ಶಿವಮೊಗ್ಗಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಅವುಗಳ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರಮಗಳ ಕುರಿತು ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಸಗಲ್ಲಿಯಲ್ಲಿ ನಡೆಯುತ್ತಿದ್ದ ಅಕ್ರಮ ಕ್ವಾರಿ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತರು. ಲೋಕಾಯುಕ್ತ ಎಸ್ಪಿ ಮೂಲಕ ತನಿಖೆ ನಡೆಸಲಾಗಿತ್ತು. ಈ ವರದಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ದಾಖಲಿಸಿರುವ ಕೇಸುಗಳ ವಿವರವನ್ನು ಸಲ್ಲಿಸಲಾಗಿತ್ತು. ವರದಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ವರದಿಯಲ್ಲಿ ಪ್ರತಸ್ತಾಪಿಸಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಜ.೨೧ ರಂದು ನಡೆದ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಜಿಲ್ಲೆಯ ಎಲ್ಲ ಅಕ್ರಮ ಗಣಿಗಾರಿಕೆಯ ವಿವರಗಳನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಅಕ್ರಮ ಗಣಿಗಳ ಕುರಿತು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅದ್ಯಕ್ಷರು ತನಿಖೆ ನಡೆಸಬೇಕು. ಪರವಾನಗಿ ಇಲ್ಲದೆ ನಡೆಯುತ್ತಿರುವ ಗಣಿಗಾರಿಕೆ ಮತ್ತು ಪರ್‍ಮಿಟ್ ಹೊಂದಿದ ಪ್ರದೇಶ ಮೀರಿದ ಗಣಿಗಾರಿಕೆ ಎಷ್ಟು , ರಾಯಲ್ಟಿ ಉಳಿಸಿಕೊಂಡಿರುವ ಪ್ರಕರಣಗಳು ಎಷ್ಟಿವೆ. ದಂಡ ಪಾವತಿ ಮಾಡದೆ ಇರುವ ಪ್ರಕರಣಗಳು ಎಷ್ಟಿವೆ. ಅಕ್ರಮ ಕ್ರಷರ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ಅಧಿಕಾರಿಗಳ ವಿವರವನ್ನು ಸಲ್ಲಿಸಬೇಕು. ಲಘು ಖನಿಜಗಳು ಗ್ರಾನೈಟ್ ಮತ್ತು ಮರಳು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿರುವುದೇಕೆ ಎಂಬ ವಿವರಗಳನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.
ಹುಣಸೋಡು ಪ್ರಕರಣದಲ್ಲಿ ಮೃತಪಟ್ಟ ಕಾರ್ಮಿಕರ ಅವಲಂಭಿತರಿಗೆ ಪರಿಹಾರ ನೀಡುವಂತೆಯೂ ಲೋಕಾಯುಕ್ತರು ತಿಳಿಸಿದ್ದಾರೆ.
previous post
next post