Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ

ಕಮಲಾಂಕೃತ ಶಿವಮೊಗ್ಗೆ, ಹಾಡಿ ಕುಣಿದ ನಾಯಕರು

ಸಿಎಂ ತವರು ಶಿವಮೊಗ್ಗದಲ್ಲಿ ಬಿಜೆಪಿ ವಿಶೇಷ ಸಭೆ ನಡೆಯುತ್ತಿರುವುದರಿಂದ ಭಾರತೀಯ ಜನತಾ ಪಕ್ಷದ ಎಲ್ಲ ಅಗ್ರಗಣ್ಯ ನಾಯಕರ ದಂಡು ಶಿವಮೊಗ್ಗದಲ್ಲಿ ನೆರೆದಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಮಧ್ಯಾಹ್ನವೇ ಶಿವಮೊಗ್ಗಕ್ಕೆ ಬಂದಿಳಿದಿದ್ದು, ಶಿವಮೊಗ್ಗದ ಬಹುತೇಕ ಹೋಟೆಲ್‍ಗಳಲ್ಲಿ ಕಮಲಪಡೆಯೇ ತುಂಬಿಹೋಗಿದೆ.
ತೀರ್ಥಹಳ್ಳಿ ಮಾರ್ಗವಾಗಿ ಬೆಳಗ್ಗೆಯೇ ಶಿವಮೊಗ್ಗಕ್ಕೆ ಬಂದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಸಕ್ರೆಬೈಲ್ ಆನೆ ಬಿಡಾರದ ಬಳಿ ಸ್ವಾಗತಿಸಿದ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ,ಸಂಸದ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಹಾಗೂ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಗಜರಾಜನ ಮೂಲಕ ಹಾರ ಹಾಕಿಸಿ ಬರಮಾಡಿಕೊಂಡರು.

ವಿಶೇಷ ಸಭೆ ನಡೆವ ಪ್ರೇರಣಾ ಹಾಲ್ ನಲ್ಲಿ ಮಧ್ಯಾಹ್ನದ ನಂತರ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಜನಸಂಘ ,ಬಿಜೆಪಿ ಬೆಳೆದು ಬಂದ ಮಾರ್ಗವನ್ನು ಸಾಕ್ಷೀಕರಿಸುವ ವಿವಿಧ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕಾರ್ಯಗಾರಗಳು ನಡೆದವು.
ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ತಬಲಾ ಬಾರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಹಿರಿಯ ನಾಯಕ ಎಂ.ಬಿ.ಭಾನುಪ್ರಕಾಶ್ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಸಭಾಂಗಣಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿ ಮಹಿಳಾ ನಾಯಕಿಯರೂ ಸೇರಿದಂತೆ ಎಲ್ಲ ಗಣ್ಯರು ಹೂ ಕೊಡುವ ಮೂಲಕ ಸ್ವಾಗತಿಸಿದರು.

ಸಭೆಯ ನೇಪಥ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್, ಕಾಂಗ್ರೆಸ್‍ನವರು ಅನಗತ್ಯವಾಗಿ ಸಿಎಂ ಕುರ್ಚಿ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲದಿರುವಾಗ ಕಾಂಗ್ರೆಸ್‍ನದು ಎಂತದು ರಗಳೆ ಎಂದು ತಿರುಗೇಟು ನೀಡಿದರು

ಕುಣಿದು ಕುಪ್ಪಳಿಸಿದ ಕಮಲ ಕಲಿಗಳು:
ರಾತ್ರಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕನ್ನಡ ಹಾಡಿಗೆ ಬಿಜೆಪಿ ನಾಯಕರು ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ವಿದಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಕೆ.ಎಸ್.ಐ.ಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್ ಅವರು ಕಾರ್ಯಕರ್ತರೊಂದಿಗೆ ಸೇರಿ ಹಾಡಿಗೆ ಹೆಜ್ಜೆ ಹಾಕುತ್ತಾ ಮಸ್ತ್ ಡ್ಯಾನ್ಸ್ ಮಾಡಿದರು.

Ad Widget

Related posts

ಹಕ್ಕುಪತ್ರಕ್ಕಾಗಿ ಹೋರಾಡಬೇಕಿರುವುದು ದುರಂತ: ಕಾಗೋಡು

Malenadu Mirror Desk

ಕಾಂಗ್ರೆಸ್ ನಲ್ಲಿ ತೊಟ್ಟಿಯ ಕಸದಂತಾಗಿರುವ ಸಿದ್ದರಾಮಯ್ಯ

Malenadu Mirror Desk

ನಾರಾಯಣಗುರು ಅಭಿವೃದ್ಧಿ ನಿಗಮ ರಚನೆ: ಸರಕಾರಕ್ಕೆ ರೇಣುಕಾನಂದ ಶ್ರೀ ಅಭಿನಂದನೆ, ಹೋರಾಟಕ್ಕೆ ಸಂದ ಜಯ ಎಂದ ಸ್ವಾಮೀಜಿ, ಅನುದಾನ ಬಿಡುಗಡೆಗೆ ಸರಕಾರಕ್ಕೆ ಒತ್ತಾಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.