ಹೊಸನಗರ: ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಮಧುಬಂಗಾರಪ್ಪ ಅವರು ಭರ್ಜರಿ ರೋಡ್ ಶೊ ಮಾಡುವ ಮೂಲಕ ಮತಯಾಚನೆ ಮಾಡಿದರು.
ಸಾಗರ, ಆನಂದಪುರಂ, ಹೊಸನಗರ ಹಾಗೂ ರಿಪ್ಪನ್‌ಪೇಟೆಯಲ್ಲಿ ರೋಡ್‌ಶೋ ಮೂಲಕ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಶಿವರಾಜ್ ಕುಮಾರ್ ಅವರು, ’ಸುಡುವ ಬಿಸಿಲಿನಲ್ಲೂ ನನಗಾಗಿ ಕಾದಿದ್ದೀರಿ. ಪ್ರೀತಿ ಅಭಿಮಾನ ತೋರಿದ್ದೀರಿ. ಅದಕ್ಕೆ ಚಿರಋಣಿ. ನಿಮ್ಮ ಪ್ರೀತಿ ಮತವಾಗಿ ಪರಿವರ್ತನೆ ಆಗಿ ಬೇಳೂರು ಗೋಪಾಲಕೃಷ್ಣರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಧುಬಂಗಾರಪ್ಪ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಗರಡಿಯಲ್ಲಿ ಪಳಗಿದವರು. ಮಾತ್ರವಲ್ಲ ಅವರ ಪ್ರೀತಿಯ ಮಾನಸ ಪುತ್ರರಾಗಿದ್ದರು’ ಎಂದು ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಪ್ರಮುಖರಾದ ಹಕ್ರೆ ಮಲ್ಲಿಕಾರ್ಜುನ್, ಕಲಗೋಡು ರತ್ನಾಕರ್, ಶ್ವೇತಾ ಬಂಡಿ, ಬಿ.ಜಿ.ನಾಗರಾಜ್, ಹಾಲಗದ್ದೆ ಉಮೇಶ್ ಪ್ರಭಾಕರರಾವ್, ಮಹಾಬಲರಾವ್, ಸಣ್ಣಕ್ಕಿ ಮಂಜು, ಅಶ್ವಿನಿಕುಮಾರ್ ಮತ್ತಿತರರಿದ್ದರು.
ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಮಾತನಾಡಿ, ’ಹೊಸನಗರದಲ್ಲಿ ಅಭಿವೃದ್ಧಿ ನಡೆದಿದ್ದರೆ ಅದು ನನ್ನ ಕಾಲದಲ್ಲಿ. ಬಸ್ ನಿಲ್ದಾಣ ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ನಾನು ಶಾಸಕನಾಗಿದ್ದಾಗ ನಿರ್ಮಾಣವಾಗಿವೆ. ಆದರೆ, ಈಗ ನಾನು ಮಾಡಿದ್ದು ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ನನಗೆ ತಮ್ಮ ಮಧು ಬೇರೆಯಲ್ಲ ನಮ್ಮ ಅಪ್ಪಾಜಿ ಪ್ರೀತಿಗೆ ಪಾತ್ರರಾಗಿದ್ದ ಬೇಳೂರು ಬೇರೆಯಲ್ಲ. ಬೇಳೂರು ಗೋಪಾಲಕೃಷ್ಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ.
–ಗೀತಾ ಶಿವರಾಜ್‌ಕುಮಾರ್