ಶಿವಮೊಗ್ಗ : ಮದ್ಯಪಾನ ಹಾಗೂ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದ ವ್ಯಕ್ತಿಯೊಬ್ಬರಿಗೆ ಸ್ಥಳೀಯ ನ್ಯಾಯಾಲಯ ಬರೋಬ್ಬರಿ 14,500 ರೂ. ದಂಡ ವಿಧಿಸಿದೆ.
ನಗರದ ನೆಹರೂ ರಸ್ತೆಯಲ್ಲಿ ಭಾನುವಾರ ಇಲ್ಲಿನ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ದ್ವಿಚಕ್ರ ವಾಹನ ಸವಾರರೊಬ್ಬರು ಮದ್ಯಪಾನ ಮಾಡಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದರು.
ಇದರ ಜೊತೆಗೆ ನಂಬರ್ ಪ್ಲೇಟ್, ಎಮಿಷನ್ ಪ್ರಮಾಣ ಪತ್ರ, ಸೈಡ್ ಮಿರರ್ ಇರದ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯ 14,500 ರೂ. ದಂಡ ವಿಧಿಸಿ ಆದೇಶಿಸಿದೆ.
ವಾಹನ ತಪಾಸಣೆ ವೇಳೆ ಪೊಲೀಸ್ ಸಿಬ್ಬಂದಿಗಳಾದ ದಿನೇಶ್, ಹರೀಶ್ ಇದ್ದರು.