ಶಿವಮೊಗ್ಗದಲ್ಲಿ ತುಂಗಾ ಸೇತುವೆಯಿಂದ ನದಿಗೆ ಹಾರಿದರೂ ಯುವಕನೊಬ್ಬ ಬದುಕುಳಿದ ಪವಾಡ ಭಾನವಾರ ನಡೆದಿದೆ. ಶಿವಮೊಗ್ಗ ತುಂಗಾ ನಗರದ ತನ್ವೀರ್ ಎಂಬಾತನೇ ಬದುಕುಳಿದ ವ್ಯಕ್ತಿಯಾಗಿದ್ದಾನೆ. ಶಿವಮೊಗ್ಗ ಬೆಕ್ಕಿನ ಕಲ್ಮಠದ ಸಮೀಪದ ಹೊಸ ಸೇತುವೆಯಿಂದ ಹರಿಯುವ ನದಿಗೆ ಆತ ಹಾರಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಹೊಳೆಗೆ ಹೊಳೆಯ ನೀರಿನೊಂದಿಗೆ ಸಾಗಿದ್ದ ಆತ ನದಿಯ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಆತ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.
ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಿಸಿ ನದಿ ದಡಕ್ಕೆ ಕರೆತಂದಿದ್ದಾರೆ.
ತನ್ವೀರ್ ಶಿವಮೊಗ್ಗ ತುಂಗಾ ನಗರದ ನಿವಾಸಿಯಾಗಿದ್ದು, ಕಾಲುಜಾರಿ ಬಿದ್ದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆದರೆ ಸೇತುವೆ ತಡೆ ಗೋಡೆ ಎತ್ತರ ಇರುವ ಕಾರಣ ಯಾವುದೇ ಕಾರಣಕ್ಕೂ ಜಾರಿಬೀಳು ಸಾಧ್ಯತೆ ಇಲ್ಲ. ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.
ಮುಗಿಬಿದ್ದ ಜನ:
ಯಾರೊ ಸೇತುವೆಯಿಂದ ಹೊಳೆಗೆ ಹಾರಿ ಬದುಕುಳಿದಿದ್ದಾನಂತೆ, ಅವನ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಹಬ್ಬುತ್ತಿದ್ದಂತೆ ಕಾರ್ಯಾಚರಣೆ ಸ್ಳಳದಲ್ಲಿ ಜನ ಜಂಗುಳಿ ನೆರೆದಿತ್ತು. ಇದರಿಂದ ಸಾರ್ವಜನಿಕ ಸಂಚಾರಕ್ಕೂ ಅಡಚಣೆಯಾಗಿತ್ತು.