Malenadu Mitra
ರಾಜ್ಯ ಹೊಸನಗರ

ಹೊಸನಗರ ಕ್ಷೇತ್ರ ಕೊಡಿ, ರೂಪುಗೊಳ್ಳುತ್ತಿದೆ ದೊಡ್ಡ ಆಂದೋಲನ

ಮುಳುಗಡೆ ಸಂತ್ರಸ್ತರು ಮತ್ತೋಮ್ಮೆ ಸಿಡಿದೆದ್ದಿದ್ದಾರೆ. ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ರಚನೆಗೆ ಅಗ್ರಹಿಸಿ ಬೀದಿಗಿಳಿದ್ದಾರೆ. ಜನ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ವಿಧಾನಸಭಾ ಕ್ಷೇತ್ರವನ್ನ ರದ್ದು ಪಡಿಸಲಾಗಿತ್ತು. ವಿಧಾನ ಸಭಾ ಕ್ಷೇತ್ರ ರದ್ದಾದಾಗಿನಿಂದ ತಾಲೂಕಿನ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ. ತಾಲೂಕಿನ ಜನತೆಗೆ ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿದೆ. ಮತ್ತೆ ಹೊಸನಗರವನ್ನ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ಮುದಿಟ್ಟುಕೊಂಡು ಬೀದಿಗಿಳಿದಿದಾರೆ. ಪಕ್ಷಾತೀತ ಹೋರಾಟದ ಮುಂಚೂಣಿಗೆ ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಶಾಸಕ ಬಿ.ಸ್ವಾಮಿರಾವ್ ಧುಮುಕಿರುವುದು ವಿಶೇಷವಾಗಿದೆ.
ಸೋಮವಾರ ಹೋರಾಟ ಸಮಿತಿ ತಹಶೀಲ್ದಾರ್ ಮೂಲಕ ಸರಕಾರ ಹಾಗೂ ಚುನಾವಣೆ ಆಯೋಗಕ್ಕೆ ಮನವಿ ನೀಡಿದೆ.ವಿಧಾನ ಸಭಾ ಕ್ಷೇತ್ರಕ್ಕೆ ಮಾನ್ಯತೆ ಸಿಗ ಬೇಕಾದರೆ ೨ಲಕ್ಷ ಜನಸಂಖ್ಯೆ ಹೊಂದಿರ ಬೇಕೆಂಬ ನಿಯಮವಿದೆ. ಅದರೆ ನಾಗಲ್ಯಾಂಡ್, ಮಿಜೋರಾಂ, ಅಸ್ಸಾಂ ನಲ್ಲಿ ಕಡಿಮೆ ಜನಸಂಖ್ಯೆಯಿದ್ದರು ಕ್ಷೇತ್ರಕ್ಕೆ ಮಾನ್ಯತೆ ಸಿಕ್ಕಿದೆ ಅದೆ ಮಾದರಿಯ ಪ್ರಕಾರ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರ ನೀಡುವಂತೆ ಒತ್ತಾಯ ಇಲ್ಲಿನ ಜನರದ್ದಾಗಿದೆ.


ಮುಳುಗಡೆ ಸಂತ್ರಸ್ತರ ಬವಣೆ:
ಲಿಂಗನಮಕ್ಕಿ ಅಣೆಕಟ್ಟಿಗೆ ತಮ್ಮ ಸರ್ವಸ್ವವನ್ನೆ ಭಾಗಿನದ ರೀತಿಯಲ್ಲಿ ಅರ್ಪಿಸಿದವರಿಗೆ, ಅಭಿವೃಧ್ಧಿ ಎನ್ನುವ ಪದವನ್ನ ಮಾತ್ರ ಸರ್ಕಾರ ಕನಸ್ಸಿನಲ್ಲಿಯೂ ಬೀಳದಂತೆ ನೋಡಿಕೊಂಡಿದೆ ಎನ್ನುವುದು ಹೊಸನಗರಿಗರ ಆರೋಪ…ನಾಡಿಗೆ ಬೆಳಕು ಕೊಟ್ಟವರು ಕತ್ತಲೆಯಲ್ಲೆ ಕೊಳೆಯುತ್ತಿದ್ದಾರೆ. ದೀಪದ ಬುಡದಲ್ಲೆ ಕತ್ತಲೆ ಎನ್ನುವಂತಾಗಿದೆ ನಮ್ಮ ಪರಿಸ್ಥಿತಿ ಎಂದು ಆಕ್ರೋಶವನ್ನು ಪ್ರತಿಭಟನಾಕಾರರು ವ್ಯಕ್ತಮಾಡಿದ್ದಾರೆ.


ಎರಡು ದೋಣಿ ಮೇಲೆ ಕಾಲು:
ಸಾಗರ ಮತ್ತು ತೀರ್ಥಹಳ್ಳಿ ವಿಧಾನ ಸಭಾಕ್ಷೇತ್ರಗಳಿಗೆ ಹೊಸನಗರ ವಿಧಾನ ಸಭಾ ಕ್ಷೇತ್ರದ ಪ್ರದೇಶಗಳನ್ನ ಹರಿದು ಹಂಚಿ ಕೊಡಲಾಗಿದೆ ಅ ಎರಡು ತಾಲೂಕುಗಳಲ್ಲೆ ಬೆಟ್ಟದಷ್ಟು ಸಮಸ್ಯೆಯಿದೆ. ಅದರ ಮಧ್ಯೆ ಹೊಸನಗರ ತಾಲೂಕನ್ನ ಸೇರಿಸಿರುವುದರಿಂದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಂತಾಗಿದೆ.. ಮೂಲಭೂತ ಸೌಕರ್ಯಗಳಾದ ರಸ್ತೆ, ಆಸ್ಪತ್ರೆ ಸೇರಿ ವಿದ್ಯುತ್ ಸಮಸ್ಯೆಯೂ ವ್ಯಾಪಕವಾಗಿದೆ. ಹೊಸನಗರ ತಾಲೂಕಿಗೆ ಇಬ್ಬರು ಶಾಸಕರು ಬರುವುದರಿಂದ ನೇಮಕಾತಿ, ಯೋಜನೆ, ಅನುದಾನ ಎಲ್ಲದಕ್ಕೂ ಇಬ್ಬರೂ ಶಾಸಕರ ಮೊರೆಹೋಗಬೇಕಿದೆ.ಈ ಸಮಸ್ಯೆಗೆ ಮುಕ್ತಿ ಹಾಡಲು ಹೊಸನಗರ ಕ್ಷೇತ್ರವನ್ನು ಪುನರ್ ರಚಿಸಬೇಕೆಂಬ ಆಂದೋಲನ ಆರಂಭವಾಗಿದೆ.
ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್. ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಹೋರಾಟಗಾರ ಟಿ.ಆರ್.ಕೃಷ್ಣಪ್ಪ, ಮುಸ್ಲಿಂ ಧರ್ಮಗುರುಗಳು, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು

.

Ad Widget

Related posts

ಫ್ಲೆಕ್ಸ್ ಗಲಾಟೆ ಚಾಕು ಇರಿತ ಒಬ್ಬನಿಗೆ ಮಾತ್ರ, ಅಮಾಯಕನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು, ನಗರಾದ್ಯಂತ ಮೂರು ದಿನ ನಿಷೇದಾಜ್ಞೆ, ಶಾಲೆಗಳಿಗೆ ಮಂಗಳವಾರ ರಜೆ

Malenadu Mirror Desk

ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ , ಏಪ್ರಿಲ್ 21ರಂದು ಸರಕಾರಿ ನೌಕರರ ದಿನಾಚರಣೆ

Malenadu Mirror Desk

ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಾಧರಿತ ಬದುಕನ್ನು ಕಟ್ಟಿಕೊಳ್ಳಬೇಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.