ಶಿಕ್ಷಣ ತಜ್ಞ ಪ್ರೊ.ಪಿ.ವಿ.ಕೃಷ್ಣ ಭಟ್ ಸೇರಿದಂತೆ ಶಿವಮೊಗ್ಗದ ನಾಲ್ವರು ಸಾಧಕರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರೊ.ಪಿ.ವಿ ಕೃಷ್ಣಭಟ್ , ಜಾನಪದ ವಿಭಾಗದಲ್ಲಿ ಹಸೆ ಚಿತ್ತಾರ ಕಲಾವಿದೆ ಸಾಗರದ ಗೌರಮ್ಮ ಹುಚ್ಚಪ್ಪ ಮಾಸ್ತರ್, ಯಕ್ಷಗಾನ ವಿಭಾಗದಲ್ಲಿ ಗೋಪಾಲ ಆಚಾರ್ಯ ಹಾಗೂ ಯೋಗ ವಿಭಾಗದಲ್ಲಿ ಬಾ.ಮ.ಶ್ರೀಕಂಠ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಸೋಮವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪಿ.ವಿ.ಕೃಷ್ಣ ಭಟ್:
ಶಿವಮೊಗ್ಗ ದೇಶೀಯ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದ ಕೃಷ್ಣ ಭಟ್ ಅವರು ಪ್ರಸ್ತುತ ಒಡಿಸ್ಸಾದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾರೆ. ಅಖಿಲಭಾರತೀಯ ವಿದ್ಯಾರ್ಥಿಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಪಿವಿಕೆ ಅವರು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಪಟ್ಲಮನೆ ಗ್ರಾಮದಲ್ಲಿಜನಿಸಿದ್ದು, ಹೇರಂಬಾಪುರ ಶಾಲೆಯಲ್ಲಿಪ್ರಾಥಮಿಕ ಶಿಕ್ಷ ಣ, ಶಿವಮೊಗ್ಗದಲ್ಲಿಪ್ರೌಢ ಹಾಗೂ ಕಾಲೇಜು ಶಿಕ್ಷ ಣ , ಬೆಂಗಳೂರು ವಿವಿಯಲ್ಲಿಎಂಎ ಪದವಿ ಪಡೆದಿದ್ದಾರೆ.
ಡಿವಿಎಸ್ ಕಾಲೇಜಿನಲ್ಲಿಸಮಾಜಶಾಸ್ತ್ರ ವಿಷಯದಲ್ಲಿಉಪನ್ಯಾಸಕರಾಗಿ ಸತತ ೩೦ ವರ್ಷಗಳ ಕಾರ್ಯನಿರ್ವಹಿಸಿದ್ದಾರೆ. ನಿವೃತ್ತಿ ನಂತರ ಬೆಂಗಳೂರಿನಲ್ಲಿವಾಸವಾಗಿದ್ದಾರೆ.
ವಿದ್ಯಾಥಿ ಜೀವನದಿಂದಲೇ ನಾನಾ ಸಂಘ, ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿ ಪರಿಷತ್‌ನಲ್ಲಿಕಳೆದ ೪೦ ವರ್ಷಗಳಿಂದ ಕೆಲಸ ಮಾಡಿದ್ದಾರೆ. ೧೯೭೫ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ನಡೆದ ಹೋರಾಟದಲ್ಲಿಪಾಲ್ಗೊಂಡು ಬಳ್ಳಾರಿಯಲ್ಲಿ೧೯ ತಿಂಗಳು ಜೈಲು ವಾಸ ಕೂಡ ಅನುಭವಿಸಿದ್ದಾರೆ. ಐಸಿಎಸ್‌ಎಸ್‌ಆರ್ ಕೇಂದ್ರ ಸಮಿತಿ ಸದಸ್ಯ ಹಾಗೂ ಒಡಿಶಾದ ಕೇಂದ್ರೀಯ ವಿವಿಯ ಚಾನ್ಸಲರ್ (ಕುಲಾಧಿಪತಿ) ಆಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ಗೌರಮ್ಮ ಹುಚ್ಚಪ್ಪ ಮಾಸ್ತರ್
ಗೌರಮ್ಮ ನಾಡಿನ ಹೆಸರಾಂತ ಜಾನಪದ ವಿದ್ವಾಂಸ ದಿ.ಹುಚ್ಚಪ್ಪಮಾಸ್ತರ್ ಅವರು ಪತ್ನಿಯಾಗಿದ್ದಾರೆ. ಮಲೆನಾಡಿನ ಆದಿಮ ಕಲೆ ಹಸೆಚಿತ್ತಾರ ಕಲೆಯನ್ನು ಬಾಲ್ಯದಿಂದಲೂ ಜೀವನಾಡಿಯಂತೆ ಪೋಷಿಸಿಕೊಂಡು ಬಂದಿರುವ ಗೌರಮ್ಮರಿಗೆ ಈ ಕಲೆಗಾಗಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು. ನಿರ್ಲಕ್ಷಿತ ಕಲಾ ಪ್ರಕಾರವೊಂದನ್ನು ಮಲೆನಾಡಿನ ದೀವರ ಸಮುದಾಯ ಅತ್ಯಂತ ಕ್ರಿಯಾಶೀಲತೆಯಿಂದ ತನ್ನ ಅಂತರಂಗದಲ್ಲಿ ಪೋಷಿಸುತ್ತಿದೆ, ಇದರಲ್ಲಿ ಮುಖ್ಯರಾದವರು ಗೌರಮ್ಮನವರು. ವಿಶೇಷವೆಂದರೆ ದಿ.ಹುಚ್ಚಪ್ಪ ಮಾಸ್ತರ್ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು, ಪತಿ-ಪತ್ನಿ ಇಬ್ಬರಿಗೂ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಿಕ್ಕಿರುವುದು ಇದೇ ಮೊದಲಾಗಿದೆ. ೧೯೯೨ ರಲ್ಲಿ ಹುಚ್ಚಪ್ಪ ಮಾಸ್ತರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರು ಸಾಗರದ ಮಂಕಳಲೆ ರಸ್ತೆಯ ನಿವಾಸಿ. ಜೂ ೧, ೧೯೪೫ರಲ್ಲಿತಾಲೂಕಿನ ಕಾನ್ಲೆಯ ಪಡವಗೋಡಿನಲ್ಲಿಜನಿಸಿದರು. ಔಪಚಾರಿಕ ಶಿಕ್ಷ ಣ ಪಡೆಯದಿದ್ದರೂ ತಾಯಿಯಿಂದ ಜಾನಪದ ಹಾಡು ಮತ್ತು ಹಸೆ ಚಿತ್ತಾರ ಕಲೆಯ ಶಿಕ್ಷ ಣ ದೊರಕಿತು. ೧೧ನೆಯ ವಯಸಿನಿಂದ ಹಾಡುಗಳನ್ನು ಗುನುಗುತ್ತಾ ಹಸೆ ಚಿತ್ತಾರ ಬಿಡಿಸುತ್ತ ಗೌರಮ್ಮ ಬೆಳೆದರು. ರೈತಾಪಿ ಶ್ರಮ ಸಂಸ್ಕೃತಿಯಲ್ಲಿ ಬೆಳೆದವರು. ಬಿಳಿ ಹಸೆ, ಕೆಂಪು ಹಸೆ, ಮದುವೆ ಮನೆ ಹಸೆ, ಬೂಮಣ್ಣಿ ಬುಟ್ಟಿಯ ಕಲಾತ್ಮಕ ಚಿತ್ತಾರ , ಭತ್ತದ ತೆನೆಯ ಬಾಗಿಲು ತೋರಣ, ಹಿಟ್ಟಂಡೆ ಹುಲ್ಲಿನಾಭರಣದ ಬುಟ್ಟಿಗಳು, ಇನ್ನೂ ಮುಂತಾದ ಜಾನಪದೀಯ ಚಿತ್ತಾರಗಳಲ್ಲಿಗೌರಮ್ಮ ಸಿದ್ಧಹಸ್ತರು. ಆಶ್ವಾಸನ್ ಸಂಸ್ಥೆಯ ಲಲಿತಕಲೆಯ ಗೌರವ ಮುಂತಾದವುಗಳು ಗೌರಮ್ಮ ಅವರ ಹಿರಿಮೆಗೆ ಸಾಕ್ಷಿಯಾಗುವ ಪ್ರಶಸ್ತಿಗಳು. ನೂರಕ್ಕೂ ಹೆಚ್ಚು ಕಮ್ಮಟ, ಉಪನ್ಯಾಸ, ತರಬೇತಿ ಕಾರ್ಯಗಾರಗಳಲ್ಲಿಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಬಾ.ಮ.ಶ್ರೀಕಂಠ:
ಹಿರಿಯ ಯೋಗ ಗುರು ಬಾ.ಮ.ಶ್ರೀಕಂಠ ಅವರಿಗೆ ಯೋಗ ವಿಭಾಗದಲ್ಲಿ ಪ್ರಶಸ್ತಿ ಬಂದಿರುವುದು ಮಲೆನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ಆರ್.ಎಸ್.ಎಸ್ ನಿಷ್ಠಾವಂತ ಕಟ್ಟಾಳು ಶ್ರೀಕಂಠ ಅವರು ಎಲೆಮರೆಯ ಕಾಯಿಯಂತೆ ಜನ ಸೇವೆ ಮಾಡಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ಯೋಗ ಕಲಿಸಿಕೊಡುವ ಅವರು ಸರಳ ಮತ್ತು ಸಜ್ಜನಿಕೆಗೆ ಹೆಸರಾದವರು. ಅವರು ಪ್ರಚಾರ ಪ್ರಶಸ್ತಿ ಇತ್ಯಾದಿಗಳಿಂದ ದೂರ ಇದ್ದವರು. ಸರಕಾರ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅವರ ಶಿಷ್ಯವರ್ಗಕ್ಕೆ ಹರ್ಷ ತಂದಿದೆ. ಶ್ರೀಕಂಠ ಅವರು ಶಿವಮೊಗ್ಗದ ಬಿ.ಬಿ.ಸ್ಟ್ರೀಟ್ ನಿವಾಸಿಯಾಗಿದ್ದು, ೧೯೮೧ ರಿಂದ ಯೋಗ ಕ್ಷೇತ್ರದಲ್ಲಿನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿರುವ ೩೫ ಯೋಗ ಕೇಂದ್ರಗಳಿದ್ದು, ಅವುಗಳ ಪೈಕಿ ನಿತ್ಯ ಒಂದೆರಡು ಕೇಂದ್ರಗಳಲ್ಲಿಯೋಗ ತರಬೇತಿ ನೀಡುತ್ತಾ ಬಂದಿದ್ದಾರೆ. ಬೆಂಗಳೂರು ಬಿ.ಕೆ.ಎಸ್. ಐಯ್ಯಂಗಾರ ಅವರ ಬಳಿ ಯೋಗ ತರಬೇತಿ ಪಡೆದಿದ್ದಾರೆ. ಅಜೀತ ಯೋಗ ಕೇಂದ್ರ ಬೆಂಗಳೂರು ಇವರು ಯೋಗಶ್ರೀ ಪ್ರಶಸ್ತಿ ನೀಡಿದ್ದಾರೆ. ಶ್ರೀಕಂಠ ಅವರು ಕಳೆದ ೬೦ ವರ್ಷಗಳಿಂದ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯಕ್ಷಗಾನಕ್ಕೆ ಪ್ರಶಸ್ತಿ
ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿಯಲ್ಲಿಜನಿಸಿರುವ ಆಚಾರ್ಯ ಅವರು ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡದ ಕುಂದಾಪುರದಲ್ಲಿವಾಸವಾಗಿದ್ದಾರೆ.
ಯಕ್ಷ ಗಾನದ ಬಗ್ಗೆ ಗೋಪಾಲಾಚಾರ್ಯರಿಗೆ ಇದ್ದ ಅತೀವ ಆಸ್ಥೆಯಿಂದಾಗಿ ತಮ್ಮ ೧೪ ವರ್ಷದಿಂದಲೇ ತೊಡಗಿಸಿಕೊಂಡರು. ಆರಂಭದಿಂದಲೂ ಯಕ್ಷ ಗಾನದ ಬಗ್ಗೆ ಕೇಳಿ ಅದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ. ಇವರು ರಾಜ್ಯದ ಬಹುತೇಕ ಎಲ್ಲಜಿಲ್ಲೆಗಳಲ್ಲೂಯಕ್ಷ ಗಾನ ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೇ ದೇಶ, ವಿದೇಶಗಳಲ್ಲೂಯಕ್ಷಗಾನ ಪ್ರದರ್ಶನ ನೀಡಿದ್ದಾರೆ ಹಲವು ವರ್ಷಗಳಿಂದ ಕಲಾಸೇವೆ ಮಾಡಿಕೊಂಡು ಬಂದಿರುವ ಅವರಿಗೆ ಪ್ರಶಸ್ತಿ ಬಂದಿರುವುದು ಯಕ್ಷಪ್ರೇಮಿಗಳಲ್ಲಿ ಸಂತಸ ಮೂಡಿದೆ.