ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾರ್‍ಯಕರ್ತರನ್ನು ವಿವಿಧ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಈ ಮೂಲಕ ಕಾರ್‍ಯಕರ್ತರ ಶ್ರಮಕ್ಕೆ ಬೆಲೆ ಕೊಡಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ನಿಗಮ, ಮಂಡಳಿಗಳಿಗೆ ನೇಮಕವಾದ ಸದಸ್ಯ ರನ್ನು ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿ ಅವರು ಮಾತನಾಡಿ ದರು. ಕಾರ್‍ಯಕರ್ತರಿಗೆ ಈಗ ಜವಾಬ್ದಾರಿ ಕೊಡಲಾಗಿದೆ. ಇದನ್ನು ಸಮರ್ಥವಾಗಿ ಅವರು ನಿಭಾಯಿಸಬೇಕು. ಈ ಅವಕಾಶ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿ ಮತ್ತು ಪಕ್ಷದ ಅಭಿವೃದ್ದಿಗೆ ಶ್ರಮಿಸಬೇಕು. ಕಾರ್‍ಯಕರ್ತರೇ ಶಕ್ತಿ ಎನ್ನುವ ಮಾತಿಗೆ ಪಕ್ಷದಲ್ಲಿ ಬೆಲೆ ಇರುವುದರಿಂದಲೇ ವಿವಿಧ ಹುದ್ದೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್ ಮಾತನಾಡಿ, ಕಾರ್‍ಯಕರ್ತರು ಇನ್ನಷ್ಟು ಹೆಚ್ಚು ಸೇವೆಯನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ಗ್ರಾಪಂ ಚುನಾವಣೆಯಲ್ಲೂ ಇದರ ಸದ್ಬಳಕೆಯಾಗಬೇಕು. ಎಲ್ಲರೂ ಸೇರಿ ಜವಾಬ್ದಾರಿಯುತವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದರು. ಸ್ಬುಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಆರ್‍ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ಘನಿ ಮೊದಲಾದವರನ್ನು ಗೌರವಿಸಲಾಯಿತು. ಶಿವಮೊಗ್ಗ- ಚಿತ್ರದುರ್ಗ ಚತುಷ್ಪಥ ರಸ್ತೆ ಕಾಮಗಾರಿಗೆ ಶಿಲಾನ್ಯಾಸ, ವಿದ್ಯಾನಗರ ರೈಲ್ವೆ ಮೇಲ್ಸೇತುವೆ ನಿರ್‍ಮಾಣ, ಬೈಂದೂರು- ರಾಣೆಬೆನ್ನೂರು ರಸ್ತೆಯನ್ನು ಚತುಷ್ಪಥಗೊಳಿಸುವ ಕಾರ್‍ಯಕ್ಕೆ ಡಿ. ೧೯ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸವನ್ನು ಆನ್‌ಲೈನ್ ಮೂಲಕ ನೆರವೇರಿಸುವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ- ಚಿತ್ರದುರ್ಗದ ೧೩೪ ಕಿ ಮೀ ರಸ್ತೆಯನ್ನು ೫೨೯ ಕೋಟಿ ರೂ. ನಲ್ಲಿ, ಬೈಂದೂರು- ರಾಣೆಬೆನ್ನೂರು ರಸ್ತೆಯನ್ನು ೨೩ ಕೋಟಿ ರೂನಲ್ಲಿ ಅಭಿವೃದ್ಧಿಪಡಿಸಲಾಗುವುದು. ರೈಲ್ವೆ ಮೇಲ್ಸೇತುವೆಗೆ ೪೩ ಕೋಟಿ ರೂ ಅಂದಾಜು ವೆಚ್ಚ ತಯಾರಿಸಲಾಗಿದೆ. -ರಾಘವೇಂದ್ರ, ಸಂಸದ ReplyForward |
previous post