Malenadu Mitra
ರಾಜ್ಯ ಶಿವಮೊಗ್ಗ

ರೆಡ್‍ಕ್ರಾಸ್‍ನಿಂದ ಮೆಗ್ಗಾನ್‍ಗೆ ವೆಂಟಿಲೇಟರ್

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ 16 ಲಕ್ಷ ಮೌಲ್ಯದ ವೆಂಟಿಲೇಟರ್ ಹಾಗೂ 2ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತಿತರ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆಯ ಉಪಾಸಭಾಪತಿ ಡಾ. ವಿಎಲ್‍ಎಸ್ ಕುಮಾರ್, ಶಿವಮೊಗ್ಗದ ಎಸ್.ಪಿ.ದಿನೇಶ್, ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ ಅವರಿಗೆ ಉಪಕರಣಗಳನ್ನು ಹಸ್ತಾಂತರಿಸಿದರು.

ಕೊರೊನದಿಂದ ಜನರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಶ್ರಮಿಸುತ್ತಿದೆ. ಸಂಸ್ಥೆ ಜತೆಗೆ ಸಾರ್ವಜನಿಕರು ಕೈಜೋಡಿಸಬಹುದು. ತಮ್ಮ ನೆರವನ್ನು ಸಂಸ್ಥೆಗೆ ತಂದು ಕೊಟ್ಟರೆ, ಅದನ್ನು ಸಂತ್ರಸ್ಥರಿಗೆ ತಲುಪಿಸಲಾಗುವುದು. ಸರಕಾರಿ ಆಸ್ಪತ್ರೆಗಳಿಗೆ ನೇರವಾಗಿಯೂ ತಲುಪಿಸಬಹುದು. ಸಂಸ್ಥೆಯು ಪಿಪಿಟಿ ಕಿಟ್‍ಗಳನ್ನು ಪೂರೈಕೆ ಮಾಡಲಿದೆ

-ಎಸ್.ಪಿ.ದಿನೇಶ್, ಸಭಾಪತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಶಿವಮೊಗ್ಗ ಜಿಲ್ಲೆ

Ad Widget

Related posts

ದುಬೈ ಕನ್ನಡ ಸಂಘದಿಂದ 5 ಲಕ್ಷ ಮೌಲ್ಯದ ಮಾಸ್ಕ್, ಸ್ಟೀಮರ್ ವಿತರಣೆ

Malenadu Mirror Desk

ಪೆಟ್ರೋಲ್ ದರ ಏರಿಕೆಯಿಂದ ಜನಜೀವನ ಕಷ್ಟ :ಕಾಗೋಡು

Malenadu Mirror Desk

ಸಹನಾ ಕ್ರಿಕೆಟರ್ಸ್‍ನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯ : ಬೆಂಗಳೂರು ಪ್ರಥಮ, ತೀರ್ಥಹಳ್ಳಿ ದ್ವಿತೀಯ,ಕ್ರಮವಾಗಿ 1,50,000 ಹಾಗೂ 75000 ರೂ. ಗೆದ್ದ ತಂಡಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.