ಪತ್ರಿಕಾ ಸಂವಾದದಲ್ಲಿ ಎಸ್‌ಪಿ ಲಕ್ಷ್ಮೀ ಪ್ರಸಾದ್ ಮಾಹಿತಿ
ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ತರಬೇತಿಯನ್ನು ಪೊಲೀಸ್ ಸಿಬ್ಬಂದಿಗೆ ನೀಡುವುದು ಸೇರಿದಂತೆ ಅನೇಕ ಜನ ಸ್ನೇಹಿ ಯೋಜನೆಗಳು ತಮ್ಮ ಮುಂದೆ ಇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದರು. ಪತ್ರಿಕಾಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರ ಸಹಭಾಗಿತ್ವ ಮತ್ತು ಅರಿವು ಕಾರ್ಯಕ್ರಮಗಳಿಂದ ಅಪರಾಧ ತಗ್ಗಿಸಬಹುದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಲವು ಜನಸ್ನೇಹಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಗಾಂಜಾ ಮಾರಾಟದ ವಿಧಾನ ಬದಲು
ಗಾಂಜಾ ಮಾರಾಟದ ವಿಧಾನ ಬದಲಾಗಿದೆ. ಪರಿಚಯವಿದ್ದವರು ಫೋನ್ ಕಾಲ್ ಮಾಡಿದ್ರೆ. ಅಂತವರಿಗೆ ಮಾತ್ರ ಗಾಂಜಾ ಪೂರೈಕೆಯಾಗುತ್ತಿರುವುದು ಗೊತ್ತಾಗಿದೆ. ಗಾಂಜಾ ಪೆಡ್ಲರ್ ಹಾಗು ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆಂಧ್ರ ಪ್ರದೇಶದಿಂದ ಪೂರೈಕೆಯಾಗುತ್ತಿದ್ದ ಗಾಂಜಾದ ಮೇಲೆ ನಮ್ಮ ಪೊಲೀಸರು ನಿಯಂತ್ರಣ ಸಾಧಿಸಿದ್ದಾರೆ. ಆದರೂ ಗಾಂಜಾ ಬಳ್ಳಾರಿ, ಚೆನ್ನಗಿರಿ, ತರೀಕೆರೆಯಂತ ಹೊರವಲಯದಲ್ಲಿ ಒಂದು ಅಥವಾ ಎರಡು ಕೆಜಿಯ ಪ್ಯಾಕ್ ನಲ್ಲಿ ಬರುತ್ತಿದೆ. ಮೊದಲು ಗಾಂಜಾ ವ್ಯಸನಿಗಳನ್ನು ಪರೀಕ್ಷಿಸಿದಾಗ ೧೦ ಕೇಸ್ ಗಳಲ್ಲಿ ೬-೭ ಕೇಸ್ ಗಳಲ್ಲಿ ಸೇವನೆ ಖಾತರಿಯಾಗ್ತಿತ್ತು. ಆದ್ರೆ ಈಗ ಒಂದೆರಡು ಕೇಸ್ ಗಳು ಸಿಕ್ಕರೂ ಹೆಚ್ಚು. ಗಾಂಜಾದಿಂದ ವ್ಯಸನಿಗಳು ಮುಕ್ತರಾಗುತ್ತಿದ್ದಾರೆ. ಈ ವರ್ಷ ಗಾಂಜಾ ಎಕ್ಸೈಸ್ ಮಟ್ಕಾ ನಿಯಂತ್ರಣದ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು. ಹಳ್ಳಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಶೇಕಡಾ ೮೦ ರಷ್ಟು ಮದ್ಯ ಮಾರಾಟವನ್ನು ಕಡಿಮೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಿವರೆಗೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಇರುತ್ತೋ, ಅಲ್ಲಿಯವರೆಗೆ ಕ್ರೈಂ ಗಳ ಸಂಖ್ಯೆ ಹೆಚ್ಚಳವಾಗುತ್ತೆ. ಮದ್ಯದ ಮೇಲೆ ನಿಯಂತ್ರಣ ಸಾಧಿಸಿದರೆ ಅಪರಾಧಗಳು ಕಡಿಮೆಯಾಗುತ್ತದೆ ಎಂದರು.
ಹಳ್ಳಿಗಳಲ್ಲಿ ಬೀಟ್ ಪೊಲೀಸಿಂಗ್‌ಗೆ ಹೆಚ್ಚಿನ ಆದ್ಯತೆ:
ಬೀಟ್ ಸಿಸ್ಟಮ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಳ್ಳಿಗಳಲ್ಲಿ ಬೀಟ್‌ಗೆ ಹೋಗುವ ಕ್ರೈಂ ಪೊಲೀಸರಿಗೆ ಹಳ್ಳಿಯ ಸಮಗ್ರ ಮಾಹಿತಿ ಇರಬೇಕು. ಕಳ್ಳರು ರೌಡಿಗಳು ಸಮಾಜದ ಗಣ್ಯ ವ್ಯಕ್ತಿಗಳ ಅರಿವು ಪೊಲೀಸರಿಗಿರಬೇಕು. ಇನ್ನು ಆರು ತಿಂಗಳಲ್ಲಿ ಪರಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದರು.
ಶಾಲೆ ಬಿಟ್ಟ ಮಕ್ಕಳು ಅಪರಾಧ ಪ್ರಕರಣಗಳಲ್ಲಿ ಬಾಗಿ ಎಸ್ಪಿ ಕಳವಳ
ಶಿವಮೊಗ್ಗ ನಗರದಲ್ಲಿ ಶಾಲೆ ಬಿಟ್ಟ ಮಕ್ಕಳು ಕೂಲಿ ಕೆಲಸ ಬಾರ್ ಬೆಂಡಿಂಗ್ ಗಾರೆ ಕೆಲಸಗಳಿಗೆ ಹೋಗುವುದು ಕಂಡುಬರುತ್ತಿದೆ. ಇಂತಹ ಮಕ್ಕಳ ಕೈಗೆ ಮಾದಕ ವ್ಯಸನಿಗಳಾಗಿದ್ದು ಕ್ರೈಂ ಗಳನ್ನು ಎಸಗುತ್ತಿದ್ದಾರೆ ಎಂದು ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ. ಕುಟುಂಬದ ಆರ್ಥಿಕ ಹೊರೆ ತಗ್ಗಿಸಲು ಕೂಲಿ ಕೆಲಸಕ್ಕೆ ಹೋಗುವ ಹುಡುಗರು ಅಪರಾಧ ಎಸಗಿ ಜೈಲು ಕಂಬಿ ಎಣಿಸುತ್ತಿದ್ದಾರೆ. ೧೩-೧೫ ವರ್ಷ ವಯಸ್ಸಿನ ಮಕ್ಕಳೇ ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಪರಾಧ ಎಸಗಿರುವ ಹುಡುಗರನ್ನು ನೋಡಿದಾಗ ಅವರ ವಯಸ್ಸು ೧೬ ರಿಂದ ೨೨ ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಕ್ರೈಂ ಎಸಗುವ ಹುಡುಗರ ಪ್ರದೇಶಗಳನ್ನು ಗುರುತಿಸಿ, ಯೂತ್ ವೆಲ್ ಫೇರ್, ಸೋಷಿಯಲ್ ವೆಲ್ ಫೇರ್, ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಿ, ಹಾದಿತಪ್ಪಿದ ಮಕ್ಕಳನ್ನು ಸಮಾಜದಲ್ಲಿ ಉತ್ತಮವಾಗಿ ಬಾಳುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ವಾಹನ ಅಪಘಾತ ತಡೆಗೆ ಕ್ರಮ
ವಾಹನ ಅಪಘಾತಗಳನ್ನು ಈ ಬಾರಿ ಶೇಕಡಾ ೧೦ ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ. ರಾಬರಿ ಕಳ್ಳತನದಂತಹ ಅಪರಾಧಗಳನ್ನು ಶೇಕಡಾ ೧೦ ರಷ್ಟು ಕಡಿಮೆ ಮಾಡಲಾಗುವುದು. ಪ್ರಾಪರ್ಟಿ ರಿಕವರಿ ಪ್ರಸ್ತುತ ೪೫ ಪರ್ಸೆಂಟ್ ಇದ್ದು ಅದನ್ನು ೫೫ ಪರ್ಸೆಂಟ್ ಗೆ ಗೆ ಹೆಚ್ಚಿಸುವ ಪ್ಲಾನ್ ಇದೆ. ಸ್ಟೇಷನ್ ಆವರಣದಲ್ಲಿರುವ ಜಪ್ತಿ ಮಾಡಿರುವ ವಾಹನಗಳನ್ನು ಒಂದೆಡೆ ವಿಲೇವಾರಿ ಮಾಡಿ ಸ್ಟೇಷನ್ ನ್ನು ಕ್ಲೀನ್ ಮಾಡುವ ಉದ್ದೇಶವಿದೆ ಎಂದರು
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಹಾಗು ಮಾದ್ಯಮ ಅಕಾಡೆಮಿ ಸದಸ್ಯರಾದ ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು.
ಬೆಂಗಳೂರು ಪರಪ್ಪನ ಅಗ್ರಹಾರ ಸೇರಿದಂತೆ ಶಿವಮೊಗ್ಗದ ಜೈಲಿನಿಂದ ಕೈದಿಗಳು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಜೈಲಿನೊಳಗೆ ಮೊಬೈಲ್ ಹಾಗೂ ಮಾದಕ ವಸ್ತುಗಳು ಲಭ್ಯವಾಗುವ ಬಗ್ಗೆ ಆತಂಕವಿದೆ. ಈ ಬಗ್ಗೆ ಬಂಧೀಖಾನೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು
-ಲಕ್ಷ್ಮೀ ಪ್ರಸಾದ್, ಜಿಲ್ಲಾ ರಕ್ಷಣಾಧಿಕಾರಿ