Malenadu Mitra
ರಾಜ್ಯ ಶಿವಮೊಗ್ಗ

ಪುರದಾಳು ಸಮೀಪ ಕಾಡಾನೆ ಹಾವಳಿ: ಅಡಕೆ, ತೆಂಗು ಮತ್ತು ಬಾಳೆಬೆಳೆ ನಾಶ

ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಆಲದೇವರ ಹೊಸೂರು ಸಮೀಪದ ಕಿಮ್ಮನೆ ಗಾಲ್ಫ್ ಕ್ಲಬ್ ಹಿಂಭಾಗದ ಹೊಲಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಮಾಡಿದೆ.
ಶನಿವಾರ ರಾತ್ರಿ ಹೊಸೂರು ಕೆರೆ ಆಜುಬಾಚಿನ ತೋಟಗಳಿಗೆ ನುಗ್ಗಿದ ಒಂಟಿ ಸಲಗ ಅಡಕೆ, ತೆಂಗು ಹಾಗೂ ಬಾಳೆತೋಟಗಳಿಗೆ ನುಗ್ಗಿ ಲೂಟಿ ಮಾಡಿದೆ. ಈ ಭಾಗದಲ್ಲಿ ಆನೆ ಹಾವಳಿ ಮಾಮೂಲಿಯಾಗಿದ್ದು, ನಗರ ಪ್ರದೇಶಕ್ಕೆ ಅತೀ ಹತ್ತಿರದಲ್ಲಿರುವ ಈ ತೋಟಗಳಿಗೆ ನಿರಂತರವಾಗಿ ಆನೆ ನುಗ್ಗುತ್ತಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.


ಕಳೆದ ಆರು ತಿಂಗಳಿಂದ ಪುರದಾಳು ಹಾಗೂ ಹೊಸೂರು ಸುತ್ತ ಆನೆ ಸಂಚಾರ ನಿರಂತರವಾಗಿದ್ದು, ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಾಲ್ಕಕ್ಕೂ ಹೆಚ್ಚು ಕಾಡಾನೆಗಳು ಸಂಚರಿಸುತ್ತಿದ್ದು,ಕಾಡಲ್ಲಿ ಯಥೇಚ್ಚ ಆಹಾರವಿದ್ದರೂ ಅವು ನಾಡಿನತ್ತ ಬರುತ್ತಿವೆ. ಅರಣ್ಯದೊಳಗಿನ ಕೆರೆ ಭಾರೀ ಮಳೆಯಿಂದ ಒಡೆದುಹೋಗಿದ್ದು, ಅದನ್ನು ಅರಣ್ಯ ಇಲಾಖೆ ದುರಸ್ತಿ ಮಾಡಿಲ್ಲ. ಈ ಕಾರಣದಲ್ಲಿ ಅಲ್ಲಿ ನೀರಿಲ್ಲದೇ ಊರಂಚಿನ ಕೆರೆಗಳಿಗೆ ಕಾಡಾನೆ ಬರುವಂತಾಗಿದೆ. ಕಾಡಂಚಿನಲ್ಲಿ ಸಮರ್ಪಕ ಟ್ರಂಚ್ ಹೊಡೆದರೂ ಆನೆ ಹಾವಳಿ ನಿಯಂತ್ರಿಸಬಹುದು ಆದರೆ ಈ ಮುಂಜಾಗ್ರತಾ ಕ್ರಮಗಳಿಲ್ಲದ ಕಾರಣ ಹೊಸೂರು ಗ್ರಾಮದ ರಾಜಪ್ಪ, ಬಸವರಾಜ್, ಗಣಪತಿಯಪ್ಪ ಮತ್ತಿತರರ ತೋಟಗಳು ಆನೆಯಿಂದ ಧ್ವಂಸಗೊಳ್ಳುತ್ತಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮ್ಥರಿಗೆ ಕಾಡಾನೆ ಹಾವಳಿಯಿಂದ ರಕ್ಷಣೆ ನೀಡಬೇಕಿದೆ.

ಕಷ್ಟಪಟ್ಟು ದುಡಿದು ಮಾಡಿದ ತೋಟ ಆನೆ ಹಾವಳಿಗೆ ನಾಶವಾಗುತ್ತಿರುವುದು ಕಣ್ಣಿಂದ ನೋಡಲಾಗುತ್ತಿಲ್ಲ. ಕಷ್ಟಕಾಲದಲ್ಲಿ ಫಸಲು ಬರುವ ನಿರೀಕ್ಷೆಯಲ್ಲಿರುವಾಗಲೇ ಬೆಳೆ ಮಣ್ಣಾಗುತ್ತಿದೆ. ಈ ಭಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದೆ. ಆನೆ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ನಮಗೊಂದು ಶಾಶ್ವತ ಪರಿಹಾರ ಕಂಡುಕೊಡಬೇಕು
ರಾಜು ಕಾಗರಸೆ, ರೈತ

Ad Widget

Related posts

ನಕ್ಸಲ್ ಭಾದಿತ ಪ್ರದೇಶಚುನಾವಣೆ ಬಹಿಷ್ಕಾರ

Malenadu Mirror Desk

ಸಿಮ್ಸ್‍ನಲ್ಲಿ ಕೋವಿಡ್ ಡ್ರೈ ರನ್ ಹೇಗಿದೆ ಗೊತ್ತಾ

Malenadu Mirror Desk

ಕಾಲೇಜಿಗೆ ಬಂದಿದ್ದ ಬಣ್ಣದ ಚಿಟ್ಟೆಗಳು ಚೆಲುವಿನ ಚಿತ್ತಾರ ಬಿಡಿಸಿದ್ದವು…

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.