ಸೊರಬ: ಬೆಂಗಳೂರಿನಲ್ಲಿ ನೆಲೆಸಿದ ತಾಲೂಕಿನ ಮಧು ಬಂಗಾರಪ್ಪ ಅಭಿಮಾನಿಗಳು ನೂತನ ಸಚಿವರಾದ ಮಧು ಬಂಗಾರಪ್ಪ ಅವರನ್ನು ಸದಾಶಿವ ನಗರದ ನಿವಾಸದಲ್ಲಿ ಭಾನುವಾರ ಸನ್ಮಾನಿಸಿ ಅಭಿನಂದಿಸಿದರು. ವಕೀಲ ಕುಮಾರಸ್ವಾಮಿ ಹೊಸೂರು ಮಾತನಾಡಿ, ಮಧು ಬಂಗಾರಪ್ಪ ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವುದು ಸಂತಸ ನೀಡಿದೆ. ಮಧು ಬಂಗಾರಪ್ಪ ಅವರ ಗೆಲುವಿನಿಂದ ಸೊರಬ ತಾಲೂಕಿನ ಅಭಿವೃದ್ಧಿ ಸೇರಿದಂತೆ ಜಿಲ್ಲೆ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿ ಕಾಣಲಿದೆ ಎಂದರು.
ಎಸ್.ಬಂಗಾರಪ್ಪ ಅವರು ಹಲವು ಯೋಜನೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆಸಿದ ನಾಯಕರಾಗಿದ್ದಾರೆ. ಆ ನಿಟ್ಟಿನ ಹೆಸರು ಗಳಿಸಲು ಮಧು ಬಂಗಾರಪ್ಪ ಅವರಲ್ಲಿಯೂ ಸಾಮರ್ಥ್ಯವಿದ್ದು ರಾಜ್ಯ, ರಾಷ್ಟ್ರ ಮಟ್ಟದ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದರು.
ನೂತನ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನ ಸ್ವೀಕರಿಸಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಶೋಕ್ ನಾಯ್ಕ ನೆಗವಾಡಿ, ದತ್ತತ್ರೇಯ ಬಿದರಗೇರಿ, ಯಶವಂತ ಕುಂದಗಸವಿ, ದೇವರಾಜ ನಿಟ್ಟಕ್ಕಿ, ಅರುಣಕುಮಾರ ಕುಳುಗ, ಕಲ್ಯಾಣಕುಮಾರ ತವನಂದಿ, ಉಮೇಶ್ ಹುಲ್ತಿಕೊಪ್ಪ, ಆಕಾಶ್ ಸಾರೆಕೊಪ್ಪ, ಉಮೇಶ್ ಯಲವಳ್ಳಿ, ಪ್ರೇಮ್ ಕುಮಾರ ಕುಮ್ಮೂರು, ಪ್ರಕಾಶ್ ಸಾರೆಮರೂರು, ನಾಗರಾಜ ಗೆಂಡ್ಲ, ಯುವರಾಜ ಓಟೂರು, ಗಣೇಶ್ ಓಟೂರು,
ವಿನಾಯಕ ಗುಡ್ಡೆಮನೆ, ಮಂಜುನಾಥ ಆನವಟ್ಟಿ ಮತ್ತಿತರರಿದ್ದರು.