ವಾಣಿಜ್ಯೋದ್ಯಮಿಗಳು, ತೆರಿಗೆ ಸಲಹೆಗಾರರು ಹಾಗೂ ತೆರಿಗೆ ಸನ್ನದುದಾರರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ ಜಿಎಸ್‌ಟಿಯಲ್ಲಿನ ನ್ಯೂನತೆ ಸರಿಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿಯಿಂದ ವಾಣಿಜ್ಯೋದ್ಯಮಿಗಳು ಹಾಗೂ ತೆರಿಗೆ ಸಲಹೆಗಾರರು ಮತ್ತು ಎಲ್ಲ ವರ್ಗದ ತೆರಿಗೆದಾರರಿಗೆ ತೀವ್ರ ತೊಂದರೆಯಾಗಿದೆ. ಕೋವಿಡ್ ಕಾರಣದಿಂದ ಸಂಪೂರ್ಣ ವಹಿವಾಟು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಜಿಎಸ್‌ಟಿ ಯಲ್ಲಿನ ಕಠಿಣ ಕಾನೂನುಗಳನ್ನು ಸರಕಾರ ಸಡಿಲ ಮಾಡಬೇಕು ಎಂದು ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತೆರಿಗೆ ಸಂಗ್ರಾಹಕರು, ಸನ್ನದುದಾರರು ಹಾಗೂ ವಾಣಿಜ್ಯ ಪ್ರಮುಖರಾದ ಸಂತೋಷ್, ಉದಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
previous post
next post