ಶಿವಮೊಗ್ಗದಲ್ಲಿ ಮಧ್ಯ ರಾತ್ರಿ ವಾಹನ ಜಖಂಗೊಳಿಸಿ ವಿಕೃತಿ ಮೆರೆದಿದ್ದ ಇನ್ನಿಬ್ಬರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಹಮದ್ ಸಲೀಂ(30) ಸೂಳೆಬೈಲು ಹಾಗೂ ಭರ್ಮಪ್ಪನಗರದ ಅಕ್ರಿಖಾನ್(32) ಬಂಧಿತ ವ್ಯಕ್ತಿಗಳಾಗಿದ್ದಾರೆ. ಈ ಇಬ್ಬರೂ ವ್ಯಕ್ತಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ವಾಹನ ಜಖಂಗೊಳಿಸಿರುವುದರ ಹಿನ್ನೆಲೆ ಏನು ಎಂಬ ಬಗೆ ತನಿಖೆ ಮುಂದುವರಿದಿದೆ. ಗಾಂಧೀಬಜಾರ್ ಸುತ್ತಮುತ್ತ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸ್ಥಳೀಯ ಮುಖಂಡರೊಂದಿಗೆ ಈ ಬಗ್ಗೆ ಸಭೆ ನಡೆಸಿ ಅಪರಾಧಿಗಳ ಅಸಲಿಯತ್ತು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ. ಆರೋಪಿಗಳು 14 ಕಾರು, ಒಂದು ಆಟೊ ಹಾಗೂ 5 ಬೈಕ್‍ಗಳನ್ನು ಜಖಂಗೊಳಿಸಿದ್ದರು.
previous post