ಶಿವಮೊಗ್ಗನಗರದ ಹೊರವಲಯ ತಾವರೆಕೊಪ್ಪ ಹುಲಿ-ಸಿಂಹಧಾಮದ ಎದುರು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದಕ್ಕಾಗಿ ೩೦ ಎಕರೆ ಜಾಗ ಗುರುತಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಖೇಲೊ ಇಂಡಿಯಾ ಯೋಜನೆ ಅಡಿಯಲ್ಲಿ ನೂತನ ಕ್ರೀಡಾಂಗಣ ಅನುಮತಿ ಹಾಗೂ ಅನುದಾನ ಸಿಗಲಿದೆ. ಈ ಸಂಬAಧ ಕೇಂದ್ರ ಕ್ರೀಡಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈಶ್ವರಪ್ಪ ಅವರು ಕ್ರೀಡಾ ಸಚಿವರಾಗಿದ್ದಾಗ ಕೇಂದ್ರಕ್ಕೆ ಶೀಫಾರಸು ಮಾಡಿದ್ದರು ಎಂಬುದನ್ನೂ ಸ್ಮರಿಸಿದ ಸಂಸದರು. ತಾವರೆಕೊಪ್ಪ ಸ.ನಂ.೫೦ ರಲ್ಲಿ ೧೬೬ ಎಕರೆ ಜಾಗವಿದ್ದು, ಅದರಲ್ಲಿ ೩೦ ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಕ್ರೀಡಾ ಹಾಸ್ಟೆಲ್ ಕೂಡಾ ನಿರ್ಮಾಣ ಆಗಲಿದೆ. ಈ ನೂತನ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಹಾಕಿ, ಫುಟ್‌ಬಾಲ್,ವಾಲಿಬಾಲ್, ಕುಸ್ತಿ, ಕಬಡ್ಡಿ, ಖೋಖೋ, ಜೂಡೊ ಮತ್ತಿತರರ ಅಂಕಣಗಳನ್ನು ನಿರ್ಮಾಣ ಮಾಡಲಾಗುವುದು. ಮಲೆನಾಡಿನ ಕ್ರೀಡಾಳುಗಳಿಗೆ ಇದರಿಂದ ಅನುಕೂಲವಾಗಲಿದೆ. ಇಲ್ಲಿನ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಆಗುವ ಮೂಲಕ ರಾಷ್ಟç ಹಾಗೂ ಅಂತಾರಾಷ್ಟಿçಯ ಮಟ್ಟದಲ್ಲಿ ನಮ್ಮವರು ಬೆಳೆಯಬಹುದು ಎಂದು ಸಂಸದ ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು. ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ್, ಎಸ್.ದತ್ತಾತ್ರಿ, ಚನ್ನಬಸಪ್ಪ ಮತ್ತಿತರರು ಹಾಜರಿದ್ದರು.
previous post
next post