೇಕು ಎಂದರು.
ಹಿರಿಯ ಪತ್ರಕರ್ತ ಶೃಂಗೇಶ್ ಮಾತನಾಡಿ, ಆದರ್ಶ ಪತ್ರಿಕಾಭವನದ ಸಂಪರ್ಕಕ್ಕೆ ಬಂದ ಮೇಲೆ ಸದ್ಗುಣಗಳನ್ನು ಬೆಳೆಸಿಕೊಂಡು ಎಲ್ಲರಿಗೂ ಪ್ರೀತಿಪಾತ್ರನಾಗಿದ್ದ ಎಂದರು. ವೈಕೆ.ಸೂರ್ಯನಾರಾಯಣ ಮಾತನಾಡಿ, ಆದರ್ಶ ಪತ್ರಕರ್ತರು ಮಾತ್ರವಲ್ಲದೆ ನಗರದ ರಾಜಕೀಯ, ಸಂಘ ಸಂಸ್ಥೆಗಳ ಮಂದಿಗೆ ಪ್ರೀತಿ ಪಾತ್ರನಾಗಿದ್ದ ಕುಟುಂಬ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದರು.
ಟ್ರಸ್ಟ್ ಖಜಾಂಚಿ ಜೇಸುದಾಸ್ ಮಾತನಾಡಿ, ಆದರ್ಶ ಪತ್ರಿಕಾಭವನದ ರಾಯಭಾರಿಯಂತೆ ಕೆಲಸ ಮಾಡಿದ್ದ,ಅವನ ಸೇವೆ ಸ್ಮರಣೀಯ ಎಂದರು. ಸಹಕಾರ್ಯದರ್ಶಿ ಗಿರೀಶ್ ಉಮ್ರಾಯ್ ಮಾತನಾಡಿ, ಆದರ್ಶ ಗಟ್ಟಿ ಮನಸ್ಸಿನ ಹುಡುಗ ಅವನ ಅಕಾಲಿಕ ಮರಣ ಪತ್ರಿಕಾ ಭವನಕ್ಕೆ ನಷ್ಟವಾಗಿದೆ. ಒಡನಾಡಿಯನ್ನು ಕಳೆದುಕೊಂಡಂತಾಗಿದೆ. ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಮಾತನಾಡಿ, ಆದರ್ಶ ಎಲ್ಲರ ಪ್ರೀತಿ ಪಾತ್ರನಾಗಲು ಆತನದಲ್ಲಿದ್ದ ಸ್ಪಂದಿಸುವ ಗುಣವೇ ಕಾರಣ. ಅವನ ಕುಟುಂಬಕ್ಕೆ ನೆರವಾಗಬೇಕು.ವೈಯಕ್ತಿಕವಾಗಿ ಕೈಲಾದ ನೆರವು ನೀಡುವೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮನೆಯ ಸದಸ್ಯನಂತೆ ಇದ್ದ ಎಲ್ಲಾ ಪತ್ರಕರ್ತರೊಂದಿಗೆ ಅನೋನ್ಯವಾದ ಸಂಬಂಧ ಹೊಂದಿದ್ದ. ತುಂಬಾ ಒರಟಾಗಿದ್ದ ಹುಡುಗನನ್ನು ಸಭ್ಯ ದಾರಿಗೆ ತಂದಿದ್ದೆ. ಅವರ ಕುಟುಂಬದ ಎಲ್ಲರೂ ಪರಿಚಯವಿದ್ದ ಕಾರಣ ಸಲುಗೆಯಿಂದ ಇದ್ದ. ಕೇಳಿಕೊಂಡು ಪತ್ರಿಕಾ ಭವನಕ್ಕೆ ಬಂದಿದ್ದ ಹೋಗುವಾಗ ತನ್ನೊಳಗಿನ ನೋವನ್ನು ಹೇಳದೆ ಈ ಲೋಕ ಬಿಟ್ಟುಹೋದ ಇದು ನಮಗೆಲ್ಲ ನೋವು ತಂದಿದೆ. ಅವರ ಕುಟುಂಬದೊಂದಿಗೆ ಇರೋಣ ಮತ್ತು ಆತನ ನೆನಪಿನಲ್ಲಿ ಉಳಿಯುವಂತಹುದೇನಾದರೂ ಮಾಡೋಣ ಎಂದು ಹೇಳಿದರು.
ಸಂತೋಷ್ ಕಾಚಿನಕಟ್ಟೆ, ರಾಮಚಂದ್ರಗುಣಾರಿ, ವಿ.ಸಿ.ಪ್ರಸನ್ನ, ಹೊನ್ನಾಳಿ ಚಂದ್ರಶೇಖರ್, ಹಿರಿಯ ಫೋಟೋ ಜರ್ನಲಿಸ್ಟ್ ಶಿವಮೊಗ್ಗ ನಂದನ್ ಮಾತನಾಡಿ ಆದರ್ಶನ ಅಗಲಿಕೆ ನೋವು ತಂದಿದೆ ಎಂದರು. ಸಂತಾಪ ಸಭೆಯಲ್ಲಿ ಪತ್ರಕರ್ತರಾದ ಹಾಲಸ್ವಾಮಿ, ಬಸವರಾಜ್, ರಾಜೇಶ್ ಕಾಮತ್, ಶಶಿಧರ್, ಮೋಹನ್ ಕೃಷ್ಣ, ನವೀನ್ ಪುರದಾಳ್, ನಿತಿನ್ ಕೈದೊಟ್ಲು, ರಾಕೇಶ್ ಡಿಸೋಜ, ಶಿವಮೊಗ್ಗ ಯೋಗರಾಜ್, ಇಸ್ಮಾಯಿಲ್ ಕುಟ್ಟಿ, ಅಬ್ದುಲ್ ರಜಾಕ್, ಜೋಸೆಫ್ ಟೆಲ್ಲಿಸ್, ಎಚ್.ಆರ್.ನಾಗರಾಜ್, ಕಿರಣ್ ಕಂಕಾರಿ,ಗಣೇಶ್ ನಾವಡ, ಭರತ್, ಭೀಮಾನಾಯ್ಕ, ಸಾವಂತ್,ವಿನಯ್, ಅಭಿ,ಗುರುರಾಜ್, ಮತ್ತಿತರರಿದ್ದರು.
ಪತ್ರಿಕಾಭವನಕ್ಕೆ ಸಾರ್ವಜನಿಕರು ಬಂದರೆ ಆದರ್ಶನನ್ನು ಕೇಳುತ್ತಿದ್ದರು. ಇಲ್ಲಿನ ಎಲ್ಲ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಎಲ್ಲರನ್ನೂ ಅಷ್ಟೆ ಪ್ರೀತಿಪಾತ್ರರಂತೆ ಕಾಣುತಿದ್ದು. ಯಾವ ಕೆಲಸವನ್ನೂ ಆಗದು ಎಂದು ಹೇಳುತ್ತಿರಲಿಲ್ಲ. ಈ ಎಳೆಯ ವಯಸ್ಸಿನಲ್ಲಿ ಅವನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು ದುಃಖದ ಸಂಗತಿ
– ಎನ್.ಮಂಜುನಾಥ್, ಅಧ್ಯಕ್ಷರು ಶಿವಮೊಗ್ಗ ಪ್ರೆಸ್ ಟ್ರಸ್ಟ್