ಶಿವಮೊಗ್ಗ: ಶಾಲೆಯಲ್ಲಿ ಅಧಿಕ ಅಂಕ ಪಡೆದ ಮಕ್ಕಳಿಗೆ ತಂದೆಯೇ ಬಹುಮಾನ ವಿತರಣೆ ಮಾಡುವುದೆಂದರೆ ಅದು ಸಂಭ್ರಮದ ಉತ್ಯುಂಗ ಸ್ಥಿತಿ. ಇಂತಹ ಅದೃಷ್ಟ ಮತ್ತು ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ ಇಂತಹ ಅಪರೂಪದ ಅವಕಾಶ ಸಿಕ್ಕಿರುವುದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಎಂದರೆ ನಿಮಗೆ ಅಚ್ಚರಿಯಾಗುತ್ತದೆ.
ಬಿಷಫ್ ಕಾಟನ್ ಶಾಲೆಯ ಐಸಿಎಸ್ಸಿ ಹತ್ತನೇ ತರಗತಿಯಲ್ಲಿ ಮಧು ಬಂಗಾರಪ್ಪ ಅವರ ಮಗ ಸೂರ್ಯ ಅವರು ಶೇ.98.6ಅಂಕ ಪಡೆದು ಶಾಲೆಗೆ ಎರಡನೇ ರ್‍ಯಾಂಕ್ ಪಡೆದಿದ್ದಾನೆ.
ಗುರುವಾರ ನಡೆದ ಸಾಧಕ ಮಕ್ಕಳಿಗೆ ವಾರ್ಷಿಕ ಗೌರವ ಸಮರ್ಪಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದು, ಮಗ ಸೂರ್ಯಸೇರಿದಂತೆ ರ್‍ಯಾಂಕ್ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಅಪ್ಪನಾಗಿ ಸೂರ್ಯನಿಗೆ ಬಹುಮಾನ ವಿತರಿಸುವ ಮತ್ತು ಆತನ ಸಾಧನೆ ಸಾಕ್ಷಿಯಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಂತೋಷವಾಯಿತು ಎಂದು ಮಧುಬಂಗಾರಪ್ಪ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸೂರ್ಯ ಮಧುಬಂಗಾರಪ್ಪ ಅವರ ತಾಯಿ ಅನಿತಾ ಮಧುಬಂಗಾರಪ್ಪ ಅವರೂ ಪಾಲ್ಗೊಂಡು ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಸಂಸ್ಥೆ ಮುಖ್ಯಸ್ಥರಾದ ರೆ.ಸಾಮ್ಯುವಲ್ ಸೂರ್ಯನಿಗೆ ಶುಭಕೋರಿದರು.