ರಿಪ್ಪನ್‍ಪೇಟೆ :- ಇಲ್ಲಿ ಸಮೀಪದ ಅರಸಾಳು ವಲಯ ವ್ಯಾಪ್ತಿಯ ಆಲವಳ್ಳಿ ಮನ್ನಾ ಜಂಗಲಿಯಲ್ಲಿ ಬುಧವಾರ ಕಾಡುಪ್ರ್ರಾಣಿ ಜಿಂಕೆಯನ್ನು ಬೇಟೆ ಆಡಿದ ಮೂವರು ಆರೋಪಿಗಳನ್ನು ಅರಸಾಳು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪುಟ್ನಲ್ಲಿ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಬಾಬುರಾಜೇಂದ್ರ ಪ್ರಸಾದ್ ಮತ್ತು ಸಿಬಂದ್ದಿ ವರ್ಗ ದಿಢೀರ್ ದಾಳಿ ಮಾಡಿ ಆರೋಪಿ ಸಹಿತ ಮಾಲನ್ನು ವಶಪಡಿಸಿಕೊಂಡಿದ್ದಾರೆ
ಆರೋಪಿಗಳಾದ ಸಾಗರ ತಾಲ್ಲೂಕಿನ ಪ್ರಶಾಂತ್(38) ಸಚಿನ್(20) ಆದರ್ಶ(20) ಎಂದು ಗುರುತಿಸಲಾಗಿದೆ ಇನೋರ್ವ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.
ಈ ಪತ್ಯ ಕಾರ್ಯದಲ್ಲಿ ವಲಯ ಅರಣ್ಯ ಅಧಿಕಾರಿ ಬಾಬು ರಾಜೇಂದ್ರ ಪ್ರಸಾದ್ ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಚಂದ್ರಶೇಖರ್ ಅರಣ್ಯ ರಕ್ಷಕ ಬಸವರಾಜ್ ಅನಿಲ್ ಇನ್ನಿತರು ಇದ್ದರು