ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ರಥೋತ್ಸವ. ಮಂಗಳವಾರ ವಿಜೃಂಬಣೆಯಿಂದ ನೆರವೇರಿತು.
ರಥೋತ್ಸವ ಅಂಗವಾಗಿ ಸ್ವಾಮಿಯ ರಾಜಬೀದಿ ಉತ್ಸವ ನೆರವೇರಿತು. ಈ ಸಂದರ್ಭ ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳು, ವೀರಗಾಸೆ,ಗೌಳಿಗರ ಸಾಂಪ್ರದಾಯಿಕ ನೃತ್ಯ ತಂಡಗಳ ಕಲಾ ಪ್ರದರ್ಶನ ನಡೆಯಿತು.
ರಾತ್ರಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಕಿಲಾರದ ಮಹಾ ಗಣಪತಿ ಯಕ್ಷಗಾನ ಮಂಡಳಿಯಿಂದ. ಶಿವಭಕ್ತ ವೀರಮಣಿ ಯಕ್ಷಗಾನ ಪ್ರದರ್ಶನ ಕಲಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು
ಬುಧವಾರ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಅಕ್ಕದ ಊರು, ಶಿವಮೊಗ್ಗ ಸೇರಿದಂತೆ ಹಲವೆಡೆಯಿಂದ ಸಾವಿರಾರು ಭಕ್ತ ಸಮುದಾಯ ನೆರೆದಿತ್ತು.