Malenadu Mitra
ರಾಜ್ಯ ಶಿವಮೊಗ್ಗ

ಮುಕ್ತಮನಸ್ಸಿನಿಂದ ಜೀವನ ನೋಡಿದರೆ ಆಳದ ಅರಿವಾಗುತ್ತದೆ: ಇನ್ಫೋಸಿಸ್ ಸುಧಾಮೂರ್ತಿ

ಜೀವನ ತೆರೆದ ಪುಸ್ತಕವಾಗಬೇಕು. ಜೀವನವನ್ನು ಕಣ್ತೆರೆದು ನೋಡಬೇಕು. ಆಗ ಜೀವನದ ಆಳ-ಅರಿವು ಗೊತ್ತಾಗುತ್ತದೆ. ಮನಸ್ಸಲ್ಲೇ ಪ್ರಯಾಣ ಮಾಡಬೇಕು. ಆಗ ನೈಜತೆ ಅರ್ಥವಾಗುತ್ತದೆ. ಜೀವನ ನೋಡುವ ಮತ್ತು ಅಳೆಯುವ ದೃಷ್ಟಿ ನಮ್ಮದಾಗಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಉಪನ್ಯಾಸ ಮಾಲಿಕೆಯ ೨ನೆಯ ಕಾರ್‍ಯಕ್ರಮವಾಗಿ ಮಂಗಳವಾರ ಸಂಜೆ ಇಲ್ಲಿನ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಮತ್ತು ಸರಳ ಜೀವನ ಕುರಿತ ಸಂವಾದ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಸರಳ ಜೀವನದ ಜೊತೆ ಉನ್ನತ ಚಿಂತನೆಗೆ ಹೆಚ್ಚಿನ ಒತ್ತು ಕೊಡಬೇಕು. ಹೆಚ್ಚು ಓದಬೇಕು. ನಮ್ಮೆದುರು ಏನಾಗುತ್ತಿದೆ ಎನ್ನುವುದನ್ನು ಅರಿಯಬೇಕು. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಯಾರು ಇರಲಿ, ಬಿಡಲಿ, ನಮ್ಮ ಕೆಲಸ ನಮಗೆ, ನಿಷ್ಠೆಯಿಂದ ಅದನ್ನು ಪೂರೈಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದರು.
ಮಹಿಳಾ ಸಬಲೀಕರಣ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಿದೆ. ಯಾವುದೇ ಕೆಲಸವನ್ನು ಮಾಡುವಾಗ ಮೊದಲು ಅದನ್ನು ಯಶಸ್ವಿಗೊಳಿಸುವ ಮನಸ್ಸು ಮಾಡಬೇಕು. ಧೈರ್‍ಯ ತೆಗೆದುಕೊಳ್ಳಬೇಕು. ಗಟ್ಟಿಯಾದ ನಿರ್ಧಾರ ಮಾಡಬೇಕು. ಇದರಿಂದ ಮಾಡುವ ಕೆಲಸದಲ್ಲಿ ವಿಶ್ವಾಸ ಮೂಡುತ್ತದೆ ಎಂದ ಅವರು, ಆರ್ಥಿಕ ಸ್ವಾತಂತ್ರ್ಯ ಎಂದರೆ ಸಬಲಿಕರಣವಲ್ಲ, ಆರ್ಥಿಕ ಸ್ವಾತಂತ್ರ್ಯ ಬಂದಾಕ್ಷಣ ಕೆಲವರಿಗೆ ಧಿಮಾಕು ಆರಂಭವಾಗುತ್ತದೆ. ಆರ್ಥಿಕ ಸ್ವಾತಂತ್ರ್ಯದ ಜೊತೆ ಹೊಂದಾಣಿಕೆಯ ಜೀವನ ಅಗತ್ಯ. ಇದು ಕೆಲವೊಮ್ಮೆ ದಾರಿತಪ್ಪಿಸುತ್ತದೆ. ಆದ್ದರಿಂದ ಆರ್ಥಿಕತೆ ಏನೇ ಇರಲಿ, ಜೀವನ ಮತ್ತು ಕುಟುಂಬದ ಅರ್ಥವನ್ನು ತಿಳಿದುಕೊಳ್ಳಬೇಕು ಎಂದರು.
ಯಶಸ್ವಿ ಉದ್ಯಮಿಯಾಗಬೇಕಾದರೆ, ಮೊದಲು ಲಾಭ ನಷ್ಟದ ಯೋಚನೆ ಮಾಡಬೇಕು. ಉದ್ಯಮವನ್ನು ಕಟ್ಟುವ ಮಾಹಿತಿ ಹೊಂದಿರಬೇಕು. ಯಶಸ್ಸು ಎನ್ನುವುದು ಯಾವಾಗಲೂ ಶೇ. 1ರಷ್ಟು ಎನ್ನುವುದನ್ನು ತಿಳಿದುಕೊಳ್ಳಬೇಕು. ಕಠಿಣ ಶ್ರ್ರಮ, ಮಾಡುವ ಉದ್ಯಮದ ಸಮಗ್ರ ಚಿತ್ರಣ, ತಾಳ್ಮೆ, ಸಂಪೂರ್ಣ ತಿಳುವಳಿಕೆ ಮತ್ತು ಗ್ರಾಹಕರೇ ದೇವರು ಎನ್ನುವ ಪರಿಕಲ್ಪನೆಯನ್ನು ಹೊಂದಿರಬೇಕು ಎಂದರು..
ಸಮಾದಲ್ಲಿ ಕಲಿಕೆಯಲ್ಲೂ ಸಹ ಸಮಾನತೆ ಬರಬೇಕಿದೆ. ಗ್ರಾಮೀಣ ಭಾಗದಲ್ಲಿ ಹೆಣ್ಣು-ಗಂಡು ತಾರತಮ್ಯವಿದೆ. ಇದನ್ನು ನಿವಾರಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಎನ್‌ಇಎಸ್ ಸಹ ಕಾರ್‍ಯದರ್ಶಿ ಡಾ|| ಪಿ. ನಾರಾಯಣ ಅವರು, ಕನಸು ಕಾಣಬೇಕು. ಅದನ್ನು ಈಡೇರಿಸಬೇಕು ಎನ್ನುವ ಮಾತು ಸುಧಾ ಮೂರ್ತಿ ಅವರಿಗೆ ಅನ್ವಯಿಸುತ್ತದೆ. ಸಮಾಜದ ಅಗತ್ಯತೆಗೆ ಸ್ಪಂದಿಸಿ ಅನೇಕ ನೆರವು ನೀಡಿದ್ದಾರೆ. ವಿದ್ಯಾ ಕ್ಷೇತ್ರದಲ್ಲಿ ಸರಕಾರದ ಜೊತೆ ಕೈಜೋಡಿಸಿ ಹಲವಾರು ಶಾಲೆಗಳಿಗೆ ಮೂಲಸೌಕರ್‍ಯ ಕಲ್ಪಿಸಿದ್ದಾರೆ. ಸಾವಿರಾರು ದೇವದಾಸಿಯರಿಗೆ ಪುನರ್ಜೀವನ ಕೊಟ್ಟಿದ್ದಾರೆ. ಜೀವನ ಮೌಲ್ಯವನ್ನು ಬೆಳೆಸುವ ಕೆಲಸ ಮಾಡುತ್ತ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹವರ ಬಗ್ಗೆ ಡಾಕ್ಟರೆಟ್ ಮಾಡುವ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆಯನ್ನು ಎನ್‌ಇಎಸ್ ಅಧ್ಯಕ್ಷ ಜಿ. ಎಸ್. ನಾರಾಯಣ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಸಿ. ಆರ್. ನಾಗರಾಜ, ಕಾರ್‍ಯದರ್ಶಿ ಎಸ್.ಎನ್. ನಾಗರಾಜ, ಖಜಾಂಚಿ ಡಿ ಜಿ ರಮೇಶ್, ಕಾಲೇಜಿನ ಪ್ರಾಚಾರ್‍ಯ ಪ್ರೊ. ನಾಗಭೂಷಣ್ ಉಪಸ್ಥಿತರಿದ್ದರು.

ಪ್ರತಿ ನಿಮಿಷವನ್ನು ಸದ್ಬಳಕೆ ಮಾಡಬೇಕು. ಜೊತೆಗೆ ನಮ್ಮ ಕುಟುಂಬವನ್ನೂ ಅರ್ಥ ಮಾಡಿಕೊಳ್ಳಬೇಕು. ಹೆಣ್ಣು ಸಾಧನೆ ಮಾಡಲು ಹೊರಡುವ ಮುನ್ನ ಕುಟುಂಬದ ಬೆಂಬಲ ಅಗತ್ಯ. ಅದಿದ್ದರೆ ಆಕೆ ಸಾಧನೆ ಮಾಡಬಲ್ಲಳು. ಅನಗತ್ಯ ಕಾಲ ಹರಣ ಮಾಡಬಾರದು. ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ. ಮೊಬೈಲ್ ಜೀವನವಲ್ಲ. ಅದಕ್ಕಿಂತ ಪ್ರಮುಖವಾದುದನ್ನು ನಾವು ಮಾಡಬೇಕಿದೆ, ಇಡಬೇಕಾದ ಹೆಜ್ಜೆ ಇದೆ.

ಸುಧಾ ಮೂರ್ತಿ

Ad Widget

Related posts

ಮಧು ಬಂಗಾರಪ್ಪರಿಗೆ ಅದ್ದೂರಿ ಸ್ವಾಗತ, ರಾಜ್ಯಾದ್ಯಂತ ಮಧುರ ಪ್ರಭಾವ ಹೆಚ್ಚಲಿ ಎಂದ ಹೆಚ್.ಎಂ.ರೇವಣ್ಣ

Malenadu Mirror Desk

ಪಾಲಿಕೆ ಆಯುಕ್ತರಿಗೆ ದಿಗ್ಭಂದನ : ಶಾಸಕರಿಂದ ಹಕ್ಕುಚ್ಯುತಿ ಮಂಡನೆಯ ಎಚ್ಚರಿಕೆ

Malenadu Mirror Desk

ಜ್ಯೋತಿ, ಲೋಕೇಶ್‍ಗೆ ಪಿಎಚ್.ಡಿ. ಪದವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.