ಮಲೆನಾಡು ಮಿರರ್ ಡೆಸ್ಕ್ : ಶಿವಮೊಗ್ಗ ನಗರದಲ್ಲಿ ವಿಧಿಸಿದ ನಿಷೇಧಾಜ್ಞೆ ಕೂಡಲೇ ಹಿಂಪಡೆಯುವAತೆ ಗಾಂಧಿಬಜಾರ್ ವರ್ತಕರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಳೆದ ಶುಕ್ರವಾರ ನಗರದಲ್ಲಿ ಕೆಲವು ಕಿಡಿಗೇಡಿಗಳ ಹಲ್ಲೆಮಾಡಿದ್ದು, ಒಂದೆರಡು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿರುವುದು ಸಂತೋಷದಾಯಕ. ಜಿಲ್ಲಾಡಳಿವು ಡಿ.೩ ರಿಂದ೭ರವರೆಗೆ ೧೪೪ ಸೆಕ್ಷನ್ ಜಾರಿಮಾಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದ್ದು, ಈ ಮೊದಲು ಕೋವಿಡ್-೧೯ನಿಂದ ವ್ಯಾಪಾರವಿಲ್ಲದೇ ಎಲ್ಲಾ ವರ್ತಕರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಇನ್ನೂ ನಿಷೇದಾಜ್ಞೆ ಮುಂದುವರೆಸಿ, ಅಂಗಡಿಗಳನ್ನು ಬಂದ್ ಮಾಡಿದರೆ ಗಾಂಧಿ ಬಜಾರಿನ ವ್ಯಾಪಾರಸ್ಥರ ಗತಿ ಏನು ಎಂದು ವರ್ತಕರು ಪ್ರಶ್ನೆಮಾಡಿದ್ದಾರೆ. ಆದ್ದರಿಂದ ಜಿಲ್ಲಾಡಳಿತವು ದಿನಗೂಲಿ ಕಾರ್ಮಿಕರು ಮತ್ತು ವ್ಯಾಪಾರಸ್ಥರ ಪರಿಸ್ಥಿತಿಯನ್ನು ಅರಿತು ಈ ಕೂಡಲೇ ನಿಷೇಧಾಜ್ಞೆ ಹಿಂಪಡೆಯಬೇಕೆAದು ಜಿಲ್ಲಾಧಿಕಾರಿಗಳಿಗೆ ನಮವಿ ಸಲ್ಲಿಸಲಾಯಿತು.
ಅಧ್ಯಕ್ಷ ವಿಜಯ್ ಕುಮಾರ್ ಜೆ. ದಿನಕರ್, ಕಾರ್ಯದರ್ಶಿ ರಾಕೇಶ್ ಸಾಕ್ರೆ, ಉಪಾಧ್ಯಕ್ಷರುಗಳಾದ ಹರೀಶ್ ಡಿ.ಪಿ., ಬಿ.ಆರ್. ಅಮರ್‌ನಾಥ್, ಭವಾನಿ ಸಿಂಗ್ ರಾಥೋಡ್ ಮತ್ತಿತರರು ಪಾಲ್ಗೊಡಿದ್ದರು.
previous post
next post