ರಾಜ್ಯದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭಕ್ತರಿಗೆ ಅವಾಶ ಕಲ್ಪಿಸಲಾಗಿದೆ. ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಹಣ್ಣು ಕಾಯಿ ಮತ್ತು ಪ್ರಸಾದ ಹಾಗೂ ಅನ್ನದಾಸೋಹ ವ್ಯವಸ್ಥೆ ಇರುವುದಿಲ್ಲ ದೇಗುಲದ ಆವರಣವನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡುತ್ತಿದ್ದು, ಭಕ್ತರಿಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಬಗ್ಗೆ ಸ್ವಯಂಸೇವಕರು ಜಾಗೃತಿ ಮೂಡಿಸಲಿದ್ದಾರೆ.
ಶುಕ್ರವಾರ ಸ್ಥಳೀಯ ಹಾಗೂ ಹೊರಗಿನ ಭಕ್ತರು ಬಂದು ದೇವಿಯ ದರ್ಶನ ಪಡೆದರು. ದೇವಾಲಯದಲ್ಲಿಯೂ ನಿತ್ಯ ಪೂಜೆ ಎಂದಿನಂತೆ ನಡೆಯುತ್ತಿವೆ. ಭಕ್ತರು ಕೋವಿಡ್ ನಿಯಮ ಹಾಗೂ ಸರ್ಕಾರದ ಮಾರ್ಗಸೂಚಿಯನ್ವಯ ಬಂದು ದೇವಿಯ ದರ್ಶನ ಪಡೆಯಬಹುದು ಎಂದು ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್‍ನ ಆಡಳಿತ ಮಂಡಳಿ ತಿಳಿಸಿದೆ.
previous post