ಶಿವಮೊಗ್ಗತಾಲೂಕು ಮಂಡೇನಕೊಪ್ಪದಲ್ಲಿ ಮೊನ್ನೆ ತಾನೆ ಕುಡುಕ ಮಗನೊಬ್ಬ ತಂದೆಯನ್ನೇ ಹೊಡೆದು ಸಾಯಿಸಿದ ಸುದ್ದಿ ಹಸಿರಾಗಿರುವಾಗಲೇ ಶಿವಮೊಗ್ಗ ಸಮೀಪದ ಬುಳ್ಳಾಪುರದಲ್ಲಿ ಮಗನೊಬ್ಬ ಇದೇ ಕುಡಿತದ ಅಮಲಿನಲ್ಲಿ ಹೆತ್ತಮ್ಮನನ್ನೇ ಕೊಲೆಮಾಡಿದ್ದಾನೆ.
ವನಜಾಕ್ಷಿನಾಯ್ಕ್ ಎಂಬಾಕೆ ಕೊಲೆಯಾದ ದುರ್ದೈವಿ ಮಹಿಳೆ. ಆಕೆಯ ಮಗ ದೇವರಾಜ್ ನಾಯ್ಕ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಂಗಳವಾರವೂ ಕುಡಿದ ಮತ್ತಿನಲ್ಲಿ ಮನೆಗೆ ಬಂದ ಮಗ ತಾಯಿಯ ಕಪಾಳಕ್ಕೆ ಹೊಡೆದು ಕೆಡವಿ, ಕಾಲಿನಿಂದ ತುಳಿದು ಸಾಯಿಸಿದ್ದಾನೆ. ಈ ಸಂಬAಧ ಆತನ ತಂದೆ ಲೋಕೇಶ್‌ನಾಯ್ಕ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
previous post