Malenadu Mitra
ರಾಜ್ಯ ಶಿವಮೊಗ್ಗ

ಕಸ ವಿಲೇವಾರಿ ಘಟಕಕ್ಕೆ ಅರಣ್ಯ ನಾಶ: ಪ್ರತಿಭಟನೆ

ರಿಪ್ಪನ್‍ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ದೂನ ಬಳಿಯ ಗ್ರಾಮಠಾಣಾ ಜಾಗದಲ್ಲಿ ಕಸವಿಲೆವಾರಿ ಘಟಕ ಅರಂಭಿಸುವ ಬಗ್ಗೆ ಮಂಗಳವಾರ ದೂನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆ ನಡೆಯಿತು.
ಏಕಾಏಕಿ ಗ್ರಾಮ ಪಂಚಾಯ್ತಿ ಅಡಳಿತದವರು ಹಾಗೂ ಅರಣ್ಯ ಪೊಲೀಸ್ ತಾಲ್ಲೂಕ್ ಪಂಚಾಯ್ತಿ ಇಓ ರವರ ನೇತೃತ್ವದಲ್ಲಿ ಬೆನವಳ್ಳಿ ಗ್ರಾಮದ ದೂನ ಬಳಿ ಗ್ರಾಮಠಾಣಾ ಜಾಗದಲ್ಲಿ ಕಸವಿಲೆವಾರಿ ಘಟಕಕ್ಕೆ ಜಾಗ ಗುರುತಿಸಲು ಮುಂದಾದಾಗ ನೂರಾರು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಲು ಮುಂದಾಗಿ ತಕ್ಷಣ ರಕ್ಷಣಾ ಇಲಾಖೆಯವರ ವಿರುದ್ದ ಪ್ರತಿಭಟನಾ ನಿರತರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸಿದರು.
ಗ್ರಾಮಸ್ಥರಾದ ಪಿಯೂಸ್‍ಡಿಸೋಜ್,ಸೋಮಶೇಖರ (ರಾಜು),ರೇಣುಕಪ್ಪ,ನಾಗರತ್ನ,ಗುರು,ದೂನಮುರುಗೆಪ್ಪ,ಬಾಲಚಂದ್ರ,ರತ್ನಮ್ಮ,ಗೀತಾ, ಪುಟ್ಟನಂಜ,ಮೋಹನ,ಮಂಜಪ್ಪ,ರಂಗಪ್ಪ,
ಮಲ್ಲಿಕಾರ್ಜುನ,ಮಂಜುನಾಥ,ಮಲ್ಲೇಶ್,ಗಣೇಶ್,ಇನ್ನಿತರ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Ad Widget

Related posts

ಆವಿಷ್ಕಾರ, ಬೆಳವಣಿಗೆಗಳನ್ನು ಜನರ ಒಳಿತಿಗೆ ಬಳಸಬೇಕು: ಪ್ರಥಮ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಇಸ್ರೋದ ಮಾಜಿ ಅಧ್ಯಕ್ಷ ಆರ್. ಕಿರಣ್‌ಕುಮಾರ್

Malenadu Mirror Desk

ಶಿವಮೊಗ್ಗ ನಗರಕ್ಕೆ ಬಿ.ವೈ. ವಿಜಯೇಂದ್ರ

Malenadu Mirror Desk

ಜೆಡಿಎಸ್ ನಾಯಕ ಎಂ.ಶ್ರೀಕಾಂತ್ ಕಾಂಗ್ರೆಸ್ ಕಡೆಗೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.