Malenadu Mitra
ರಾಜ್ಯ ಶಿವಮೊಗ್ಗ

ಶಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್‌ಗೆ ಸೋಲು

ಅವಿಶ್ವಾಸ ಗೊತ್ತುವಳಿಯಲ್ಲಿ ಶಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್‌ಗೆ ಸೋಲಾಗಿದೆ.ಒಕ್ಕೂಟದ ಎಲ್ಲಾ ನಿರ್ದೇಶಕರುಗಳು ಅಧ್ಯಕ್ಷರ ವಿರುದ್ದ ಮತ ಚಲಾಯಿಸಿದ್ದಾರೆ.
ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಸಭಾಂಗಣದಲ್ಲಿ ಅವಿಶ್ವಾಸ ಸಭೆ ನಡೆಯಿತು.೧೪ ನಿರ್ದೇಶಕರ ಪೈಕಿ ೧೩ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.ಎಲ್ಲಾ ನಿರ್ದೇಶಕರು ಶಿಮುಲ್ ಅಧ್ಯಕ್ಷ ಡಿ.ಆನಂದ್  ಅವರ ವಿರುದ್ದ ಮತ ಚಲಾಯಿಸಿದ್ದಾರೆ.ಇದರಿಂದಾಗಿ ಡಿ.ಆನಂದ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತಾಗಿದೆ.ಈ ಮಧ್ಯೆ ಡಿ.ಆನಂದ್ ಅವರು ಸಭೆಗೆ ಗೈರಾಗಿದ್ದರು.
ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್.ಡೋಂಗ್ರೆ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್ ಸಭೆಯಲ್ಲಿದ್ದರು.
ಪ್ರಬಾರ ಅಧ್ಯಕ್ಷ:
ಅಧ್ಯಕ್ಷರ ಪದಚ್ಯುತಿಯ ಹಿನ್ನಲೆ ಆಡಳಿತಾತ್ಮಕ ದೃಷ್ಟಿಯಿಂದ ಶಿಮುಲ್ ಉಪಾಧ್ಯಕ್ಷರೇ ಪ್ರಭಾರ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.ಶಿಮುಲ್ ಉಪಾಧ್ಯಕ್ಷ ಹೆಚ್.ಕೆ  ಬಸಪ್ಪ ಅವರು ಪ್ರಬಾರ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು,ಇದಕ್ಕಾಗಿ ಸಹಕಾರ ಇಲಾಖೆ ಚುನಾವಣಾ ದಿನಾಂಕ ಪ್ರಕಟಿಸಲಿದೆ.

ಪದಚ್ಯುತಿ ಹಿನ್ನಲೆ?

ಅಧ್ಯಕ್ಷರ ಅವಧಿ ಮುಗಿದ ಹಿನ್ನಲೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇ ನಡೆಸಲಾಗಿತ್ತು.ಆದರೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಡಿ.ಆನಂದ್ ಅವರು ನಿರಾಕರಿಸಿದ್ದರು.ಹಾಗಾಗಿ ೧೪ ಸದಸ್ಯರ ಪೈಕಿ ೧೦ ನಿರ್ದೇಶಕರು ಡಿ.ಆನಂದ್ ಅವರ ವಿರುದ್ದ ಅವಿಶ್ವಾಸ ಮಂಡನೆಗೆ ಸಭೆ ಕರೆಯಬೇಕು ಎಂದು ಜೂನ್ ತಿಂಗಳಲ್ಲಿ ನೋಟಿಸ್ ನೀಡಿದ್ದರು.ಈ ಹಿನ್ನಲೆಯಲ್ಲಿ ಜೂನ್ ೧೫ರಂದು ಸಭೆ ನಡೆಸಲಾಗಿತ್ತು.ಆದರೆ ಅವಿಶ್ವಾಸ ಮಂಡನೆಗೆ ತಡೆಯಾಜ್ಣೆ ಕೋರಿ ಡಿ.ಆನಂದ್ ಹೈಕೋಟ್ ಮೆಟ್ಟಿಲೇರಿದ್ದರು.ಆದರೆ  ಡಿ.ಆನಂದ್ ಅವರು ಸಲ್ಲಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡಿತ್ತು.ಹಾಗಾಗಿ ಹೈಕೋರ್ಟ್‌ನ ಮತ್ತೊಂದು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯೂ ವಜಾಗೊಂಡಿದ್ದರಿಂದ ಅಕ್ಟೋಬರ್ ೨೨ರಂದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ನಿಗದಿಯಾಗಿತ್ತು.ಹಾಗಾಗಿ ಒಕ್ಕೂಟದ ಎಲ್ಲಾ ಸದಸ್ಯರು ಅಧ್ಯಕ್ಷ ಡಿ.ಆನಂದ್ ಅವರ ವಿರುದ್ದ ಮತ ಚಲಾಯಿಸಿದ್ದರಿಂದ ಸೋಲಾಗಿದೆ

Ad Widget

Related posts

ಬಿಎಸ್ ವೈ ಬೆನ್ನಿಗೆ ಯುವಸಂಗಮ

Malenadu Mirror Desk

ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ : ಸಚಿವ ಕಿರಣ್ ರಿಜಿಜು

Malenadu Mirror Desk

ದೆವ್ವದ ಹೆಸರಲ್ಲಿ ವೀಡಿಯೋ ವೈರಲ್ : ಶೇರ್ ಮಾಡೋರಿಗೆ ಶಿವಮೊಗ್ಗ ಪೊಲೀಸರ ವಾರ್ನಿಂಗ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.