Malenadu Mitra
ರಾಜ್ಯ ಶಿವಮೊಗ್ಗ

ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಭಕ್ತಾದಿಗಳು

ರಾಜ್ಯದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭಕ್ತರಿಗೆ ಅವಾಶ ಕಲ್ಪಿಸಲಾಗಿದೆ. ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಹಣ್ಣು ಕಾಯಿ ಮತ್ತು ಪ್ರಸಾದ ಹಾಗೂ ಅನ್ನದಾಸೋಹ ವ್ಯವಸ್ಥೆ ಇರುವುದಿಲ್ಲ ದೇಗುಲದ ಆವರಣವನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡುತ್ತಿದ್ದು, ಭಕ್ತರಿಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಬಗ್ಗೆ ಸ್ವಯಂಸೇವಕರು ಜಾಗೃತಿ ಮೂಡಿಸಲಿದ್ದಾರೆ.
ಶುಕ್ರವಾರ ಸ್ಥಳೀಯ ಹಾಗೂ ಹೊರಗಿನ ಭಕ್ತರು ಬಂದು ದೇವಿಯ ದರ್ಶನ ಪಡೆದರು. ದೇವಾಲಯದಲ್ಲಿಯೂ ನಿತ್ಯ ಪೂಜೆ ಎಂದಿನಂತೆ ನಡೆಯುತ್ತಿವೆ. ಭಕ್ತರು ಕೋವಿಡ್ ನಿಯಮ ಹಾಗೂ ಸರ್ಕಾರದ ಮಾರ್ಗಸೂಚಿಯನ್ವಯ ಬಂದು ದೇವಿಯ ದರ್ಶನ ಪಡೆಯಬಹುದು ಎಂದು ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್‍ನ ಆಡಳಿತ ಮಂಡಳಿ ತಿಳಿಸಿದೆ.

Ad Widget

Related posts

ಸಿಗಂದೂರಲ್ಲಿ ನವರಾತ್ರಿ ಉತ್ಸವ ಆರಂಭ ಶಿವಗಿರಿಯ ಸತ್ಯಾನಂದ ತೀರ್ಥರಿಂದ ಉತ್ಸವಕ್ಕೆ ಚಾಲನೆ

Malenadu Mirror Desk

ಬಿಜೆಪಿ ಚುನಾವಣೆ ವ್ಯಾಮೋಹದಿಂದ ಕೊರೊನ ಹೆಚ್ಚಳ: ಕಾಂಗ್ರೆಸ್

Malenadu Mirror Desk

ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.