ಶಿವಮೊಗ್ಗ: ಮಣಿಪಾಲ ಆರೋಗ್ಯ ಕಾರ್ಡ್- 2021ರ ನೊಂದಾವಣೆಗೆ ಮಂಗಳವಾರ ಶಿವಮೊಗ್ಗದಲ್ಲಿ ಚಾಲನೆ ನೀಡಲಾಯಿತು.
ಪ್ರೆಸ್‌ಟ್ರಸ್ಟ್‌ನಲ್ಲಿ ಮಂಗಳವಾರ ದಂಪತಿಯೊಬ್ಬರಿಗೆ ಕಾರ್ಡನ್ನು ನೀಡುವ ಮೂಲಕ ಚಾಲನೆ ನೀಡಿದ ಮಣಿಪಾಲ್ ಕಾರ್ಡು ವಿಭಾಗದ ಮುಖ್ಯಸ್ಥ ಮೋಹನ್ ಶೆಟ್ಟಿ ಮಾತನಾಡಿ, ಜನಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಡು ಯಶಸ್ವಿಯಾಗಿದೆ. ಪ್ರತಿವರ್ಷ ಹೆಚ್ಚೆಚ್ಚು ಸದಸ್ಯರು ದಾಖಲಾಗುತ್ತಿದ್ದಾರೆ. ಈ ವರ್ಷದ ಧ್ಯೇಯವಾಕ್ಯ ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ, ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎನ್ನುವುದಾಗಿದೆ ಎಂದರು.
ಸದಸ್ಯತ್ವ ಶುಲ್ಕವನ್ನು ಕೊಡುವುದರ ಮೂಲಕ ರಿಯಾಯಿತಿ ರೂಪದಲ್ಲಿ ಅದರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ. ಒಂದು ವರ್ಷಕ್ಕೆ ಕೌಟುಂಬಿಕ ಕಾರ್ಡಿನ ದರ ೩೦೦ ರೂ. ಆಗಿದೆ. ಪತಿ-ಪತ್ನಿ,25ರೊಳಗಿನ ಮಕ್ಕಳಿಗೆ 600ರೂ ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25ರೊಳಗಿನ ಮಕ್ಕಳು ಮತ್ತು 4 ಪೋಷಕರಿಗೆ 250 ರೂ. ಶುಲ್ಕ ವಿಧಿಸಲಾಗುತ್ತಿದೆ ಎಂದರು.
ಇದೊಂದು ಹೆಚ್ಚುವರಿ ಲಾಭವಾಗಿದ್ದು, ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ500 ರೂ ಮತ್ತು ಕುಟುಂಬಕ್ಕೆ800ರೂ ಮತ್ತು ಕೌಟುಂಬಿಕ ಪ್ಲಸ್ ಯೋಜನೆಗೆ950 ರೂ. ದರ ನಿಗದಿ ಮಾಡಲಾಗಿದೆ ಎಂದ ಅವರು, ಈ ಕಾರ್ಡಿನಿಂದ ವೈದ್ಯರ ಜೊತೆ ಸಮಾಲೋಚನೆಗೆ ಶೇ.50ರಷ್ಟು, ಪ್ರಯೋಗಾಲಯ ಪರೀಕ್ಷೆಗೆ ಶೇ.30ರಷ್ಟು, ಔಷಧಾಲಯದಲ್ಲಿ ಶೇ. 12ರಷ್ಟು, ಹೊರರೋಗಿ ವಿಧಾನದಲ್ಲಿ , ಅಲ್ಟ್ರಾ ಸೌಂಡ್, ಸಿಟಿ, ಎಂಆರ್‌ಐ ಸ್ಕ್ಯಾನ್‌ನಲ್ಲಿ ಶೇ. 20ರಷ್ಟು ರಿಯಾಯಿತಿ ದೊರೆಯಲಿದೆ ಎಂದು ವಿವರಿಸಿದರು.
ಶಿವಮೊಗ್ಗದಲ್ಲಿ ಕಾರ್ಡು ಪಡೆಯಬೇಕಾದಲ್ಲಿ ಅ. ನಾ. ವಿಜಯೇಂದ್ರರಾವ್- 9448790127 ವಿಜಯ್ ಆನಂದ್- 9844383344, ಬಾಪೂಜಿ- 9916131880,ವಿಪ್ರ ಸೌಹಾರ್ದ- 9242373839, ಪರಮೇಶ್ವರಪ್ಪ- 9558566688 ಮತ್ತು ರೋಹನ್- 7353876102 ಇವರನ್ನು ಸಂಪಕಿಸಬಹುದು ಎಂದರು.
ಆರೋಗ್ಯ ಕಾರ್ಡಿನ ಪ್ರತಿನಿಧಿಯಾಗಬೇಕಾದಲ್ಲಿ ಶ್ರೀನಿವಾಸ ಭಾಗವತ್ ಅವರನ್ನು 8105282145ಮೂಲಕ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅ ನಾ ವಿಜಯೇಂದ್ರರಾವ್, ಮಣಿಪಾಲ್ ಕಾರ್ಡಿನ ಸಹಾಯಕ ಅಧಿಕಾರಿಗಳಾದ ಶ್ರೀನಿವಾಸ ಭಾಗವತ್, ಸಚಿನ್ ಕಾರಂತ್ ಮೊದಲಾದವರಿದ್ದರು.