Malenadu Mitra
ರಾಜ್ಯ ಶಿವಮೊಗ್ಗ

ಭದ್ರಾವತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಹಲ್ಲೆ

ನಿಷೇಧಾಜ್ಞೆ ನಡುವೆಯೇ ಮತ್ತೊಂದು ಕೃತ್ಯ

ಶಿವಮೊಗ್ಗ ನಗರ ನಿನ್ನೆಯ ಭಾವಚಿತ್ರ ತೆರವು‌ ಮತ್ತು ಚಾಕು ಇರಿತದ ಘಟನೆಯಿಂದ ಹೊರಬಾರದಿರುವ ಮುನ್ನವೇ ಮಂಗಳವಾರ ಬೆಳಿಗ್ಗೆ ಭದ್ರಾವತಿಯಲ್ಲಿ ನಾಲ್ವರ ತಂಡ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದೆ.
ಭದ್ರಾವತಿಯ ನೆಹರೂ ನಗರದಲ್ಲಿ ಸುನಿಲ್ ಎಂಬಾತನ‌ ಮೇಲೆ ಮುಬಾರಕ್ ಅಲಿಯಾಸ್ ಡಿಚ್ಚಿ ಮತ್ತು ಮೂವರು ಈ ಕೃತ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸುನಿಲ್ ಮೂಗಿಗೆ ತೀವ್ರ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಮುಬಾರಕ್ ತಂಡ ಇರಿಯಲೆತ್ನಿದಾಗ ಕೂದಲೆಳೆಯ ಅಂತರದಲ್ಲಿ ಸುನಿಲ್ ಪಾರಾದನಾದರೂ ಮೂಗಿಗೆ ಗಾಯ ವಾಗಿದೆ.
ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ನಿಷೇಧಾಜ್ಣೆ ನಡುವೆಯೇ ಈ ಘಟನೆ ಸಂಭವಿಸಿದೆ.

Ad Widget

Related posts

ಜೆಪಿಎನ್ ಎಲ್ಲರಿಗೂ ಸ್ಫೂರ್ತಿ : ರಾಜಪ್ಪ

Malenadu Mirror Desk

ಶರಾವತಿ ಸಂತ್ರಸ್ತ ರಿಂದ ಶರಾವತಿ ಚಳುವಳಿ :ಆರ್. ಎಂ. ಮಂಜುನಾಥ್ ಗೌಡ

Malenadu Mirror Desk

ಪರೀಕ್ಷೆ ಬಿಟ್ಟು ಪೊಲೀಸರಿಗೆ ದೂರು ಕೊಟ್ಟ ನರ್ಸಿಂಗ್ ವಿದ್ಯಾರ್ಥಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.