ಶಿವಮೊಗ್ಗ:: ಕರ್ನಾಟಕ ಸರಕಾರವು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ ನೀಡಲು ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲು ರಚಿಸಿರುವ ನೂತನ ಮಾಸಾಶನ ಸಮಿತಿಗೆ ಹಿರಿಯ ಪತ್ರಕರ್ತರೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಕ್ರಾಂತಿದೀಪ ಸಂಪಾದಕ ಎನ್.ಮಂಜುನಾಥ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದಲ್ಲಿ ಪುನರ್ ರಚಿತ ಸಮಿತಿಯನ್ನು ಪ್ರಕಟಿಸಲಾಗಿದೆ. ಸಮಿತಿಯ ಅವಧಿ ಮುಂದಿನ ಎರಡು ವರ್ಷ ಅಥವಾ ಸರಕಾರದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದೆ. ನೂತನ ಸಮಿತಿಯು ಈ ಕೆಳಗಿನಂತಿದೆ
ವಾರ್ತಾಇಲಾಖೆ ಆಯುಕ್ತರು ಅಥವಾ ನಿರ್ದೇಶಕರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸದಸ್ಯರಾಗಿ ಕನ್ನಡ ಪ್ರಭ ಸಂಪಾದಕರಾದ ರವಿಹೆಗಡೆ, ಕ್ರಾಂತಿದೀಪ ಸಂಪಾದಕ ಎನ್.ಮಂಜುನಾಥ್, ಟಿ.ವಿ.೧೮ ವಾಹಿನಿಯ ಸ್ಥಾನಿಕ ಸಂಪಾದಕ ಸಿದ್ದುಕಾಳೋಜಿ, ವಿಶ್ರಾಂತ ಪತ್ರಕರ್ತೆ ಗಾಯಿತ್ರಿನಿವಾಸ್ (ಮಹಿಳಾ ಪ್ರತಿನಿಧಿ)ಹಿರಿಯ ಪತ್ರಕರ್ತ ಎಂ.ಎಸ್.ರಾಜೇಂದ್ರಕುಮಾರ್, ಶಿವಾನಂದ ತಗಡೂರು, ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಾರ್ತಾಇಲಾಖೆ ಕೇಂದ್ರ ಕಚೇರಿಯ ಉಪನಿರ್ದೇಶಕರು ಸದ್ಯರಾಗಿದ್ದಾರೆ.
Show quoted text