Malenadu Mitra
ರಾಜ್ಯ ಶಿವಮೊಗ್ಗ

ವಿದ್ಯಾಸಂಸ್ಥೆಗಳು ನೈತಿಕ ಶಿಕ್ಷಣ ನೀಡಬೇಕು ,ಎನ್.ಇ.ಎಸ್ ಹಬ್ಬದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಮತ

ಶಿವಮೊಗ್ಗ: ನಮಗೆ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಶೈಕ್ಷಣಿಕತೆಯ ಜೊತೆಗೆ ನೈತಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಬುಧವಾರ ನಗರದ ಎನ್‌ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಸಮಾರೋಪ ಸಮಾರಂಭದ “ಎನ್.ಇ.ಎಸ್ ಹಬ್ಬ’ ಸಮಾರೋಪ ಮಾತುಗಳನ್ನಾಡಿದರು.
ವಿದ್ಯಾಸಂಸ್ಥೆಗಳಲ್ಲಿ ನೈತಿಕ ಶಿಕ್ಷಣ ನೀಡುವ ಕುರಿತು ಸರ್ಕಾರ ಹೆಚ್ಚು ಚಿಂತನೆ ನಡೆಸಬೇಕಿದೆ. ನೈತಿಕ ಮೌಲ್ಯಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕಿದೆ. ಚಾರಿತ್ರ್ಯ ರಹಿತ ವಿದ್ಯೆ ನಿರುಪಯುಕ್ತವಾದದು ಎಂದರು.
ಶಿವಮೊಗ್ಗ ಜಿಲ್ಲೆಯಿಂದ ದೇಶಕ್ಕಾಗಿ ತನು ಮನ ಧನ ನೀಡಿದ ಸೈನಿಕರು ಹೆಚ್ಚು. ಅಂತಹ ರಾಷ್ಟ್ರಪ್ರೇಮವೇ ಎನ್‌ಇಎಸ್ ಸಂಸ್ಥೆಯಂತಹ ಸಮೂಹ ಮೂಡಿಬರಲು ಕಾರಣ. ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಎನ್‌ಇಎಸ್ ವಿದ್ಯಾರ್ಥಿಗಳು ವಿಶೇಷವಾಗಿ ಗುರುತಿಸಿಕೊಳ್ಳಬಲ್ಲರು ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಮಾನವೀಯ ಮೌಲ್ಯಗಳೊಂದಿಗೆ ಎನ್‌ಇಎಸ್ ಅಮೃತ ವರ್ಷ ಯಶಸ್ವಿಯಾಗಿ ಮೂಡಿದೆ. ಗ್ರಾಮೀಣದ ಭಾಗದಲ್ಲಿ ಶೈಕ್ಷಣಿಕ ಶ್ರೇಷ್ಟತೆ ನೀಡುವಲ್ಲಿ ಎನ್‌ಇಎಸ್ ಸಂಸ್ಥೆ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಎಂ.ಆರ್.ಸೀತಾಲಕ್ಷ್ಮೀ, ಎಂ.ಜಿ.ರಾಮಚಂದ್ರಮೂರ್ತಿ, ಡಿ.ಎಸ್.ಅರುಣ್, ಅನಂತದತ್ತಾ, ಮಧುರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಎನ್‌ಇಎಸ್ ನೂತನ ಕೈಪಿಡಿ ಹಾಗೂ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಮನಸೆಳೆದ ಮೆರವಣಿಗೆಯ ಕಲಾತಂಡಗಳು :
ಬುಧವಾರ ಬೆಳಗ್ಗೆ ಎನ್‌ಇಎಸ್ ಕಛೇರಿ ಮುಂಭಾಗದ ಎಸ್.ಆರ್.ನಾಗಪ್ಪಶೆಟ್ಟಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಪ್ರಾರಂಭವಾದ ಮೆರವಣಿಗೆಯಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಎನ್‌ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅವರು ಕುಳಿತ ಸಾರೋಟು ಕಂಗೊಳಿಸಿತು. ಮೆರವಣಿಗೆಯಲ್ಲಿ ಮಕ್ಕಳಿಂದ ವಿವಿಧ ಕಲಾಪ್ರಕಾರಗಳು ಅನಾವರಗೊಂಡಿತು. ಕೀಲುಕುದುರೆ, ಲಂಬಾಣಿ ನೃತ್ಯ, ಕಂಸಾಳೆ, ತಟ್ಟಿರಾಯ ಗೊಂಬೆಗಳು ನೋಡುಗರ ಮನಸೆಳೆಯಿತು.

ದೇಶವನ್ನು ಒಟ್ಟುಗೂಡಿಸುವ ರಾಷ್ಟ್ರೀಯತೆ ಶುರುವಾದದ್ದೆ 1948 ರ ನಂತರ. ಆದರೇ 1946 ರಲ್ಲಿಯೇ ರಾಷ್ಟ್ರೀಯ ಶಿಕ್ಷಣ ಸಮಿತಿ ಎಂಬ ಸಂಸ್ಥೆಯ ಮೂಲಕ ರಾಷ್ಟ್ರೀಯತೆಯ ಪರಿಕಲ್ಪನೆಯನ್ನ ಮೆರೆದದ್ದು ಅದ್ಭುತ

ಡಾ.ವೀರೇಂದ್ರ ಹೆಗ್ಗಡೆ

Ad Widget

Related posts

ಕಟ್ಟಡ ಕಾರ್ಮಿಕರು ಸೌಲತ್ತುಗಳನ್ನು ಬಳಸಿಕೊಳ್ಳಬೇಕು

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಭೂಮಿ ಪರಬಾರೆ ಇಲ್ಲ ಕ್ರೀಡಾ ಚಟುವಟಿಕೆ ನಿರ್ವಹಿಸಲಿರುವ ಸಾಯಿ: ಸಂಸದರಿಂದ ಸ್ಪಷ್ಟೀಕರಣ

Malenadu Mirror Desk

ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್. ರಘುನಾಥ್ ಗೆಲ್ಲಿಸಬೇಕು : ಎಸ್. ದತ್ತಾತ್ರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.