ಶಿವಮೊಗ್ಗದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿವೃತ್ತ ಅಧಿಕಾರಿಗಳನ್ನ ಮುಂದುವರಿಸಲು ಬೋರ್ಡ್ ತೀರ್ಮಾನ ಮಾಡಿರುವುದು ಖಂಡನೀಯ ಎಂದು ಮಹಾನಗರಪಾಲಿಕೆ ಸದಸ್ಯ ಎಚ್ ಸಿ ಯೊಗೇಶ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಬೋರ್ಡ್ ಯುವ ವಿದ್ಯಾವಂತರಿಗೆ ಅನ್ಯಾಯ ಮಾಡಿದೆ. ಮೂರುಜನ ಅಧಿಕಾರಿಗಳನ್ನು ಮುಂದುವರಿಸಲು ರಾಜಕೀಯ ಒತ್ತಡ ಇರುವ ಅನುಮಾನವಿದೆ. ಬಿಜೆಪಿ ಪಾಲಿಕೆ ಸದಸ್ಯರನ್ನ ಒಳಗೊಂಡ ಬೋರ್ಡ್ ಯುವಕರ ಉದ್ಯೋಗ ಕಸಿದುಕೊಂಡಿದೆ. ಲಕ್ಷಾಂತರ ರೂ.ಮಾಸಿಕ ವೇತನ ಇರುವ ನಿವೃತ್ತರನ್ನು ಉಳಿಸಿಕೊಳ್ಳುವ ಬದಲು ನಿರುದ್ಯೋಗಿಗಳನ್ನು ಕಡಿಮೆ ವೇತನದಲ್ಲಿ ನೇಮಕ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳುವ ಮೋದಿ ಅವರ ಸರಕಾರ ಇಲ್ಲಿ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿದೆ. ಕೊರೊನ ಕಾರಣದಿಂದ ಬೆಂಗಳೂರಿನಿಂದ ಉದ್ಯೋಗ ಕಳೆದುಕೊಂಡು ಬಂದಿರುವ ಸಾವಿರಾರು ಯುವಕರು ನಗರದಲ್ಲಿದ್ದಾರೆ. ಯಾರನ್ನೂ ಪರಿಗಣಿಸದ ಸ್ಮಾರ್ಟ್ ಸಿಟಿ ಬೋರ್ಡ್ ನಿವೃತ್ತರಾದರೂ ಮೂವರು ಅಧಿಕಾರಿಗಳನ್ನು ಮುಂದುವರಿಸುವುದರ ಹಿಂದೆ ರುವ ಉದ್ದೇಶವನ್ನು ಜಿಲ್ಲಾಮಂತ್ರಿಗಳು ಸಾರ್ವಜನಿಕರಿಗೆ ತಿಳಸಬೇಕು ಎಂದು ಯೋಗೇಶ್ ಆಗ್ರಹಿಸಿದರು.
ಪ್ರಧಾನಮಂತ್ರಿಗಳು ಯುವಜನರಿಗೆ ಪಕೋಡ ಮಾರಾಟಮಾಡಿ ಎಂದು ಹೇಳತ್ತಾರೆ ಅವರ ಪಕ್ಷದ ಸ್ಥಳೀಯ ಆಡಳಿತಗಾರರು ಯುವಜನರಿಗೆ ಮೋಸ ಮಾಡುತ್ತಿದೆ.ಈ ನಿರ್ಧಾರ ಹಿಂದೆ ಪಡೆಯದಿದ್ದಲ್ಲಿ ನಿರುದ್ಯೋಗಿ ಯುವಕರನ್ನು ಸೇರಿಸಿ ಹೋರಾಟ ಮಾಡಲಾಗುವುದು ಎಂದು ಯೋಗೇಶ್ ಹೇಳಿದರು