ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆಯಾದ ಘಟನೆ ಶಿವಮೊಗ್ಗ ಟ್ಯಾಂಕಮೊಹಲ್ಲಾದಲ್ಲಿ ನಡೆದಿದೆ. ರಾಹಿಲ್ ಎಂಬ ಯುವ ಕೊಲೆಯಾದ ದುರ್ದೈವಿ.
ಕಳೆದ ತಿಂಗಳು ರಾಹಿಲ್ ಬೈಕ್‍ನಲ್ಲಿ ಹೋಗುವಾಗ ಅಸ್ಗರ್ ಮತ್ತು ಆತನ ತಂದೆ ಸೈಕಲ್‍ನಲ್ಲಿ ಬರುತ್ತಿದ್ದರು. ಆ ಸಂದರ್ಭ ರಾಹಿಲ್ ಬೈಕ್‍ಗೆ ಸೈಕಲ್ ಗುದ್ದಿದ್ದರಿಂದ ಕೋಪಗೊಂಡ ರಾಹಿಲ್ ಅಸ್ಗರ್ ತಂದೆಗೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ತಂದೆಯ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ಆಕ್ರೋಶಗೊಂಡಿದ್ದ ಅಸ್ಗರ್ ಸೋಮವಾರ ರಾಹಿಲ್ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದ್ದಾನೆ. ತೀವ್ರಗಾಯಗೊಂಡ ರಾಹಿಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಕೊಟೆ ಪೊಲೀಸರ್ ಆರೋಪಿ ಅಸ್ಗರ್‍ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಎಸ್ಪಿ ಶೇಖರ್, ಡಿವೈಸ್ಪಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.
next post