Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಹಸಿದವರಿಗೆ ಅನ್ನ ನೀಡುವುದು ನಮ್ಮ ಸರಕಾರದ ದ್ಯೇಯ ,ಯುವನಿಧಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿವಮೊಗ್ಗ ಯಾವ ಸಮಾಜ ಹಸಿದವರಿಗೆ ಅನ್ನಕೊಡುವುದಿಲ್ಲವೊ ಆ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ವಿವೇಕಾನಂದರು ಹೇಳಿದ್ದಾರೆ. ಅವರ ಆಶಯದಂತೆ ನಮ್ಮ ಸರಕಾರ ಗ್ಯಾರಂಟಿಗಳ ಮೂಲಕ ಸಮಾಜವನ್ನು ಸಶಕ್ತಗೊಳಿಸಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ವಿವೇಕಾನಂದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅಡಕೆ ಸಿಂಗಾರ ಅರಳಿ ಸುವ ಮೂಲಕ ಯುವನಿಧಿ ಗ್ಯಾರಂಟಿಗೆ ಚಾಲನೆಗೊಳಿಸಿ ಮಾತನಾಡಿದರು.

ಮಹಿಳೆಯರು, ಬಡವರು, ಆರ್ಥಿಕ ವಾಗಿ ಹಿಂದುಳಿದವರಿಗೆ ಶಕ್ತಿ ನೀಡಲು ಪ್ರಣಾಳಿಕೆಯಲ್ಲಿ ಗ್ಯಾರಂಟಿಗಳನ್ನು ಘೋ ಷಣೆ ಮಾಡಿ ಈಗ ಅವುಗಳನ್ನು ಜಾರಿ ಮಾಡಿದ್ದೇವೆ. ಯುವನಿಧಿ ಯೋಜನೆ ಯಲ್ಲಿ ಹಣ ಕೊಡುವುದು ಮಾತ್ರವಲ್ಲ. ಕೌಶಲ ತರಬೇತಿ ನೀಡಿ ದೇಶ ವಿದೇಶದಲ್ಲಿ ಕೆಲಸ ಸಿಗುವಂತೆ ಮಾಡುತ್ತೇವೆ. ಮಾರು ಕಟ್ಟೆಯಲ್ಲಿ ಎಂತಹ ಉದ್ಯೋಗಗಳಿಗೆ ಬೇಡಿಕೆ ಇದೆಯೋ ಅಂತಹ ತರಬೇತಿ ನೀಡುತ್ತೇವೆ ಎಂದು ಹೇಳಿದರು. ಚುನಾ ವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟಿದ್ದೆವು. ಅದರಲ್ಲಿ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ,ಯುವನಿಧಿ ಯೋಜನೆ ಘೋಷಣೆ ಮಾಡಿದ್ದೆವು. ಈಗ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ರೈತರು ಸಂಕ್ಷದಲ್ಲಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಾಗಿದೆ. ಅವರ ನೆರವಿಗೆ ಸರಕಾರ ನಿಲ್ಲಲಿದೆ ಎಂದರು.
ಸ್ವಾಮಿ ವಿವೇಕಾನಂದರ ಜನ್ಮದಿನ ದಂದು ಯುವದಿನ ಆಚರಣೆ ಮಾಡು ತ್ತಿದ್ದೇವೆ. ೪.೨೦ ಲಕ್ಷ ಯುವಕ ಯುವತಿಯರಿಗೆ ಯುವನಿಧಿ ನೀಡುತ್ತಿ ದ್ದೇವೆ. ಎಲ್ಲರೂ ನೋಂದಾವಣೆ ಮಾಡಿ ಕೊಳ್ಳಬೇಕು. ಎರಡು ವರ್ಷಗಳವರೆಗೆ ಮಾಸಾಶನ ನೀಡುತ್ತೇವೆ. ಬಳಿಕ ನಿಲ್ಲಿಸುತ್ತೇವೆ ಈ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರು ಮಾತನಾಡಿ, ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಸಮ ರ್ಪಿಸಿ ನಿಂತಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡು ಕುವೆಂಪು ನಾಡಿನಲ್ಲಿ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆ ಯುವಕರಿಗೆ ಶಕ್ತಿ ತುಂಬುತ್ತದೆ. ದೇವರು ಕೊಟ್ಟ ಅವಕಾಶವನ್ನು ಬಳಸಿ ಕೊಂಡು ಇಡೀ ದೇಶಕ್ಕೆ ಮಾದರಿಯಾದ ಕೆಲಸಗಳನ್ನು ಮಾಡಿದ್ದೇವೆ. ಯುವ ಜನರು ಉದ್ಯೋಗ ಕೊಡುವ ಕೆಲಸ ಮಾಡಬೇಕು. ಯುವಜನರ ಕೌಶಲ ವೃದ್ಧಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಯುವಜನರು ವಿಶ್ವಮಟ್ಟ ದಲ್ಲಿ ಚಿಂತನೆ ಮಾಡಬೇಕು. ರಾಜ್ಯವನ್ನು ಅಭಿವೃದ್ಧಿಶೀಲ ರಾಜ್ಯವನ್ನು ಮಾಡಲು ಸರಕಾರ ಮುಂದಾಗಿದೆ ಎಂದು ಹೇಳಿದರು.ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಸರಕಾರ ಯುವಕರಿಗೆ ನೀಡುತ್ತಿರುವ ಗೌರವದ ಭಾಗವಾಗಿ ಯುವನಿಧಿ ಕೊಟ್ಟಿದೆ. ವಿವೇಕಾನಂದರ ಜಯಂತಿಯಂದೆ ಯುವಕರಿಗೆ ಆರ್ಥಿಕ ಚೈತನ್ಯ ನೀಡುವುದು ಸಂತೋಷದ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುವಜನರಿಗೆ ಉತ್ತಮ ಯೋಜನೆ ನೀಡುತ್ತಿದ್ದಾರೆ. ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕು. ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಹಾಗೂ ಆಯುರ್ವೇದ ವಿವಿಗೆ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿಡಬೇಕು. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಯುವನಿಧಿ ಲಾಭ ಪಡೆದುಕೊಳ್ಳಬೇಕು. ಯುವಕರಿಗೆ ಕೌಶಲ ತರಬೇತಿ ನೀಡುತ್ತೇವೆ. ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯುವಕರು ನಿರಾಶರಾಗಬಾರದು. ಸ್ಕಿಲ್ ಡೆವೆಲಪ್‌ಮೆಂಟ್ ಡಿಪಾರ್ಟ್‌ಮೆಂಟ್‌ನಿಂದ ಪ್ಲೇಸ್‌ಮೆಂಟ್ ಮಾಡಲಾಗುವುದು ಎಂದರು.ಜಿಲ್ಲಾ ಉಸ್ತುವಾರಿ ಸಚಿವರ ಮಧುಬಂಗಾರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಸಚಿವರಾದ ನಾಗೇಂದ್ರ, ಕೆ.ಜೆ.ಜಾರ್ಜ್, ಡಾ. ಎಂ.ಸಿ.ಸುಧಾಕರ್, ಮಂಕಾಳ್ ವೈದ್ಯ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್, ಶಿವಮೊಗ್ಗ ಶಾಸಕ ಶಾಸಕ ಚೆನ್ನಬಸಪ್ಪ, ಅಧ್ಯಕ್ಷತೆವಹಿಸಿದ್ದರು. ಶಾಸಕರಾದ ಶಾರದಾಪೂರ್ಯನಾಯ್ಕ್, ರಾಜೇಗೌಡ, ಶ್ರೀನಿವಾಸ್, ಭೀಮಣ್ಣ ನಾಯ್ಕ್, ಶಾಂತನಗೌಡ, ಮೇಲ್ಮನೆ ಸದಸ್ಯರಾದ ಡಿ.ಎಸ್.ಅರುಣ್ ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು

.ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಸರಕಾರ ಯುವಕರಿಗೆ ನೀಡುತ್ತಿರುವ ಗೌರವದ ಭಾಗವಾಗಿ ಯುವನಿಧಿ ಕೊಟ್ಟಿದೆ. ವಿವೇಕಾನಂದರ ಜಯಂತಿಯಂದೆ ಯುವಕರಿಗೆ ಆರ್ಥಿಕ ಚೈತನ್ಯ ನೀಡುವುದು ಸಂತೋಷದ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುವಜನರಿಗೆ ಉತ್ತಮ ಯೋಜನೆ ನೀಡುತ್ತಿದ್ದಾರೆ. ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕು. ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಹಾಗೂ ಆಯುರ್ವೇದ ವಿವಿಗೆ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿಡಬೇಕು. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಯುವನಿಧಿ ಲಾಭ ಪಡೆದುಕೊಳ್ಳಬೇಕು. ಯುವಕರಿಗೆ ಕೌಶಲ ತರಬೇತಿ ನೀಡುತ್ತೇವೆ. ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯುವಕರು ನಿರಾಶರಾಗಬಾರದು. ಸ್ಕಿಲ್ ಡೆವೆಲಪ್‌ಮೆಂಟ್ ಡಿಪಾರ್ಟ್‌ಮೆಂಟ್‌ನಿಂದ ಪ್ಲೇಸ್‌ಮೆಂಟ್ ಮಾಡಲಾಗುವುದು ಎಂದರು.ಜಿಲ್ಲಾ ಉಸ್ತುವಾರಿ ಸಚಿವರ ಮಧುಬಂಗಾರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಸಚಿವರಾದ ನಾಗೇಂದ್ರ, ಕೆ.ಜೆ.ಜಾರ್ಜ್, ಡಾ. ಎಂ.ಸಿ.ಸುಧಾಕರ್, ಮಂಕಾಳ್ ವೈದ್ಯ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್, ಶಿವಮೊಗ್ಗ ಶಾಸಕ ಶಾಸಕ ಚೆನ್ನಬಸಪ್ಪ, ಅಧ್ಯಕ್ಷತೆವಹಿಸಿದ್ದರು. ಶಾಸಕರಾದ ಶಾರದಾಪೂರ್ಯನಾಯ್ಕ್, ರಾಜೇಗೌಡ, ಶ್ರೀನಿವಾಸ್, ಭೀಮಣ್ಣ ನಾಯ್ಕ್, ಶಾಂತನಗೌಡ, ಮೇಲ್ಮನೆ ಸದಸ್ಯರಾದ ಡಿ.ಎಸ್.ಅರುಣ್ ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು.
ಅಂಬೇಡ್ಕರ್, ಕುವೆಂಪು ಆಶಯದ ಸರಕಾರ

ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣವಾಗಬೇಕು. ಸಮಾಜದಲ್ಲಿರುವ ಎಲ್ಲ ಸಮುದಾಯಕ್ಕೂ ಆರ್ಥಿಕ ಶಕ್ತಿ ನೀಡಬೇಕು. ರಾಜಕೀಯನ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕು. ಅದು ಉಳಿಯಬೇಕೆಂದರೆ ಸಾಮಾಜಿಕ, ಆರ್ಥಿಕ ಶಕ್ತಿ ಬೇಕು. ಅಂಬೇಡ್ಕರ್ ಆಶಯದಂತೆ ನಡೆಯುವ ನಾವು ನಡೆಯುತ್ತೇವೆ. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಅವರ ಕನಸುಗಳನ್ನು ಸಾಕಾರಗೊಳಿಸಬೇಕು. ಇಡೀ ದೇಶದಲ್ಲಿ ಇದು ಆಗಬೇಕು ಇದು ನಮ್ಮ ಸರಕಾರದ ಆಶಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಫ್ರೀಡಂ ಪಾರ್ಕಿಗೆ ಅಲ್ಲಮ ಪ್ರಭು ಅವರ ಹೆಸರನ್ನು ಇಡಬೇಕು ಎಂದು ಮಧು ಬಂಗಾರಪ್ಪ ಅವರು ಮನವಿ ಮಾಡಿದ್ದಾರೆ. ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭಭು ಈ ಜಿಲ್ಲೆಯವರು. ಅವರ ಹೆಸರನ್ನು ಫ್ರೀಡಂ ಪಾರ್ಕಿಗೆ ಇಡುವುದು ಸೂಕ್ತ.

-ಸಿದ್ದರಾಮಯ್ಯ ,ಮುಖ್ಯಮಂತ್ರಿ

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನೀವು ಮುನ್ನಡೆಯಿರಿ, ಯುವಕರು ಹೋರಾಟ ಮಾಡಬೇಕು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಯುವಕರು ಆದರ್ಶವಾಗಿ ಬದುಕಬೇಕು
ಡಿ.ಕೆ.ಶಿವಕುಮಾರ್,
ಉಪ ಮುಖ್ಯಮಂತ್ರಿ


ಶಿವಮೊಗ್ಗದ್ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಅವರ ಹೆಸರಿಡಬೇಕು. ಜಿಲ್ಲೆಯ ಶರಾವತಿ ಯೋಜನೆಯ ಸಂತ್ರಸ್ತರ ಭೂಮಿ ಸiಸ್ಯೆ ಬಗೆಹರಿಸಬೇಕು. ದಶಕಗಳಿಂದ ಈ ಸಮಸ್ಯೆ ಕಾಡುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸುವಲ್ಲಿ ನಮ್ಮ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು.

-ಮಧುಬಂಗಾರಪ್ಪ, ಸಚಿವ

ಮೋದಿ ಪರ ಜೈಕಾರ
ಯುವನಿಧಿ ಕಾರ್ಯಕ್ರಮಕ್ಕೆ ಬಂದಿದ್ದ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಪರ ಜೈಕಾರ ಹಾಕಿದ ಪ್ರಸಂಗ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಗಿತ್ತು. ಈ ಸಂದರ್ಭದಲ್ಲಿ ನೆರೆದಿದ್ದ ಕೆಲ ವಿದ್ಯಾರ್ಥಿಗಳು, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಮತ್ತು ಜೈ ಶ್ರೀರಾಂ ಎಂಬ ಘೋಷಣೆಗಳನ್ನು ಕೂಗಿದರು. ಇದು ಆಕಸ್ಮಿಕ ಘಟನೆಯಾಗಿರದೆ, ಪೂರ್ವನಿರ್ಧರಿತವಾದಂತೆ ತೋರಿತು. ಹಠಾತ್ ಘೋಷಣೆ ಯಿಂದ ಗಲಿಬಿಲಿಯಾದ ವಾತಾವರಣವನ್ನು ಪೊಲೀಸರು ತಿಳಿಗೊಳಿಸಿದರು.


ಹರಿದು ಬಂದ ಯುವಸಮೂಹ:
ಯುವನಿಧಿ ಕಾರ್ಯಕ್ರಮಕ್ಕೆ ಆಯೋಜಕರು ಒಂದೂವರೆ ಲಕ್ಷ ಜನರು ಸೇರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿತ್ತು. ಬಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನೆರೆಯ ಜಿಲ್ಲೆಗಳಿಂದಲೂ ಭಾರೀ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಪೊಲೀಸರು ಜನರನ್ನು ನಿಯಂತ್ರಿಸಲು ಹರ ಸಾಹಸಪಡಬೇಕಾಯಿತು.

Ad Widget

Related posts

ಶಿವಮೊಗ್ಗ ರಂಗಾಯಣದಲ್ಲಿ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭ: ಸಂದೇಶ ಜವಳಿ

Malenadu Mirror Desk

ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಈಗ ಹಂಗಾಮಿ ಸ್ಪೀಕರ್

Maha

ಪುರದಾಳು ಪಂಚಾಯಿತಿಯಲ್ಲಿ ಗುರುವಂದನೆ ಕಾರ್ಯಕ್ರಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.